ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರಿದ ಜಮ್ಮು ಕಾಶ್ಮೀರದ ಐತಿಹಾಸಿಕ ರೈಲ್ವೆ ನಿಲ್ದಾಣ

124 ವರ್ಷಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಪ್ರಾರಂಭವಾದ ಬಿಕ್ರಂ ಚೌಕ್ ರೈಲ್ವೆ ನಿಲ್ದಾಣ, ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದು. ಈ ನಿಲ್ದಾಣ ಇದೀಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.
- ನವ್ಯಶ್ರೀ ಶೆಟ್ಟಿ
ಅದೆಷ್ಟೋ ಜನ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶ್ಮೀರದ ಸುಂದರ ಕಣಿವೆಗಳಿಗೆ ಭೇಟಿ ನೀಡಬೇಕು ಎಂದು ಕನಸು ಕಂಡಿರುತ್ತಾರೆ. ಇನ್ನೂ ಹಲವರು ಭೇಟಿ ನೀಡಿರುತ್ತಾರೆ. ಕಣಿವೆಗಳ ಜೊತೆಗೆ ಹಲವು ಸುಂದರ ಪ್ರವಾಸಿ ತಾಣಗಳಿಂದ ಕಾಶ್ಮೀರ ಪ್ರಸಿದ್ದಿ ಪಡೆದಿದೆ. ಆದರೆ ಇದೀಗ ಹೊಸದಾದ ಸಂಗತಿಗೆ ಕಾಶ್ಮೀರ ಸುದ್ದಿಯಾಗಿದೆ.
ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣ ಕಾಶ್ಮೀರದಲ್ಲಿದೆ. ಅದು ಬಿಕ್ರಂ ಚೌಕ್ ರೈಲು ನಿಲ್ದಾಣ (Bikram chowk Railway station). 124 ವರ್ಷಗಳ ಹಿಂದೆ ಸ್ಥಾಪಿತವಾದ ಈ ರೈಲು ನಿಲ್ದಾಣ ಇದೀಗ ವಿಶ್ವ ಪಾರಂಪರಿಕ ತಾಣಗಳ (world heritage site) ಪಟ್ಟಿಗೆ ಸೇರ್ಪಡೆಯಾಗಿದೆ.

ಭಾರತದ ಅತ್ಯಂತ ಹಳೆಯ ರೈಲ್ವೆ ನಿಲ್ದಾಣಗಳಲ್ಲಿ ಒಂದು
ಬಿಕ್ರಂ ಚೌಕ್ ರೈಲ್ವೆ ನಿಲ್ದಾಣ ಭಾರತದ ಅತ್ಯಂತ ಹಳೆಯ ರೈಲ್ವೆ ನಿಲ್ದಾಣಗಳಲ್ಲಿ ಒಂದು. ಈ ರೈಲು ನಿಲ್ದಾಣ ಜಮ್ಮು(Jammu) ಮತ್ತು ಸಿಯಾಲ್ಕೊಟ್(sialkot) ಸಂಪರ್ಕಿಸುವ ಕೊನೆಯ ನಿಲ್ದಾಣ. 43 ಕಿಮೀ ಉದ್ದ ರೈಲು ಹಳಿಗಳನ್ನು ಒಳಗೊಂಡಿರುವ ಈ ನಿಲ್ದಾಣ ಆರಂಭವಾಗಿದ್ದು, ಸುಮಾರು 1897 ವೇಳೆಗೆ ಮಹಾರಾಜ ಪ್ರತಾಪ್ ಸಿಂಗ್ ಕಾಲದಲ್ಲಿ.
ಹಿಂದಿನ ವಜಿರಾಬಾಧ್ (vazirabadh), (ಪ್ರಸ್ತುತ ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯ) ಪಂಜಾಬ್ ಹಾಗೂ ಸಿಯಲ್ಕೊಟ್ ಸಂಪರ್ಕಿಸುವ ರೈಲು ಮಾರ್ಗ ಹೊಂದಿರುವ ರೈಲು ನಿಲ್ದಾಣವಿದು.
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ರೈಲು ನಿಲ್ದಾಣ

124 ವರ್ಷಗಳ ಹಿಂದಿನ ಈ ರೈಲು ನಿಲ್ದಾಣ ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಯಿತು. 1947 ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ವಿಭಜನೆಯಾಯಿತು. ಪಾಕಿಸ್ತಾನವು ಬ್ರಿಟಿಷರಿಂದ ವಾಯುವ್ಯ ರೈಲ್ವೆಯ ಹಕ್ಕನ್ನು ಪಡೆದುಕೊಂಡಿತು. ಬಳಿಕ ಪಾಕಿಸ್ತಾನ ಈ ರೈಲು ನಿಲ್ದಾಣದಿಂದ ರೈಲು ಸೇವೆಯನ್ನು ಸ್ಥಗಿತಗೊಳಿಸಿತು.
ನೀವುಇದನ್ನುಇಷ್ಟಪಡಬಹುದು: ಹೆಸರಿಲ್ಲದ ರೈಲ್ವೇ ನಿಲ್ದಾಣವೊಂದು ಭಾರತದಲ್ಲಿದೆ
ಜಮ್ಮು ಮತ್ತು ಸಿಯಾಲ್ಕೊಟ್ ಮಾರ್ಗ ಸಂಪೂರ್ಣ ನಿರುಪಯುಕ್ತ ವಾಯಿತು. ಬಿಕ್ರಂ ಚೌಕ್ ನಿಲ್ದಾಣ ಕೂಡ ಅದೇ ಪಟ್ಟಿಗೆ ಸೇರಿತು . ಬಿಕ್ರಂ ಚೌಕ್ ರೈಲು ನಿಲ್ದಾಣದಲ್ಲಿ ರೈಲುಗಳ ಓಡಾಟ ಸ್ತಬ್ಧವಾಯಿತು.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಬಿಕ್ರಂ ಚೌಕ್ ನಿಲ್ದಾಣ
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಈ ರೈಲು ನಿಲ್ದಾಣ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾಗಿದೆ. ಈ ಕಾರಣದಿಂದಾಗಿ ಅಲ್ಲಿನ ಆಡಳಿತ, 124 ವರ್ಷಗಳ ಹಿಂದೆಯಿದ್ದ ರೈಲು ನಿಲ್ದಾಣದ ಸೊಬಗನ್ನು ಮತ್ತೆ ಮರು ಸೃಷ್ಟಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ಕೂಡ ಭರದಿಂದ ಸಾಗಿದೆ. ಶೀಘ್ರದಲ್ಲೇ ಐತಿಹಾಸಿಕ ರೈಲು ನಿಲ್ದಾಣದ ಭವ್ಯತೆ ಪುನರ್ ಸ್ಥಾಪಿತವಾಗಲಿದೆ.

ಜಮ್ಮು ಕಾಶ್ಮೀರದ ಆಡಳಿತ ಈಗಾಗಲೇ ಈ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮಾಡುವ ಬಗ್ಗೆ ಘೋಷಿಸಿದೆ. ಹಿಂದಿನ ಸೊಬಗು ಮರಳಿ ಬಂದರೂ ಕೂಡ ಇಲ್ಲಿ ರೈಲುಗಳು ಚಲಿಸುವುದಿಲ್ಲ.ಆದರೆ ಪುನರ್ ಸ್ಥಾಪಿತವಾದ ನಿಲ್ದಾಣ ಭಾರತದ ಐತಿಹಾಸಿಕತೆ ಒಂದು ಸುಂದರ ನೋಟವಾಗಿ ಕಾಣಿಸಲಿದೆ. ಪ್ರವಾಸಿಗರನ್ನು ಹಳೆಯ ಕಾಲದ ಸೊಬಗಿನ ಮೂಲಕ ಆಕರ್ಷಿಸಲಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.