ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಹೆಸರಿಲ್ಲದ ರೈಲ್ವೇ ನಿಲ್ದಾಣವೊಂದು ಭಾರತದಲ್ಲಿದೆ

ನಾವು ಯಾವುದಾದರೊಂದು ಊರಿಗೆ ಹೋಗಬೇಕಾದರೆ ಆ ಊರಿನ ನಿಲ್ದಾಣದ ಹೆಸರು ಕೇಳಿಕೊಂಡು, ಹುಡುಕಿಕೊಂಡು ಹೋಗುವುದು ಸಹಜ. ಆದರೆ ಹೆಸರೇ ಇಲ್ಲದ ರೈಲ್ವೇ ನಿಲ್ದಾಣವೊಂದು ಭಾರತದಲ್ಲಿದೆ. ಈ ಊರಿಗೆ ಹೋಗುವ ಜನರು ಆ ನಿಲ್ದಾಣವನ್ನು ಕರೆಯುವುದು “ಹೆಸರಿಲ್ಲದ ರೈಲು ನಿಲ್ದಾಣ”ಎಂದು. ಈ ನಿಲ್ದಾಣ ನಾಮಫಲಕ ಕಳೆದುಕೊಂಡ ರೋಚಕ ಕಥೆ ಇದು.

  • ಚೈತ್ರಾ ರಾವ್ ಉಡುಪಿ

ಈ ಹೆಸರಿಲ್ಲದ ರೈಲು ನಿಲ್ದಾಣವಿರುವುದು ಪಶ್ಚಿಮಬಂಗಾಳದ ಆದ್ರಾ ರೈಲು ಭಾಗದಲ್ಲಿ. ಬಂಕುರಾ – ಮಾಸ ಗ್ರಾಮ್ ರೈಲು ಮಾರ್ಗದಲ್ಲಿ ಈ ನಿಲ್ದಾಣ ಬರುತ್ತದೆ. ಇಂದಿಗೂ ರೈಲ್ವೇ ನಿಲ್ದಾಣದಲ್ಲಿ ಹಳದಿ ಬಣ್ಣದ ನಾಮಫಲಕ ಖಾಲಿ ಖಾಲಿಯಾಗಿಯೇ ಉಳಿದಿದೆ.

ಈ ರೈಲು ನಿಲ್ದಾಣ ರೈನಾ ಮತ್ತು ರೈನಾಗರ್ ಎಂಬ ಎರಡು ಗ್ರಾಮಗಳ ನಡುವೆ ಬರುತ್ತದೆ. 2008ರಲ್ಲಿ ಈ ರೈಲು ನಿಲ್ದಾಣವನ್ನು ನಿರ್ಮಿಸಲಾಯಿತು. ಮೊದಲು ಆ ನಿಲ್ದಾಣಕ್ಕೆ ರೈನಾಗರ್ ಗ್ರಾಮದ ಹೆಸರಿಡಲಾಯಿತು.

ಆದರೆ ರೈನಾ ಗ್ರಾಮದ ಜನ ನಿಲ್ದಾಣಕ್ಕೆ ರೈನಾಗರ್ ಗ್ರಾಮದ ಹೆಸರು ಇಟ್ಟಿದ್ದನ್ನು ಒಪ್ಪಲಿಲ್ಲ. ತಮ್ಮ ಊರಿನ ಹೆಸರಿಡಬೇಕೆಂದು ಗಲಾಟೆಯನ್ನು ಮಾಡಿದರು. ನಂತರ ಈ ಊರಿನ ಹೆಸರಿಡಲು ನಿಶ್ಚಯಿಸಿದಾಗ ರೈನಾಗರ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.

ರೈನಾ ಗ್ರಾಮದ ಜನರು ಈ ನಿಲ್ದಾಣಕ್ಕೆ ‘ರೈನಾ ರೈಲ್ವೇ ನಿಲ್ದಾಣ’ ಎಂದು ಕರೆಯುತ್ತಾರೆ. ಹಾಗೆ ರೈನಾಗಾರ್ ಗ್ರಾಮದ ಜನರು ‘ರೈನಾಗರ್ ರೈಲ್ವೇ ನಿಲ್ದಾಣ’ವೆಂದು ಕರೆಯುತ್ತಾರೆ. ಆದರೆ ಪರ ಊರುಗಳಿಂದ ಬರುವ ಜನರು ಮಾತ್ರ ‘ಹೆಸರಿಲ್ಲದ ರೈಲು ನಿಲ್ದಾಣ’ ಎಂದೇ ಇದನ್ನು ಗುರುತಿಸುತ್ತಾರೆ. ಯಾಕೆಂದರೆ ಇಂದಿಗೂ ಅಲ್ಲಿ ಫ್ಲಾಟ್ ಫಾರ್ಮನ ಎರಡೂ ಬದಿಯಲ್ಲಿರುವ ಹಳದಿಬಣ್ಣದ ಖಾಲಿ ಸೈನ್ ಬೋರ್ಡ್ ಎರಡು ಗ್ರಾಮಗಳ ಸ್ಥಳೀಯರ ನಡುವಿನ ಜಗಳಕ್ಕೆ ಸಾಕ್ಷಿಯಾಗಿದೆ.

ಹಾಗಾಗಿ ಬೇರೆ ಊರಿನಿಂದ ಬರುವ ಪ್ರಯಾಣಿಕರಿಗೆ ಈ ಊರಿನ ರೈಲ್ವೇ ನಿಲ್ದಾಣವನ್ನು ಗುರುತಿಸುವುದು ಕಷ್ಟವಾಗಿದೆ. ಕೆಲವೊಮ್ಮೆ ಯಾವ ರೈಲು ನಿಲ್ದಾಣಕ್ಕೆ ಬಂದಿದ್ದೇವೆ ಎಂಬುದೇ ಗೊಂದಲದ ಪರಿಸ್ಥಿತಿಗೆ ಪ್ರಯಾಣಿಯಕರನ್ನು ತಂದೊಡ್ಡುತ್ತದೆ.

ಅಪ್ಪಿತಪ್ಪಿ ಪ್ರಯಾಣಿಕರು ರೈನಾ ಗ್ರಾಮಸ್ಥರ ಹತ್ತಿರ ರೈನಾಗರ್ ರೈಲು ನಿಲ್ದಾಣಕ್ಕೆ ಹೇಗೆ ಹೋಗುವುದು? ಎಂದು ಕೇಳಿದರೆ ಅಲ್ಲಿನ ಸ್ಥಳೀಯರು ಜಗಳಕ್ಕೆ ಬಂದುಬಿಡುತ್ತಾರೆ. ಹಾಗೇ ರೈನಾಗರ್ ಗ್ರಾಮಸ್ಥರ ಬಳಿ ರೈನಾ ರೈಲು ನಿಲ್ದಾಣ ಎಲ್ಲಿ? ಎಂದು ಕೇಳಿದರೆ ಜಗಳವೇ ಜಗಳ.

ನೀವುಇದನ್ನುಇಷ್ಟಪಡಬಹುದು: ಬೆಂಗಳೂರಿನಲ್ಲಿ ಭಾರತದ ಪ್ರಥಮ ಸುರಂಗ ಅಕ್ವೇರಿಯಂ

ಟಿಕೇಟ್ ಹೇಗೆ?

ಈ ಊರಿಗೆ ಬರುವ ಪ್ರಯಾಣಿಕರಿಗೆ ಇಂದಿಗೂ ರೈಲು ನಿಲ್ದಾಣದ ಹಳೇಯ ಹೆಸರಾದ ರೈನಾಗರ್ ಎಂದೇ ಟಿಕೇಟ್ ನೀಡಲಾಗುತ್ತದೆ. ಈ ಟಿಕೇಟ್ ವಿಷಯದಲ್ಲೂ ರೈನಾ ಗ್ರಾಮದ ಜನ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಟಿಕೇಟ್ ನೀಡುವಾಗ ರೈನಾಗರ್ ರೈಲುನಿಲ್ದಾಣಕ್ಕೊಂದು ಟಿಕೇಟ್ ಎಂದೇ ಕೊಡುತ್ತಾರೆ.

ಎರಡು ಗ್ರಾಮದ ವಿವಾದ ತಣ್ಣಗಾಗಿಸಲು ರೈಲ್ವೇ ಇಲಾಖೆ ಎರಡು ಗ್ರಾಮಗಳ ಹೆಸರೇ ಬೇಡವೆಂದು ಇಲ್ಲಿನ ಎಲ್ಲಾ ನಾಮಫಲಕಗಳನ್ನು ಈ ಗಲಾಟೆಯಿಂದಾಗಿ ಅಳಿಸಿಹಾಕಿದೆ.  ರೈಲ್ವೇ ಮಂಡಳಿ ನಾಮಫಲಕದ ನಿರ್ಧಾರವನ್ನು ಈ ಎರಡು ಗ್ರಾಮಗಳಿಗೇ ಬಿಟ್ಟುಬಿಟ್ಟಿದ್ದಾರೆ. ಇಂದಿಗೂ ಖಾಲಿ ಹಳದಿ ಬೋರ್ಡನ್ನು ನಾವಿಲ್ಲಿ ಕಾಣಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button