ಕಾರು ಟೂರುದೂರ ತೀರ ಯಾನವಿಂಗಡಿಸದ

ಹೆಮ್ಮೆಯ ಹಂಪಿಗೊಂದು ಇರಲಿ ನಿಮ್ಮ ಭೇಟಿ

ಎಂದಿನಂತೆ ಅಂದು ಕೂಡ ಇತಿಹಾಸದ ಉಪನ್ಯಾಸಕರು( History lecturer)ಪಾಠ ಮಾಡಲೆಂದು ತರಗತಿಗೆ ಬಂದಿದ್ದರು.. ಬಂದವರೇ ಎಂದಿಗೂ ಮರೆಯಲಾಗದ ಸಾಮ್ರಾಜ್ಯ ಎಂದರೆ ಅದು ವಿಜಯನಗರ ಸಾಮ್ರಾಜ್ಯ ( Vijayanagara Empire )ಎಂದು ಪಾಠವನ್ನು ಆರಂಭಿಸಿಯೇ ಬಿಟ್ಟರು.ಕಲೆ( Art), ಸಾಹಿತ್ಯ( Literature ),ಶಿಲ್ಪಕಲೆ, ಸಂಗೀತ, ಸಂಸ್ಕೃತಿಯ( Culture )ನೆಲೆಬೀಡು. ಭವ್ಯವಾದ ಅರಮನೆಗಳು(Palace), ಅದ್ಭುತವಾದ ದೇವಾಲಯಗಳು( Temple ), ಬೃಹತ್ ಕೋಟೆಗಳು(Fort), ಸ್ನಾನಗೃಹಗಳು, ಮಾರುಕಟ್ಟೆಗಳು, ಜಲಚರಗಳು, ಮಂಟಪಗಳು, ರಾಜಮನೆತನದ ಆನೆಗಳಿಗೆ ಲಾಯಗಳು ಮತ್ತು ನಾಜೂಕಾಗಿ ಕೆತ್ತಿದ ಕಂಬಗಳು ಇದ್ದವು. ಈ ಸಾಮ್ರಾಜ್ಯದಲ್ಲಿ ವಜ್ರಗಳು, ಮುತ್ತುಗಳು, ಕುದುರೆಗಳು, ರೇಷ್ಮೆ ಮತ್ತು ಬ್ರೊಕೇಡ್‌ಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳ ಕಾಲವಾಗಿತ್ತು.

ಅಂತಹ ಭವ್ಯವಾದ ಸಾಮ್ರಾಜ್ಯದ ರಾಜಧಾನಿಯು ನಮ್ಮ ಕರ್ನಾಟಕದ ವಿಜಯನಗರ ಜಿಲ್ಲೆಯ( Karnataka, Vijayanagara district )ಹೊಸಪೇಟೆಯ ತುಂಗಾ ಭದ್ರ ನದಿಯ ದಡದಲ್ಲಿರುವ( Hospet,Tungabhadra river ) ಹಂಪಿಯಾಗಿತ್ತು (Hampi) 1336 ರಿಂದ 1565ರ ವರೆಗೆ ವಿಜಯ ನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯ ಮೊದಲ ಹೆಸರು ಪಂಪಾ.(pampa) ಅಂದರೆ ತುಂಗಾ ಭದ್ರ ನದಿ ಎಂದರ್ಥ.ವರ್ಷಗಳು ಕಳೆದಂತೆ ವಿರೂಪಾಕ್ಷಪುರ ಎಂದು( Virupaksha Temple, Hampi) ಕರೆಯುತ್ತಿದ್ದರು.ಗತವೈಭವದ ಇತಿಹಾಸವನ್ನು ಹೊಂದಿರುವ ಹೆಮ್ಮೆಯ ಹಂಪಿಯನ್ನು ಯುನೆಸ್ಕೋ( UNESCO )ವಿಶ್ವ ಪರಂಪರೆಯ ತಾಣ ಎಂದು ಘೋಷಣೆ ಮಾಡಿದೆ.ಈ ಐತಿಹಾಸಿಕ ಪಟ್ಟಣವು ” ವಿಶ್ವದ ಅತಿ ದೊಡ್ಡ ಬಯಲು ಮ್ಯೂಸಿಯಂ ” ಆಗಿದೆ ಮತ್ತು ಸುಮಾರು 29 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.

Must visit places in Hampi

ವಿಜಯನಗರ ಸಾಮ್ರಾಜ್ಯವು ತನ್ನ ಉತ್ತುಂಗದಲ್ಲಿ ಬಹಳ ಸಮೃದ್ಧವಾಗಿತ್ತು ಮತ್ತು ಲಿಸ್ಬನ್‌ಗಿಂತ ಭವ್ಯವಾದ ಅರಮನೆಗಳನ್ನು ಹೊಂದಿರುವ ರೋಮ್‌ಗಿಂತ ದೊಡ್ಡದಾಗಿದೆ ಎಂದು ನಂಬಲಾಗಿದೆ. ವಿಜಯನಗರ ಸಾಮ್ರಾಜ್ಯದ( Vijayanagara empire )ಪ್ರಸಿದ್ಧ ರಾಜ,( Famous king)ಅತ್ಯುತ್ತಮ ಆಡಳಿತಗರ ಎನಿಸಿಕೊಂಡಿರುವ ಕೃಷ್ಣ ದೇವರಾಯನು( Krishnadevaraya)ಅವನ ಕಾಲದಲ್ಲಿ ಹಂಪಿಯ (Hampi)ಬೀದಿಯಲ್ಲಿ ವಜ್ರ ಆಭರಣಗಳನ್ನು ಅಳೆದು ತೂಗಿ ಮಾರುತ್ತಿದ್ದನು.ಅವನ ರಾಜ್ಯಭಾರ ಮುಗಿದ ನಂತರ ಸಾಮ್ರಾಜ್ಯ ವು ನಿಧಾನವಾಗಿ ಪ್ರಾಬಲ್ಯ ಕಳೆದುಕೊಳ್ಳುತ್ತಾ ಬಂದಿದೆ. ನಂತರ ತಾಳಿಕೋಟೆ ಕದನದಲ್ಲಿ ಮುಸ್ಲಿಂರ ಆಕ್ರಮಣದಿಂದ ಅಂತ್ಯಗೊಂಡಿತು.

ವಿರೂಪಾಕ್ಷ ದೇವಾಲಯ( Virupaksha Temple ), ಹಜರಾಮರ ದೇವಾಲಯ ( Hazara Rama Temple )ವಿಶ್ವ ವಿಖ್ಯಾತ ಕಲ್ಲಿನ ರಥ( Stone chariot),ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ(Saasivekaalu Ganesha),ಉಗ್ರ ನರಸಿಂಹ ( Ugra Narasimha), ಕಮಲ್ ಮಹಲ್( Kamal mahal),ಬಡವಿ ಲಿಂಗ( Shree Badavilinga Gudi) ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ನೋಡಬಹುದಾಗಿದೆ.

Must visit places in Hampi

ನೀವು ಇದನ್ನೂ ಇಷ್ಟ ಪಡಬಹುದು: ಬೇಸಿಗೆಯಲ್ಲಿ ನಿಮ್ಮ ಕಣ್ಮನ ಸೆಳೆಯುವ ದಕ್ಷಿಣ ಭಾರತದ ಅತ್ಯಂತ ಪ್ರಶಾಂತ ಸ್ಥಳಗಳು

ವಿರೂಪಾಕ್ಷ ದೇವಾಲಯವು( Virupaksha Temple)ಶಿವನಿಗೆ( Lord shiva )ಸಮರ್ಪಿತವಾಗಿದೆ. ರಾಜ ದೇವರಾಯ II ರ ಅಡಿಯಲ್ಲಿ( 2nd devaraya)ದಂಡನಾಯಕನಾಗಿದ್ದ ಲಕ್ಕಣ ದಂಡೇಶನ ಸಹಾಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿ( Hampi) ವಿರೂಪಾಕ್ಷ ದೇವಾಲಯವು ಹಂಪಿಯ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ವೈಭವಕ್ಕೆ ಸಾಕ್ಷಿಯಾಗಿದೆ. ಇದನ್ನು ಪಂಪಾವತಿ( Pampavati) ದೇವಾಲಯ ಎಂದು ಕರೆಯಲಾಗುತ್ತದೆ..

ಬಡವಿ ಲಿಂಗ ( Badavilinga) 9 ಅಡಿ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ನಾವು ಇದನ್ನು ನೋಡಬಹುದು . ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ್ ಶಿವನ 3 ನೇತ್ರಗಳನ್ನು ಪ್ರತಿನಿಧಿಸುತ್ತದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೇನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆ ಪ್ರಕಾರ, ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎನ್ನಲಾಗುತ್ತದೆ.

Must visit places in Hampi

ಕಲ್ಲಿನ ರಥವು ( Stone chariot)ಮಧ್ಯ ಕರ್ನಾಟಕದ ಹಂಪಿಯಲ್ಲಿರುವ ವಿಜಯ ವಿಠ್ಠಲ ದೇವಾಲಯದ( Hampi )ಮುಂಭಾಗದಲ್ಲಿರುವ ಒಂದು ಸ್ಮಾರಕವಾಗಿದೆ. ವಿಷ್ಣುವಿನ ಅಧಿಕೃತ ವಾಹನವಾದ ಗರುಡನಿಗೆ ಅರ್ಪಿತವಾದ ದೇವಾಲಯವಾಗಿದೆ. ಹಂಪಿಯಲ್ಲಿನ ಕಲ್ಲಿನ ರಥವು ಭಾರತದ ಮೂರು ಜನಪ್ರಿಯ ಕಲ್ಲಿನ ರಥಗಳಲ್ಲಿ ಒಂದಾಗಿದೆ. ದ್ರಾವಿಡ ಶೈಲಿಯಲ್ಲಿ(Dravidian Style )ನಿರ್ಮಿಸಲಾಗಿರುವ ರಥದಲ್ಲಿ ಪೌರಾಣಿಕ ಯುದ್ಧದ ದೃಶ್ಯಗಳನ್ನು ಚಿತ್ರಿಸುವ ಕೆತ್ತನೆಗಳಿವೆ. ಲಕ್ಷ್ಮಿ ನರಸಿಂಹ ( Lakshmi narasimha )ಮೂರ್ತಿಯು ಹಂಪಿ ಪಟ್ಟಣದಲ್ಲಿ ಕಂಡುಬರುವ ಅತ್ಯಂತ ಭವ್ಯವಾದ ಶಿಲ್ಪಗಳಲ್ಲಿ ಒಂದಾಗಿದೆ. ಹಂಪಿಯಲ್ಲಿರುವ ಅತಿ ದೊಡ್ಡ ಏಕಶಿಲಾ ಮೂರ್ತಿ ಎಂಬುದು ಶಿಲ್ಪದ ವಿಶೇಷತೆಯಾಗಿದೆ.

Must visit places in Hampi

ಹಂಪಿಯು ಎಲ್ಲ ಕಾಲದಲ್ಲಿಯೂ ಪ್ರವಾಸಿ ತಾಣವಾಗಿದೆ.ಬಿಸಿಲು, ಮಳೆ, ಚಳಿ ಏನೇ ಇರಲಿ ಬಂದವರಿಗೆ ಅದೆಲ್ಲವನ್ನು ಮರೆಸುವ ಅದ್ಭುತ ಶಕ್ತಿ ಹಂಪಿಗಿದೆ ಎಂದರೂ ತಪ್ಪಾಗಲಾರದು..ಇಷ್ಟೆಲ್ಲ ಇತಿಹಾಸ ಹೊಂದಿರುವ ಸ್ಥಳಕ್ಕೆ ನೀವೊಮ್ಮೆ ಭೇಟಿ ನೀಡಿ ಅದರ ಅನುಭವವನ್ನು ಪಡೆದುಕೊಳ್ಳಿ..

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button