ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ಸಂಸ್ಕೃತಿ, ಪರಂಪರೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ರಾಜ್ಯದ ತಾಣಗಳಿವು

ಪಾರಂಪರಿಕ ತಾಣಗಳನ್ನು(Heritage Place)ರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನ ವಿಶ್ವ ಪಾರಂಪರಿಕ ದಿನ (World Heritage Day)ಆಚರಣೆ ಮಾಡಲಾಗುತ್ತದೆ. ನಮ್ಮ ದೇಶದ 42 ವಿಶ್ವ ಪಾರಂಪರಿಕ ತಾಣಗಳ ಆ ಪಟ್ಟಿಯಲ್ಲಿದ್ದು(World Heritage Site)ಕರ್ನಾಟಕದ(Karnataka) 6 ತಾಣಗಳು ಸೇರಿಕೊಂಡಿವೆ.

ಪಟ್ಟದಕಲ್ಲು (Pattadakal)

ಯುನೆಸ್ಕೋ(UNESCO )ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಈ ಪಟ್ಟದಕಲ್ಲು ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಒಂದು. ಚಾಲುಕ್ಯ(Chalukya dynasty) ರಾಜವಂಶದಲ್ಲಿ ನಿರ್ಮಾಣವಾದ ಈ ಸ್ಮಾರಕಗಳು ಅಂದಿನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ.

World Heritage Sites of Karnataka

ಈ ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯಲ್ಲಿದೆ.(Bagalkote), ಈ ಪ್ರದೇಶದ ರಚನೆ ಮತ್ತು ಶೈಲಿಯು ದ್ರಾವಿಡ ಕಲೆಯಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ. ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮರಳುಗಲ್ಲುಗಳಿಂದ ತಯಾರಿಸಿದ ದೇವಾಲಯಗಳಿವೆ. ಇವು ಮುಖ್ಯವಾಗಿ ಶಿವ ದೇವಾಲಯಗಳು(Shiva Temple) ಅಥವಾ ಜೈನ ದೇವಾಲಯಗಳಾಗಿವೆ(Jain Temple). ಮಲಪ್ರಭಾ(Malapray) ನದಿಯ ದಂಡಯ ಮೇಲೆ ಈ ಸ್ಥಳ ಇದೆ. ಹೀಗಾಗಿ ಇದು ವಿಶ್ವದ ಪಾರಂಪರಿಕ ತಾಣಗಳಲ್ಲಿ ಮುಖ್ಯ ಸ್ಥಳವಾಗಿದೆ.. ಜನಪ್ರಿಯ ವಿರೂಪಾಕ್ಷ(Virupaksha), ಸಂಗಮೇಶ್ವರ(Sangameshwara), ಚಂದ್ರಶೇಖರ್,(Chandrashekar) ಮಲ್ಲಿಕಾರ್ಜುನ(Mallikarjun), ಪಾಪನಾಥ(Paapanatha), ಕಾಶಿವಿಶ್ವನಾಥ(Kashi Vishwanath )ಮತ್ತು ಗಳಗನಾಥ(Galaganath)ದೇವಾಲಯಗಳನ್ನು ತಪ್ಪದೇ ನೋಡಿ.

ಹಂಪಿ (Hampi)

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ತಾಣಗಳಲ್ಲಿ ಒಂದು. ಈ ಹಂಪಿಯೂ ವಿಜಯನಗರ(Vijayanagara )ಕಾಲದ ವಾಸ್ತುಶಿಲ್ಪದ ಪ್ರಕಾರದಿಂದಲೇ ನೋಡುಗರನ್ನು ಗಮನ ಸೆಳೆಯುತ್ತಿದೆ.ಕೃಷ್ಣೇವರಾಯ(Krishna Devaraya)ರಾಜವಂಶದ ಅವಶೇಷಗಳಾದ ಗುಡಿ, ಗೋಪುರಗಳು ಇಲ್ಲಿವೆ.ಇಲ್ಲಿ ವಿರುಪಾಕ್ಷಾ (Virupaksha) ದೇವಾಲಯವಿದೆ.

World Heritage Sites of Karnataka

ತುಂಗಭದ್ರಾ(Thungabadhra)ನದಿಯ ಉದ್ದಕ್ಕೂ ಹಂಪಿ ಎತ್ತರವಾಗಿ ಬೆಳೆದಿದೆ. ಈ ನದಿಯು ಈ ಕ್ಷೇತ್ರವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ಇನ್ನು, ವಿಜಯ ನಗರ ಸಾಮ್ರಾಜ್ಯದ ಅವಶೇಷಗಳು ದಕ್ಷಿಣ ಭಾರತದಾದ್ಯಂತ ಹರಡಿಕೊಂಡಿವೆ. ಅವುಗಳಲ್ಲಿ ಗಮನಾರ್ಹವಾದವು 2೦೦ ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯಾಗಿದೆ.ಇಲ್ಲಿ ನೀವು ವಿಠ್ಠಲ(Vitala) ದೇವಾಲಯ, ಹೇಮಕೂಟ(Hemakuta) ಬೆಟ್ಟದ ದೇವಾಲಯಗಳು, ಹಜಾರ ರಾಮ ದೇವಾಲಯ, ರಾಣಿಯ ಸ್ನಾನಗೃಹ, ಆನೆ ಲಾಯ, ಲೋಟಸ್ ಮಹಲ್, ಲಕ್ಷ್ಮಿ ನರಸಿಂಹ, ಮೆಟ್ಟಿಲು ತೊಟ್ಟಿ, ನದಿ ತೀರದ ಅವಶೇಷಗಳು, ಹಂಪಿ ಬಜಾರ್, ಪುರಾತತ್ವ ವಸ್ತುಸಂಗ್ರಹಾಲಯ ಸೇರಿದಂತೆ ಇನ್ನು ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಬಹುದು.

ಹೊಯ್ಸಳೇಶ್ವರ ದೇವಾಲಯ (Hoysaleswara)

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಬೇಲೂರಿನಲ್ಲಿರುವ(Beluru)ಚೆನ್ನಕೇಶವ(Chennakeshaava) ದೇವಾಲಯ ಮತ್ತು ಹಳೇಬೀಡು(Halebidu) ಹೊಯ್ಸಳೇಶ್ವರ ದೇವಾಲಯಗಳು ಸೇರಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾದ ಈ ದೇವಾಲಯಗಳಲ್ಲಿ ನಾಗರ(Nagara )ಮತ್ತು ದ್ರಾವಿಡ (Dravida)ಶೈಲಿಯ ಗಮನಾರ್ಹ ವಾಸ್ತುಶಿಲ್ಪವನ್ನು ಹೊಂದಿದೆ. ಹೀಗಾಗಿ ಈ ದೇವಾಲಯಗಳು ವಿಭಿನ್ನವಾದ ಕೆತ್ತನೆಯಿಂದ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

World Heritage Sites of Karnataka

ಹಾಸನ(Hasan) ಜಿಲ್ಲೆಯಲ್ಲಿ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ಚೆನ್ನಕೇಶವ ಮತ್ತು ಹೊಯ್ಸಲೇಶ್ವರ ದೇವಾಲಯಗಳು ಸೇರಿವೆ. ವಿಶಿಷ್ಟ ರೀತಿಯ ನಕ್ಷತ್ರಾಕಾರದ ವೇದಿಕೆಗಳು, ಸಂಕೀರ್ಣವಾದ ಕೆತ್ತನೆಗಳನ್ನು ನೀವು ಇಲ್ಲಿ ನೋಡಬಹುದು.

ಶ್ರೀರಂಗಪಟ್ಟಣದ ಸ್ಮಾರಕಗಳು (Monuments of Srirangapatna Island Town)

ಶ್ರೀರಂಗಪಟ್ಟಣವಿರುವುದು ಮಂಡ್ಯ(Mandya) ಜಿಲ್ಲೆಯ ಕಾವೇರಿ (Kaveri)ನದಿಯ ಸಮೀಪದಲ್ಲಿ. ಇದು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಕರ್ನಾಟಕದ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯವನ್ನು(Ranganath Swami Teme)ಇಲ್ಲಿ ಕಾಣಬಹುದು.

World Heritage Sites of Karnataka

ನೀವು ಇದನ್ನೂ ಓದಬಹುದು:ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲಿವೆಯೇ ಲಕ್ಕುಂಡಿ, ಶ್ರವಣಬೆಳಗೊಳ?;

ಇಲ್ಲಿ ವಿಜಯನಗರ ಮತ್ತು ಹೊಯ್ಸಳ(Hoysala) ಸಾಮ್ರಾಜ್ಯಗಳ ಕೆಲವು ಅದ್ಭುತವಾದ ವಾಸ್ತುಶಿಲ್ಪದ ತಾಣಗಳನ್ನು ನೀವು ಅನ್ವೇಷಣೆ ಮಾಡಬಹುದು. ಶ್ರೀರಂಗಪಟ್ಟಣವು ಯುನೆಸ್ಕೋ ವಿಶ್ವ ಪರಂಪರೆಯ ತಾಣದ ತಾತ್ಕಾಲಿಕ ಪಟ್ಟಿಯಲ್ಲಿದೆ. ಮುಖ್ಯವಾಗಿ ಇಲ್ಲಿ ದರಿಯಾ ದೌಲತ್‌ ಬಾಗ್(Dariya Doulat Bhag), ಶ್ರೀರಂಗಪಟ್ಟಣ ಕೋಟೆ(Shriranga Fort), ಟಿಪ್ಪು ಸುಲ್ತಾನನ ಗುಂಬಜ್(Tippu Sultan Gumbaj) ರಂಗನತಿಟ್ಟು ಪಕ್ಷಿಧಾಮ(Ranganatittu Bird Sanctuary)ಸೇರಿದಂತೆ ಇನ್ನು ಹಲವಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.

ಡೆಕ್ಕನ್ ಸುಲ್ತಾನರ ಭವ್ಯ ಸ್ಮಾರಕಗಳು (Monuments and Forts of the Deccan Sultanate)

ದಕ್ಷಿಣ ಭಾರತದಲ್ಲಿ 14ನೇ ಶತಮಾನದಿಂದ 18ನೇ ಶತಮಾನದವರೆಗೂ ಆಳ್ವಿಕೆ ನಡೆಸಿದ ಡೆಕ್ಕನ್‌ ಸುಲ್ತಾರು(Deccan Sutanate )ನಿರ್ಮಿಸಿದ ಭವ್ಯ ಸ್ಮಾರಕ, ಕೋಟೆಗಳು, ಸಮಾದಿ, ಮಸೀದಿಗಳನ್ನು ಯುನೆಸ್ಕೋ ಪಾರಂಪರಿ ತಾಣಗಳ ಪಟ್ಟಿಗೆ ಸೇರಿದೆ. ಈ ಸ್ಮಾರಕಗಳನ್ನು ವಿಜಯಪುರ(Vijayapura), ಕಲಬುರ್ಗಿ(Kalburgi), ಬೀದರ್(Bidar) ಸೇರಿದಂತೆ ಉತ್ತರ ಕರ್ನಾಟಕದಲ್ಲಿದ್ದು, ಇಸ್ಲಾಮಿಕ್(Islamic )ಹಾಗೂ ಹಿಂದೂ(Hindu )ವಾಸ್ತುಶಿಲ್ಪಗಳನ್ನು ಕಾಣಬಹುದು. ಇವುಗಳನ್ನು ಡೆಕ್ಕನ್ ಸುಲ್ತಾನರ ಸ್ಮಾರಕಗಳು ಎಂದೇ ಕರೆಯುತ್ತಾರೆ. ಇಲ್ಲಿ ಗ್ರೇಟ್ ಮಸೀದಿ ಮತ್ತು ಏಳು ಗೋರಿಗಳನ್ನು ಹೊಂದಿರುವ ಸಂರ್ಕೀಣವನ್ನು ಒಳಗೊಂಡಿದೆ. ಹಾಗೆಯೇ ಬೀದರ್‌ನಲ್ಲಿ ಬೀದರ್ ಕೋಟೆ, ಬಹುಮನಿ ಗೋರಿಗಳು ಇನ್ನು ಅನೇಕ ಐತಿಹಾಸಿಕ ತಾಣಗಳಿವೆ.

World Heritage Sites of Karnataka

ಪಶ್ಚಿಮ ಘಟ್ಟಗಳು (Western Ghats)

ಮಹಾರಾಷ್ಟ್ರ(Maharashtra), ಗೋವಾ,(Goa) ಕರ್ನಾಟಕ, ತಮಿಳುನಾಡು(Tamilnadu) ಮತ್ತು ಕೇರಳದಲ್ಲಿರುವ(Kerala )ಈ ಪಶ್ಚಿಮ ಘಟ್ಟದ ಸಾಲುಗಳು ಅನೇಕ ಜೀವಿಗಳಿಗೆ ಆಶ್ರಯ ತಾಣ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿರುವ ಈ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಿಂದ ಕಂಗೊಳಿಸುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button