ವಯನಾಡ್ ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು
ಕೇರಳವು(Kerala) ಪ್ರಕೃತಿಯಿಂದ ಆಶೀರ್ವಾದ ಪಡೆದಿದೆ ಎಂದು ಹೇಳಿದರೆ ತಪ್ಪಿಲ್ಲ. ಸುಂದರ ಕಡಲ ತೀರಗಳು, ಭೋರ್ಗರೆವ ಜಲಪಾತಗಳು, ಚಾರಣಕ್ಕೆ ಇದ್ದ ಬೆಟ್ಟ ಗುಡ್ಡಗಳು ಶಿಖರಗಳು, ನದಿ ತೀರಗಳು,ಅಭಯಾರಣ್ಯ, ಗಿರಿಧಾಮಗಳು ಇಷ್ಟೆಲ್ಲ ಹೊಂದಿರುವ ಕೇರಳವು ಅತ್ಯುತ್ತಮ ಪ್ರವಾಸಿತಾಣಗಳಿಗೆ ಪ್ರಸಿದ್ಧಿ ಪಡೆದಿದೆ.
ಕೇರಳದ ಹಸಿರು ಸ್ವರ್ಗವಾದ ವಯನಾಡ್(Wayanad)ಪಶ್ಚಿಮ ಘಟ್ಟಗಳ ಪರ್ವತಗಳ ನಡುವೆ ನೆಲೆಸಿದೆ. ಇದು ಕೋಝಿಕ್ಕೋಡ್ ನ ಸಮುದ್ರ ತೀರದಿಂದ 76 ಕಿ.ಮೀ ದೂರದಲ್ಲಿದೆ. ಈ ಸುಂದರವಾದ ಗಿರಿಧಾಮವು ತೋಟಗಳು, ಕಾಡುಗಳು ಮತ್ತು ವನ್ಯಜೀವಿಗಳಿಂದ ತುಂಬಿದೆ. ವಯನಾಡ್ ಕೆಲವು ಸಮ್ಮೋಹನಗೊಳಿಸುವ ಪ್ರವಾಸಿ ಸ್ಥಳಗಳ ಜೊತೆಗೆ ಪ್ರಕೃತಿಯ ಶಾಂತತೆಯನ್ನು ನೀಡುತ್ತದೆ, ಇದು ಪ್ರತಿಯೊಬ್ಬ ಪ್ರಯಾಣಿಕರು ಪ್ರಯತ್ನಿಸಬೇಕಾದ ತಾಣವಾಗಿದೆ.
ಎಡಕಲ್ ಗುಹೆ (Edakkal caves)
ಇದು ಕೇರಳದಲ್ಲಿರುವ ನೈಸರ್ಗಿಕ ಗುಹೆಯಾಗಿದೆ.( Natural caves in Kerala)ಇದು ಸಮುದ್ರ ಮಟ್ಟದಿಂದ ಸುಮಾರು 1200ಮೀಟರ್ ಎತ್ತರದಲ್ಲಿದೆ.ರಾಮನ ( Lord Rama)ಮಕ್ಕಳಾದ ಲವ( Lava) ಮತ್ತು ಕುಶ( kusha) ಪರ್ವತದ ಮೇಲೆ ಬಾಣಗಳನ್ನು ಹೊಡೆಯುವ ಮೂಲಕ ಗುಹೆಯನ್ನು ರಚಿಸಿದರು ಎಂದು ನಂಬಲಾದ ಗುಹೆಯನ್ನು ” ಅಂಪುಕುತಿ ಮಾಲಾ “( Ambukuthi mala)ಎಂದೂ ಕರೆಯುತ್ತಾರೆ.
ಕುರುವ ದ್ವೀಪ( Kuruvadweep)
ಪ್ರಶಾಂತತೆ( Silence )ಮತ್ತು ನೈಸರ್ಗಿಕ ಸೌಂದರ್ಯಕೆ ಹೆಸರುವಾಸಿಯಾದ ಕೇರಳದ ವಯನಾಡಿನ ( Wayanad)ಕುರುವ ದ್ವೀಪವು ಛಾಯಾಗ್ರಾಹ ದಲ್ಲಿ( Photography)ಆಸಕ್ತಿಯುಳ್ಳವರಿಗೆ ಅತ್ಯುತ್ತಮ ಸ್ಥಳವಾಗಿದೆ. ಕುರುವ ದ್ವೀಪ ಕಬಿನಿಯು ತಾಜಾ ಗಾಳಿ ಮತ್ತು ಹಸಿರು ಪರಿಸರದಿಂದ ತುಂಬಿದ್ದು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ದ್ವೀಪಗಳು ನಿತ್ಯಹರಿದ್ವರ್ಣ ಕಾಡುಗಳಿಂದ ದಟ್ಟವಾಗಿ ಆವೃತವಾಗಿವೆ ಮತ್ತು ನದಿ ತೊರೆಗಳಿಂದ ಆವೃತವಾಗಿವೆ. ಮತ್ತು ಈ ಸ್ಥಳವು ಯಾವುದೇ ತೊಂದರೆ ಅಥವಾ ಮಾಲಿನ್ಯವನ್ನು ಆಕರ್ಷಿಸುವುದಿಲ್ಲ. ಬೋಟಿಂಗ್( Boating ), ರಾಫ್ಟಿಂಗ್( Rafting), ಪ್ರಕೃತಿ ವಾಕಿಂಗ್ ( Nature walk)ಇತ್ಯಾದಿ. ಚಟುವಟಿಕೆಯನ್ನು ಕೈಗೊಳ್ಳಬಹುದು.
ಚೆಂಬ್ರ ಶಿಖರ ( Chembra peak)
ಸಮುದ್ರ ಮಟ್ಟದಿಂದ 2100 ಮೀ ಎತ್ತರದಲ್ಲಿರುವ ಚೆಂಬ್ರಾ( Chembra) ಕೇರಳದ ವಯನಾಡ್ ಜಿಲ್ಲೆಯ ಅತಿ ಎತ್ತರದ ಶಿಖರವಾಗಿದೆ.ಅಪರೂಪದ ಸಸ್ಯ ಮತ್ತು ಪ್ರಾಣಿಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಟ್ರೇಕ್ಕಿಂಗ್ ಗೆ (Trekking) ಅತ್ಯುತ್ತಮ ಸ್ಥಳವಾಗಿದೆ.ಪಾಲಕ್ಕಾಡ್ ಪಟ್ಟಣದಿಂದ ಮೂರು ಗಂಟೆಗಳ ಚಾರಣ, ಧೋನಿ ಬೆಟ್ಟಗಳು ಪ್ರವಾಸಿಗರಿಗೆ ಸೂಕ್ತವಾದ ಪಿಕ್ನಿಕ್ ತಾಣವಾಗಿದೆ.ಬೆಂಗಳೂರಿನಿಂದಚೆಂಬ್ರಾ ಶಿಖರವು ಸುಮಾರು 306 ಕಿ.ಮೀ ದೂರದಲ್ಲಿದೆ.
ನೀವು ಇದನ್ನೂ ಇಷ್ಟ ಪಡಬಹುದು: ಬೇಸಿಗೆಯಲ್ಲಿ ನಿಮ್ಮ ಕಣ್ಮನ ಸೆಳೆಯುವ ದಕ್ಷಿಣ ಭಾರತದ ಅತ್ಯಂತ ಪ್ರಶಾಂತ ಸ್ಥಳಗಳು
ಸೂಚಿಪಾರ ಜಲಪಾತ( Soochipara Waterfalls)
ಸುಂದರ ಜಲಪಾತಗಳಲ್ಲಿ ಒಂದಾಗಿದೆ. ಜಲಪಾತವು ದಟ್ಟವಾದ ಹಸಿರು ಕಾಡುಗಳಿಂದ ಆವೃತವಾಗಿದೆ, ಇದನ್ನು ಸೆಂಟಿನೆಲ್ ರಾಕ್( Sentinel Rock)ಜಲಪಾತ ಎಂದು ಸಹ ಕರೆಯಲಾಗುತ್ತದೆ.100 ರಿಂದ 200 ಅಡಿ ಎತ್ತರದಿಂದ ಇಲ್ಲಿ ತೆಳುವಾಗಿ ಬೀಳುತ್ತದೆ ಮತ್ತು ಈ ಜಲಪಾತವು ಟ್ರೆಕ್ಕಿಂಗ್ ಮತ್ತು ರಾಕ್ ಕ್ಲೈಂಬಿಂಗ್ಗೆ ಸೂಕ್ತವಾದ ಸ್ಥಳವಾಗಿದೆ.ರಾಕ್ ಕ್ಲೈಂಬಿಂಗ್, ಟ್ರೆಕ್ಕಿಂಗ್ ಮತ್ತು ಹೈಕಿಂಗ್ನಂತಹ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಬಹುದು.( Claiming, Trekking and Hiking)
ಪ್ಯಾಂಟಮ್ ರಾಕ್( Phantom Rock )
ವಯನಾಡ್ನಲ್ಲಿ ಮತ್ತೊಂದು ಆಕರ್ಷಣೆ ಹೊಂದಿರುವ ಪ್ರವಾಸಿತಾಣವೆಂದರೆ ಅದು ಪ್ಯಾಂಟಮ್ ರಾಕ್ತಲೆಬುರುಡೆಯನ್ನು ಹೋಲುವ ಕಲ್ಲಿನ ರಚನೆಯು ಪ್ರಕೃತಿಯ ಕಲಾತ್ಮಕತೆಗೆ ಒಂದು ವಿಶಿಷ್ಟ ಉದಾಹರಣೆಯಾಗಿದೆ.ಇದು ಸಮುದ್ರ ಮಟ್ಟದಿಂದ 2600 ಅಡಿ ಎತ್ತರದಲ್ಲಿದೆ. ಇದು “ಚೀಂಗೇರಿ ಮಾಲಾ”( Cheengeri Hills)ಬಳಿ ಇದೆ. ಎಡಕ್ಕಲ್( Edakkal) ಗುಹೆಗಳು ಸಹ ಹತ್ತಿರದಲ್ಲಿದೆ..ಈ ಸ್ಥಳದಲ್ಲಿ ಟ್ರೇಕ್ಕಿಂಗ್ ಕೂಡ ಕೈಗೊಳ್ಳಬಹುದು ( Trekking ) ಚಾರಣ ಸಾಹಸಗಾರರಿದ್ದಲ್ಲಿ, ಫೋಟೋಗ್ರಫಿಯಲ್ಲಿ, ಪೃಕೃತಿ ವೀಕ್ಷಣೆಯಲ್ಲಿ ಆಸಕ್ತಿಯುಳ್ಳವರು ಕೇರಳದ ವಯನಾಡು ಜಿಲ್ಲೆಗೆ ಭೇಟಿ ನೀಡಿ ಮತ್ತು ಆನಂದಿಸಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.