ದೂರ ತೀರ ಯಾನವಿಂಗಡಿಸದ

ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು

ಹುಬ್ಬಳ್ಳಿ(Hubbali) ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದು ಮತ್ತು ಇದನ್ನು ಧಾರವಾಡದ(Dharwad) ಅವಳಿ ನಗರದ ಎಂದು ಕರೆಯಲಾಗುತ್ತದೆ. ಇದು ಕರ್ನಾಟಕದ ಧಾರವಾಡ ಜಿಲ್ಲೆಯ ಆಡಳಿತದ ರಾಜಧಾನಿಯೂ ಆಗಿದೆ. ಹುಬ್ಬಳ್ಳಿಯು ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿದೆ ಮತ್ತು ಕೈಗಾರಿಕೆ, ವಾಹನ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು ಬೆಂಗಳೂರಿನ ನಂತರದ ಸ್ಥಾನವನ್ನು ಪಡೆದಿದೆ.

ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ. ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ. ಈ ಅವಳಿ ಜಿಲ್ಲೆಗಳಲ್ಲಿ ನೋಡಬಹುದಾದ ತಾಣಗಳು.

ಸಾಧನ ಕೇರಿ (Sadhana Keri)

ಮಹಾನ್ ಕವಿ ಜ್ಞಾನಪೀಠ ಪುರಸ್ಕೃತ ಡಾ|| ದ.ರಾ. ಬೇಂದ್ರೆ(Da Ra Bendre) ಗೌರವಿಸುವ ಉದ್ಯಾನವನ. ಧಾರವಾಡ ನಗರದಿಂದ ಗೋವಾ (Goa)ಮಾರ್ಗವಾಗಿ 3 ಕಿ.ಮೀ. ಅಂತರದಲ್ಲಿರುವ ಸಾಧನಕೇರಿಗೆ ಬಂದರೆ ಉದ್ಯಾನವನ ಕಾಣಬಹುದು. ಮೈಸೂರು ಆಫ್ ಝಿಯಾನ್ ಗಾರ್ಡನ್ಸ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಗೀತ ಕಾರಂಜಿ ನೋಡಲು ಮನಮೋಹಕವಾಗಿದ್ದು, ಹುಲ್ಲುಹಾಸುಗಳು, ಪ್ರತಿಮೆಗಳು ಮತ್ತು ಮಕ್ಕಳಿಂದ ಹಿಡಿದು ದೊಡ್ಡವರನ್ನು ಮನರಂಜಿಸುವ ಬೋಟಿಂಗ್ ವ್ಯವಸ್ಥೆ, ವಿವಿಧ ಆಟಗಳು, ಫುಡ್ ಕೋರ್ಟ್, ವಿಶ್ರಾಂತಿ ಗೃಹಗಳಿವೆ. ಸಾಧನಕೇರಿ ಉದ್ಯಾನವನ ಧಾರವಾಡದ ಸೌಂದರ್ಯ ಆಕರ್ಷಣೆಯ ಪ್ರತೀಕವಾಗಿದೆ.

Must visit places in Hubballi and Dharward

ತಪೋವನ(Tapovana)

ಆಧ್ಯಾತ್ಮ, ಸಾಂಸ್ಕೃತಿಕ ಯೋಗ ಕೇಂದ್ರವಾಗಿ ಸದಾ ಶಾಂತಿ ಹಾಗೂ ತನ್ಮಯತೆಯ ವಾತಾವರಣ ಹೊರಸೂಸುವ ತಪೋವನ, ತನ್ನದೇ ಆದ ಮಹತ್ವ ಹೊಂದಿದೆ. ಯೋಗ(Yoga )ಮತ್ತು ಆಧ್ಯಾತ್ಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಈ ತಪೋವನವನ್ನು ಕುಮಾರ ಸ್ವಾಮೀಜಿ(Kumara Swamiji)1965ರಲ್ಲಿ ಸ್ಥಾಪಿಸಿದರು. ಧಾರವಾಡದಿಂದ 6 ಕಿ.ಮೀ. ಕ್ಯಾರಕೊಪ್ಪ(Kyarakoppa) ಮಾರ್ಗದಲ್ಲಿ ನೆಲೆಕಂಡಿದೆ.

Must visit places in Hubballi and Dharward

ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನ(Annigeri Amrutheswari Temple)

ಚಾಲುಕ್ಯ ದೊರೆ (Chalukya) ಒಂದನೇ ಸೋಮೇಶ್ವರನ(Someshwara I )ಕಾಲದಲ್ಲಿ ನಿರ್ಮಾಣಗೊಂಡಿತು. ಹುಬ್ಬಳ್ಳಿ-ಗದಗ(Hubballi-Gadag) ರಸ್ತೆಯಲ್ಲಿ ಹುಬ್ಬಳ್ಳಿಯಿಂದ ೩೫ ಕಿ.ಮೀ. ದೂರದಲ್ಲಿದೆ.

ಆದಿಕವಿ ಪಂಪ (Pampa) ಹುಟ್ಟಿದ ಸ್ಥಳ ಅಣ್ಣಿಗೇರಿ. ನಾಲ್ಕನೇಯ ಸೋಮೇಶ್ವರನ(Someshwara IV) ರಾಜಧಾನಿಯಾಗಿ ಮತ್ತು ಹೊಯ್ಸಳ ದೊರೆ ವೀರ ಬಲ್ಲಾಳನ ಉಪರಾಜಧಾನಿಯಾಗಿಯೂ ಹಾಗೂ ದಕ್ಷಿಣದ ವಾರಾಣಾಸಿಯಾಗಿ ಅಣ್ಣಿಗೇರಿ ಪ್ರಸಿದ್ಧಿ ಪಡೆದಿತ್ತು. ಅಣ್ಣಿಗೇರಿಯಲ್ಲಿನ ಅಮೃತೇಶ್ವರ ದೇವಸ್ಥಾನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

ನೀವು ಇದನ್ನು ಇಷ್ಟ ಪಡಬಹುದು: ಹೆಮ್ಮೆಯ ಹಂಪಿಗೊಂದು ಇರಲಿ ನಿಮ್ಮ ಭೇಟಿ

Must visit places in Hubballi and Dharward

ಕಲ್ಯಾಣಿ ಚಾಲುಕ್ಯರ ಶೈಲಿಯ ದೇವಸ್ಥಾನವಾಗಿದೆ. 76 ಕಂಬಗಳ ಗರ್ಭಗೃಹ ಅಂತರಾಳ, ನವರಂಗ, ಸಭಾಮಂಟಪ ಮತ್ತು ಗಜಲಕ್ಷ್ಮಿ ಶಿಲ್ಪಗಳನ್ನು ಒಳಗೊಂಡಿರುವ ಈ ದೇವಸ್ಥಾನ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಅಣ್ಣಿಗೇರಿಯು ರಾಜ-ಮಹಾರಾಜರ ಕಾಲದಿಂದಲೂ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ಪಾಶ್ವನಾರ್ಥ ಬಸದಿಯನ್ನು ರೈಲುಬೋಗಿಯಂತೆ ನಿರ್ಮಿಸಲಾಗಿದೆ. ಪ್ರತಿವರ್ಷ ಶಿವರಾತ್ರಿದಂದು ಜಾತ್ರಾ ಮಹೋತ್ಸವ ಜರಗುತ್ತದೆ.

ಚಂದ್ರಮೌಳೇಶ್ವರ ದೇವಸ್ಥಾನ(Chandramouleshwara Temple)

ಶ. 9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ (Shiva Temple)ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿದೆ(Unakal). ಚಂದ್ರಮೌಳೇಶ್ವರ ಶಿವನ ಮತ್ತೊಂದು ಹೆಸರು. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ. ವಾಸ್ತುಶೈಲಿಯ ಉತ್ತಮ ಉದಾಹರಣೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

Must visit places in Hubballi and Dharward

9 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ದೇವಸ್ಥಾನ. ಈ ದೇವಾಲಯ ಇತರೆ ಶಿವ ದೇವಾಲಯಗಳಿಗಿಂತ ವಿಭಿನ್ನವಾಗಿದೆ. ಎರಡು ದೊಡ್ಡ ಶಿವಲಿಂಗಗಳನ್ನು ಹೊಂದಿದೆ. ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದಲ್ಲಿದೆ. ಚಂದ್ರಮೌಳೇಶ್ವರ ಶಿವನ ಮತ್ತೊಂದು ಹೆಸರು. ದೇವಾಲಯ ಕಪ್ಪು ಗ್ರಾನೈಟ್ ಸ್ತಂಭಗಳಿಂದ ಕೂಡಿದೆ. ವಾಸ್ತುಶೈಲಿಯ ಉತ್ತಮ ಉದಾಹರಣೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button