ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ ಸಂಭ್ರಮ

500 ವರ್ಷಗಳ ಬಳಿಕ ರಾಮನ ಜನ್ಮಸ್ಥಳದಲ್ಲೇ ಅದ್ಧೂರಿಯಾಗಿ ರಾಮನವಮಿ(Rama Navami)ಆಚರಣೆ ನಡೆಯುತ್ತಿದ್ದು, ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇಶ(Uttara Pradesh)ಸಾಕ್ಷಿಯಾಗಲಿದೆ.

ಬೆಳಗಿನ ಜಾವ 3.30ಕ್ಕೆ ಮಂಗಳಾ ಆರತಿ(Mangala Arati)ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಿದ್ದು, ರಾತ್ರಿ 11 ರ ತನಕವೂ ಬಾಲಕರಾಮ(BalaRama )ಭಕ್ತರಿಗೆ ದರ್ಶನವನ್ನು ನೀಡಲಿದ್ದಾನೆ. ರಾಮ ಮಂದಿರ ದಿನ ಬರೋಬ್ಬರಿ 19 ಗಂಟೆಗಳ ಕಾಲ ಮರ್ಯಾದಾ ಪುರುಷೋತ್ತಮ ಮಂದಿರ ಓಪನ್ ಇರಲಿದೆ.ಹಬ್ಬದ ದಿನದಂದು ರಾಮನಿಗೆ ಉಣಬಡಿಸಲು 56 ಬಗೆಯ ಭೋಗ್(Bhog,) ಪ್ರಸಾದಗಳನ್ನು ಸಿದ್ಧಪಡಿಸಲಾಗುತ್ತಿದೆ.

Ram Navami 2024 Ayodhya Ram Mandir

ಇದರ ಜೊತೆಗೆ ದೇವ್ರ ಹಂಸ್ ಟ್ರಸ್ಟ್(Devraha Hans Trust)ನಿಂದ ಈಗಾಗಲೇ 1,11,111 ಕೆ.ಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ನೀಡಲಾಗಿದ್ದು, ದೇಗುಲಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ. ರಾಮನವಮಿ ಸಂಭ್ರಮದಲ್ಲಿ ಅಯೋಧ್ಯೆಗೆ 40 ಲಕ್ಷ ಜನ ಭಕ್ತರು ಬರುವ ನಿರೀಕ್ಷೆಯಿದೆ. ಗಣ್ಯ ಅತಿಥಿಗಳು ಏ.19 ರ ತನಕ ರಾಮದರ್ಶನ ಮುಂದೂಡಿ ಎಂದಿರುವ ರಾಮಜನ್ಮ ಭೂಮಿ ಟ್ರಸ್ಟ್ ಈ 19 ರ ತನಕ ಬುಕ್ಕಿಂಗ್(Booking )ರದ್ದು ಮಾಡಿದ್ದು, ಎಲ್ಲರೂ ಸರತಿ ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುವಂತೆ ಹೇಳಿದೆ.

ಬಾಲಕರಾಮನ ಪೂಜೆ ಕೈಂಕರ್ಯಗಳು ನೇರ ಪ್ರಸಾರಗೊಳ್ಳಲಿದ್ದು, ಅಯೋಧ್ಯೆಯಾದ್ಯಂತ 100 ಎಲ್ಇಡಿ(LED )ಪರದೆಯ ವ್ಯವಸ್ಥೆಯನ್ನು ಮಾಡಲಾಗಿದೆ.

ಅಯೋಧ್ಯೆಯಲ್ಲಿ ಬರೋಬ್ಬರಿ 9 ದಿನಗಳ ಕಾಲ ಶ್ರೀರಾಮನಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. 9 ನೇ ದಿನದಂದು ಭಗವಾನ್‌ ರಾಮನಿಗೆ 56 ಬಗೆಯ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಬಾರಿ ರಾಮನವಮಿಯಂದು ರಾಮಲಲ್ಲಾ ವಿಗ್ರಹ ಅಥವಾ ಮೂರ್ತಿಗೆ ಸೂರ್ಯ ಅಭಿಷೇಕವನ್ನು ಮಾಡಲಾಗುತ್ತದೆ. ರಾಮ ನವಮಿಯಂದು ಅಂದರೆ ಏಪ್ರಿಲ್‌ 17 ರಂದು ಅಭಿಜಿತ್‌ ಮುಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ರಾಮಲಲ್ಲಾ ವಿಗ್ರಹದ ತಲೆಯ ಮೇಲೆ ಬೀಳುತ್ತವೆ. ಇದು ರಾಮನಿಗೆ ಸೂರ್ಯ ತಿಲಕವನ್ನು ಇಟ್ಟಂತಾಗುತ್ತದೆ.

ನೀವು ಇದನ್ನೂ ಇಷ್ಟ ಪಡಬಹುದು:ರೂ.4800ರಲ್ಲಿ ಕಾಶಿ, ಉತ್ತರ ಪ್ರದೇಶ ಸುತ್ತಿ ಬಂದ ಉಡುಪಿ ಎಂಜಿಎಂ ಕಾಲೇಜು ಜರ್ನಲಿಸಂ ಮೇಷ್ಟ್ರು ಮಂಜುನಾಥ್ ಕಾಮತ್

Ram Navami 2024 Ayodhya Ram Mandir

ರಾಮ ನವಮಿ ದಿನದಂದು ಮಧ್ಯಾಹ್ನ 12 ಗಂಟೆಗೆ ಆಪ್ಟೋಮೆಕಾನಿಕಲ್ ಸಿಸ್ಟಮ್ (Aptomechanical System)ಮೂಲಕ ಬಾಲ ರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ. ದೇವಸ್ಥಾನದ ನೆಲ ಮಹಡಿಯಲ್ಲಿ ಎರಡು ಕನ್ನಡಿಗಳು ಮತ್ತು ಲೆನ್ಸ್ ಅಳವಡಿಸಲಾಗಿದೆ. ಎರಡನೇ ಮಹಡಿಯಲ್ಲಿ ಅಳವಡಿಸಲಾಗಿರುವ ಮೂರು ಮಸೂರಗಳು ಮತ್ತು ಎರಡು ಕನ್ನಡಿಗಳ ಮೂಲಕ ಸೂರ್ಯನ ಬೆಳಕು ಹಾದು ನೆಲ ಮಹಡಿಯಲ್ಲಿ ಅಳವಡಿಸಲಾಗಿರುವ ಕೊನೆಯ ಕನ್ನಡಿಯ ಮೇಲೆ ಬೀಳುತ್ತದೆ.

ಇದರಿಂದ ಪ್ರತಿಫಲಿಸುವ ಕಿರಣಗಳು ರಾಮನ ಹಣೆಯ ಮೇಲೆ ತಿಲಕವನ್ನು ರೂಪಿಸುತ್ತವೆ.ಅಯೋಧ್ಯೆಯ ರಾಮ ಮಂದಿರದಲ್ಲಿ 9 ದಿನಗಳ ಕಾಲ ಶಕ್ತಿ ಪೂಜೆ ನಡೆಯಲಿದೆ. ಈ ಸಮಯದಲ್ಲಿ ಬೆಳ್ಳಿಯ ಪೀಠದ ಮೇಲೆ ಕಲಶವನ್ನು ಇರಿಸುವುದರ ಜೊತೆಗೆ, ಒಂಬತ್ತು ದಿನಗಳ ಕಾಲ ತಾಯಿ ದುರ್ಗಾ(Durga Pooja)ದೇವಿಯೊಂದಿಗೆ ಬಾಲ ರಾಮನಿಗೂ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

ಭೋಗ, ಶೃಂಗಾರ ಮತ್ತು ಆರತಿ ಸಮಯದಲ್ಲಿ 4 ಗಂಟೆಗಳ ಕಾಲ ದೇವಾಲಯದ ಗರ್ಭಗುಡಿಯನ್ನು ಪರದೆಯಿಂದ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ, ಸಾರ್ವಜನಿಕರಿಗೆ ದರ್ಶನವನ್ನು ಮಾಡಲು ಅವಕಾಶವಿರುವುದಿಲ್ಲ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button