ಅಮರನಾಥ ಯಾತ್ರೆಗೆ ಹೋಗುವವರು ಈ ಮಾಹಿತಿ ಗಮನಿಸಿ
ಶ್ರೀನಗರದಿಂದ( Srinagar )141 ಕಿಮೀ ದೂರದಲ್ಲಿ ಅಮರನಾಥದ ಪವಿತ್ರ ಗುಹೆಯು(Amarnath Cave)ಲಾಡರ್ ಕಣಿವೆಯಲ್ಲಿದೆ.ಇದು ಹಿಮನದಿಗಳು ಮತ್ತು ಹಿಮದ ಪರ್ವತಗಳಿಂದ ಆವೃತವಾಗಿದೆ. ಇದು ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿದೆ. ಅಮರನಾಥ ಯಾತ್ರೆಯು (Amaranath Yatra)ಪ್ರತಿ ವರ್ಷ ಬಿಗಿ ಭದ್ರತೆಯ ಮಧ್ಯೆ ನಡೆಯುತ್ತದೆ.
ಅನಂತನಾಗ್ (Ananth Nag)ಜಿಲ್ಲೆಯ ಸಾಂಪ್ರದಾಯಿಕ 48-ಕಿಮೀ-ಉದ್ದದ ನುನ್ವಾನ್(Nunvan)-ಪಹಲ್ಗಾಮ್(Pahalgam) ಮಾರ್ಗ ಮತ್ತು ಗಂದರ್ಬಾಲ್(Gandarbal) ಜಿಲ್ಲೆಯ 14-ಕಿಮೀ ಉದ್ದದ ಕಡಿದಾದ ಬಾಲ್ಟಾಲ್ (Baltaal)ಮಾರ್ಗದಿಂದ ಅವಳಿ ಹಳಿಗಳಿಂದ ನಡೆಯುತ್ತದೆ. ಇಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ಅಮರನಾಥ ಯಾತ್ರೆಯನ್ನು ಕೈಗೊಳ್ಳಲು ಬರುತ್ತಾರೆ.
ಜೂನ್ 29ರಿಂದ(June 29)ಅಮರನಾಥ ಯಾತ್ರೆ ಆರಂಭವಾಗಲಿದೆ. ಆಗಸ್ಟ್ 19ಕ್ಕೆ(Agust )ಮುಕ್ತಾಯಗೊಳ್ಳಲಿದೆ. ಅದರ ಮುಂಗಡ ಬುಕಿಂಗ್ ಏ . 15 ರಿಂದಲೇ (April )ಆರಂಭವಾಗಿದೆ.
.ಅಮರನಾಥ ಯಾತ್ರೆ 2024ರ ನೋಂದಣಿ ಶುಲ್ಕವನ್ನು(Registration Fees)ಪ್ರತಿ ವ್ಯಕ್ತಿಗೆ 150 ರೂಪಾಯಿ . ಅಮರನಾಥ ಯಾತ್ರೆ 2024 ರ ನೋಂದಣಿ ಮಾಡಿಕೊಳ್ಳು ಬಯಸುವ ಯಾತ್ರಾತ್ರಿಗಳು ಶುಲ್ಕವನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಬ್ಯಾಂಕ್ ಶಾಖೆಗಳ ಮೂಲಕ ಪಾವತಿಸಬಹುದು
ರನಾಥ ಯಾತ್ರೆಗೆ ಎಲ್ಲಿ ನೋಂದಾಯಿಸಿಕೊಳ್ಳಬೇಕು?
ಈ ವರ್ಷ ಅಮರನಾಥ ಯಾತ್ರೆಗೆ ನೋಂದಾಯಿಸಲು ಬಯಸಿದರೆ, ನೀವು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್ https://jksasb.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಲ್ಲದೇ ಅಮರನಾಥ ದೇಗುಲ ಮಂಡಳಿಯ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದು.
ನೀವು ಇದನ್ನೂ ಇಷ್ಟ ಪಡಬಹುದು:ಈ ದೇಗುಲದಲ್ಲಿ ಶಿವನು ಪದ್ಮಾಸನದಲ್ಲಿ ಕುಳಿತಿಹನು
ವಯಸ್ಸಿನ ಮಿತಿ ಎಷ್ಟು.?(Age Restriction)
13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 70 ವರ್ಷ ಮೇಲ್ಪಟ್ಟವರು ಅಮರನಾಥ ಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ. ಇದಲ್ಲದೆ, 6 ವಾರಗಳಿಗಿಂತ ಹೆಚ್ಚು ಗರ್ಭಿಣಿ ಮಹಿಳೆಯರನ್ನು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳುವಂತಿಲ್ಲ.
ಯಾವ ಮಾರ್ಗಗಳ ಮೂಲಕ ಅಮರನಾಥ ಯಾತ್ರೆ?
52 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆ ಎರಡು ಮಾರ್ಗಗಳ ಮೂಲಕ ನಡೆಯುತ್ತದೆ. ಒಂದನೇ ಮಾರ್ಗವು ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಮೀ ಉದ್ದದ ನುನ್ವಾನ್-ಪಹಲ್ಗಾಮ್ ಮಾರ್ಗವಾಗಿದೆ. ಇನ್ನೊಂದು ಮಾರ್ಗವು ಗಂಡರ್ಬಾಲ್(Gandarbal) ಜಿಲ್ಲೆಯ 14 ಕಿಮೀ ಉದ್ದದ ಬಾಲ್ಟಾಲ್ ಮಾರ್ಗವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಶ್ರೀನಗರದಿಂದ 141 ಕಿಲೋಮೀಟರ್ ದೂರದಲ್ಲಿರುವ ಮತ್ತು ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿರುವ ಅಮರನಾಥ ಯಾತ್ರೆಯ ಮೂಲಕ ಬಾಬಾ ಬರ್ಫಾನಿಯನ್ನು ಭೇಟಿ ಮಾಡಲು ತೆರಳುತ್ತಾರೆ.
ಈ ದಾಖಲೆಗಳು ಅಗತ್ಯ
ಅಮರನಾಥ ಯಾತ್ರೆಯಲ್ಲಿ ಭಾಗವಹಿಸಲು ಬಯಸುವ ಭಕ್ತರು ಅಧಿಕೃತ ವೈದ್ಯರು, ಆಧಾರ್ (Adhar )ಕಾರ್ಡ್, ಸರ್ಕಾರಿ ಮಾನ್ಯತೆ ಪಡೆದ ಗುರುತಿನ ಚೀಟಿ,(ID Proof )ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಹೊಂದಿದ್ದರೆ ಮಾತ್ರ. ಜೊತೆಗೆ ಆರೋಗ್ಯ ಪ್ರಮಾಣ ಪತ್ರವನ್ನು ಭಕ್ತರು ಏಪ್ರಿಲ್ 8, 2024 ರ ನಂತರ ಪಡೆದಿರಬೇಕು
ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ MRT ನಿಯೋಜಿಸಲಾಗುವುದು
ಜಮ್ಮು ಮತ್ತು ಕಾಶ್ಮೀರದ ಮೌಂಟೇನ್ ಪಾರುಗಾಣಿಕಾ ತಂಡಗಳು (ಎಂಆರ್‌ಟಿಗಳು) ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಅಮರನಾಥದ ಪವಿತ್ರ ಗುಹೆ ದೇಗುಲಕ್ಕೆ ಹೋಗುವ ಅವಳಿ ಮಾರ್ಗಗಳಲ್ಲಿ ಗುರುತಿಸಲಾದ ಸುಮಾರು ಹನ್ನೆರಡು ಸ್ಥಳಗಳಲ್ಲಿ ನಿಯೋಜಿಸಲಾಗುವುದು.
ಇನ್ನು ಯಾತ್ರೆ ಸುರಕ್ಷತೆ ಬಗ್ಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಎಂಆರ್‌ಟಿ ತಂಡದ ಉಸ್ತುವಾರಿ ರಾಮ್ ಸಿಂಗ್ ಸಲಾಥಿಯಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಜೂನ್ನಲ್ಲಿ ಪ್ರಾರಂಭವಾಗಲಿದೆ. ಸುಮಾರು ಎರಡು ತಿಂಗಳ ಕಾಲ ಈ ಯಾತ್ರೆ ನಡೆಯಲಿದೆ. ದೇಶಾದ್ಯಂತದ ಲಕ್ಷಾಂತರ ಭಕ್ತರು ಬಾಬಾ ಬರ್ಫಾನಿಯನ್ನು ಆರಾಧಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಯಾತ್ರಾರ್ಥಿಗಳು ಪರಿಸ್ಥಿತಿಯನ್ನು ನಿಭಾಯಿಸಲು, ಪ್ರವಾಸಿಗರಿಗೆ ಸಹಾಯ ಮಾಡಲು ಮೌಂಟೇನ್ ರೆಸ್ಕ್ಯೂ ಟೀಮ್ (MRT) ತರಬೇತಿ ಪಡೆಗಳನ್ನು ನೇಮಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.