ಗದಗ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು
ಗದಗ ( Gadag )ಪ್ರಾಚೀನ ಹಿಂದೂ ಮತ್ತು ಜೈನ ದೇವಾಲಯಗಳು ಮತ್ತು ಮಧ್ಯಕಾಲೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಜಿಲ್ಲೆ ಧಾರವಾಡ (Dharwad)ಜಿಲ್ಲೆಯಿಂದ ಬೇರ್ಪಟ್ಟು 1997 ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಈ ಸ್ಥಳವು ಮುದ್ರಣ ಮತ್ತು ಕೈಮಗ್ಗ ಉದ್ಯಮಕ್ಕೆ ಜನಪ್ರಿಯವಾಗಿದೆ. ಪಶ್ಚಿಮ ಚಾಲುಕ್ಯ ಸಾಮ್ರಾಜ್ಯದ ಪ್ರಭಾವವನ್ನು ಈ ಸ್ಥಳದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಲ್ಲಿ ಕಾಣಬಹುದು
ಲಕ್ಕುಂಡಿ ( Lakkundi )
ಲಕ್ಕುಂಡಿ ಗದಗ(Gadag) ನಗರದಿಂದ 11ಕಿಮೀ ದೂರದಲ್ಲಿದೆ. ಇದನ್ನು ದೇವಾಲಯಗಳ ಸ್ವರ್ಗವೆಂದು ಕರೆಯುತ್ತಾರೆ. ಶಾಸನಗಳ ಪ್ರಕಾರ ಲಕ್ಕುಂಡಿಯನ್ನು ‘ಲೋಕಿ ಗುಂಡಿ’(Loki Gundi)ಎಂದೂ ಕರೆಯುತ್ತಾರೆ; ಇದು ಸಾವಿರ ವರ್ಷಗಳ ಹಿಂದೆಯೇ ಪ್ರಮುಖ ನಗರವಾಗಿತ್ತು.
ಲಕ್ಕುಂಡಿ ಪುರಾತನ ಆಸಕ್ತಿಯ ಸ್ಥಳವಾಗಿದೆ. ಗ್ರಾಮದುದ್ದಕ್ಕೂ 50 ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಹರಡಿರುವೆ. ಕಲ್ಯಾಣಿ ಎಂದು ಕರೆಯಲ್ಪಡುವ 101 ಮೆಟ್ಟಿಲುಗಳ ಬಾವಿ ಮತ್ತು ಚಾಲುಕ್ಯರು(Chalukya), ಕಲಚೂರಿಗಳು, ಸೀನಾ ಮತ್ತು ಹೊಯ್ಸಳರ(Hoysala) ಆಳ್ವಿಕೆಯಲ್ಲಿ ನಿರ್ಮಿಸಲಾದ ಅನೇಕ ಶಾಸನಗಳು ಇಲ್ಲಿ ದೊರೆತಿವೆ
ಕಾಶಿ ವಿಶ್ವನಾಥ(Kashi Vishwanath)ದೇವಾಲಯವು ಅತ್ಯಂತ ಅಲಂಕೃತ ಮತ್ತು ವಿಸ್ತಾರವಾಗಿ ನಿರ್ಮಿಸಲ್ಪಟ್ಟಿದೆ. ಲಕ್ಕುಂಡಿ ಒಂದು ಪ್ರಮುಖ ಜೈನ (Jain)ಕೇಂದ್ರವಾಗಿದೆ. ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯು, ಬಾದಾಮಿಯ (Badami)ಆರಂಭಿಕ ಚಾಲುಕ್ಯರ ಮತ್ತು ಅವರ ನಂತರದ ಹೊಯ್ಸಳರ ನಡುವಿನ ಕೊಂಡಿ ಎಂದು ಹೇಳಲಾಗುತ್ತದೆ.
ಲಕ್ಕುಂಡಿ ತನ್ನ ಕಡಿದಾದ ಬಾವಿಗಳಿಗೆ ಹೆಸರುವಾಸಿಯಾಗಿದೆ. ಇದು ಹಲವಾರು ಬಾವಿಗಳ ಗೋಡೆಗಳ ಒಳಗೆ ಕಲಾತ್ಮಕವಾದ ಲಿಂಗಗಳನ್ನು ಒಳಗೊಂಡಿದೆ. ಲಕ್ಕುಂಡಿ ಇನ್ನೊಂದು ಆಕರ್ಷಣೆಯೆಂದರೆ ಕಲಾಶಿಲ್ಪ ಗ್ಯಾಲರಿ, ಇದನ್ನು ಭಾರತದ ಪುರಾತತ್ತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.
ನರಗುಂದ ( Naragunda )
ಗದಗದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನರಗುಂದವು ಕೋಟೆಯೊಂದಿಗೆ(Naragunda Fort)ಬೆಟ್ಟವನ್ನು(Hills) ಹೊಂದಿದೆ. ಈ ಸ್ಥಳಕ್ಕೆ ನರಿ ಮತ್ತು ಕುಂಡಾ (ಬೆಟ್ಟ) ದಿಂದ ಈ ಹೆಸರು ಬಂದಿದೆ ಎಂದು ನಂಬಲಾಗಿದೆ.
ಇದು ರಾಷ್ಟ್ರಕೂಟ (Rashtrakuta)ಕಾಲದಿಂದ ಪ್ರಾರಂಭವಾಗಿ 1000 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಸ್ಥಳವಾಗಿದೆ. ಇದರ ಆಧುನಿಕ ಇತಿಹಾಸವು 1674 ರಿಂದ ಶಿವಾಜಿ ಮಹಾರಾಜ್ (Shivaji Maharaj)ಇಲ್ಲಿ ಕೋಟೆಯನ್ನು ನಿರ್ಮಿಸಿದಾಗ ಪ್ರಾರಂಭವಾಗುತ್ತದೆ.
ಗಜೇಂದ್ರಗಡ ಕೋಟೆ ( Gajendragad Fort )
ಗದಗದಿಂದ 55 ಕಿ.ಮೀ. ದೂರದಲ್ಲಿರುವ ಈ ಕೋಟೆ ಮತ್ತು ಕಾಲಕಾಲೇಶ್ವರ ದೇವಸ್ಥಾನಕ್ಕೆ ಜನಪ್ರಿಯವಾಗಿರುವ ಗದಗದ ಎರಡನೇ ಅತಿದೊಡ್ಡ ನಗರ.
ಹಲವಾರು ಚಾಲುಕ್ಯ ಯುಗದ ಸ್ಮಾರಕಗಳು ಮತ್ತು ಅವಳಿ ಗೋಪುರ ಹೊಂದಿರುವ ಮಲ್ಲಿಕಾರ್ಜುನ ದೇವಸ್ಥಾನಗಳಿರುವ ಈ ಊರು ಗದಗದಿಂದ 50 ಕಿ.ಮೀ ದೂರದಲ್ಲಿದೆ.
ನೀವು ಇದನ್ನೂ ಓದಬಹುದು: ಬಾಗಲಕೋಟೆ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು
ಗಜೇಂದ್ರಗಡ ಗಜೇಂದ್ರಗಡ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜ್ ನಿರ್ಮಿಸಿದ ಐತಿಹಾಸಿಕ ಕೋಟೆ. ಮೇಲಿನಿಂದ ನೋಡಿದಾಗ ಆನೆಯ ಆಕಾರವನ್ನು ಹೋಲುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಗದಗ ಜಿಲ್ಲೆಯಿಂದ 55 ಕಿ.ಮೀ ದೂರ ಗಜೇಂದ್ರಗಡದಲ್ಲಿದೆ. ಗಜೇಂದ್ರಗಡ ಕೋಟೆಯು ಐದು ತಲೆಯ ಹಾವು ಮತ್ತು ಎರಡು ಸಿಂಹಗಳು ಪರಸ್ಪರ ಮುಖಾಮುಖಿಯಾಗಿರುವ ಭವ್ಯ ಪ್ರವೇಶ ದ್ವಾರವನ್ನು ಹೊಂದಿದೆ. ಇಲ್ಲಿ ಭಗವಾನ್ ಹನುಮಾನ್(Hanuman) ವಿಗ್ರಹ, ಕೋಟೆಯ ಅವಶೇಷಗಳು, ಆನೆಯ ತಲೆಯ ಕೆತ್ತನೆಗಳು, ಹಿಂದಿ ಮತ್ತು ಮರಾಠಿಯಲ್ಲಿನ ಪ್ರಾಚೀನ ಶಾಸನಗಳನ್ನು ಕಾಣಬಹುದು. ಇಲ್ಲಿಯ ಕಾಲಕಾಲೇಶ್ವರ ದೇವಾಲಯವೂ ಪ್ರಸಿದ್ಧವಾಗಿದೆ
ಕಪ್ಪತಗುಡ್ಡ ( Kappatha Gudda )
ಉತ್ತರ ಕರ್ನಾಟಕದ(North Karnataka)ಸಹ್ಯಾದ್ರಿ ಎಂದೆ ಪ್ರಖ್ಯಾತವಾಗಿರುವ ಕಪ್ಪತಗುಡ್ಡ , ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಖನಿಜ , ನೈಸರ್ಗಿಕ ಸಂಪತ್ತು ಹೊಂದಿದೆ.
ಗುಡ್ಡವು ಔಷಧೀಯ ಸಸ್ಯಗಳಿಗೆ ಹೆಸರು ಮಾಡಿದ್ದು, ಬೆಟ್ಟದ ಸಾಲುಗಳಲ್ಲಿ 340 ಕ್ಕೂ ಹೆಚ್ಚು ಅಪರೂಪದ ಔಷಧೀಯ ಸಸ್ಯಗಳಿವೆ ಎಂದು ತಿಳಿದು ಬಂದಿದೆ. ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಆರು ಪ್ರಮುಖ ಮಠ ಮತ್ತು ದೇವಸ್ಥಾನಗಳು ಇವೆ.
ಗದಗ ಮೃಗಾಲಯ ( Gadag Zoo )
ಬಿಂಕಾಡಕಟ್ಟಿ ಮೃಗಾಲಯ” ಎಂದೂ ಕರೆಯಲ್ಪಡುವ ಇದನ್ನು1972 ರಲ್ಲಿ ಸ್ಥಾಪಿಸಲಾಯಿತು. ಗದಗದಿಂದ 4 ಕಿಮೀ ದೂರದಲ್ಲಿರುವ ಈ ಮೃಗಾಲಯವನ್ನು ಕೇಂದ್ರ ಮೃಗಾಲಯ ಪ್ರಾಧಿಕಾರವು “ಸಣ್ಣ ಮೃಗಾಲಯ”ಗಳ ಪಟ್ಟಿಯಲ್ಲಿ ಸೇರಿಸಿದೆ. ವರ್ಷವೂ ಸುಮಾರು 70000 ಕ್ಕೂ ಅಧಿಕ ಪ್ರವಾಸಿಗರು ಈ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.