ವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ಈ ದೇಗುಲದಲ್ಲಿ ಶಿವನು ಪದ್ಮಾಸನದಲ್ಲಿ ಕುಳಿತಿಹನು

ಅರಬ್ಬೀ ಕಡಲ ತೀರದ ಮದ್ಯ ನೆಲೆಸಿದ್ದು ಜಗತ್ತಪ್ರಸಿದ್ದಿ ಪಡೆದ, ರಮಣೀಯ ಪ್ರವಾಸಿತಾಣಗಳಲ್ಲಿ ಒಂದಾದ ಮುರ್ಡೇಶ್ವರ (Murdeshwar) ಇದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ.(Uttar Kannada Bhatkal )

ಮುರ್ಡೇಶ್ವರ ( Murdeshwar )ಎಂಬ ಹೆಸರಿನ ಮೂಲ ರಾಮಾಯಣ( Ramayana )ಕಾಲಕ್ಕೆ ಸೇರಿದ್ದಾಗಿದೆ. ಹಿಂದೂ ದೇವರುಗಳು ಆತ್ಮ ಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಮತ್ತು ಅಜೇಯತೆಯನ್ನು ಪಡೆದರು. ಲಂಕೆಯ ರಾಜನಾದ ರಾವಣನು( Ravana) ಆತ್ಮಲಿಂಗವನ್ನು ಪಡೆಯುವುದರ ಮೂಲಕ ಅಮರತ್ವವನ್ನು ಪಡೆಯಲು ಬಯಸುತ್ತಾನೆ. ಆತ್ಮಲಿಂಗವು ಶಿವನಿಗೆ ಸೇರಿದ್ದರಿಂದಾಗಿ ರಾವಣನು ಶಿವನಿಗೆ ಶ್ರದ್ದೆಯಿಂದ, ಭಕ್ತಿಯಿಂದ ಪೂಜಿಸುತ್ತಾನೆ.

Murdeshwar

ಇವನ ತಪಸ್ಸಿನ ಫಲವಾಗಿ ಶಿವನು ಪ್ರತ್ಯಕ್ಷಗೊಂಡಾಗ ರಾವಣನು(Ravana) ಆತ್ಮಲಿಂಗವನ್ನು ವರವಾಗಿ ಕೇಳಿದನು ಶಿವನು (Shiva)ರಾವಣನಿಗೆ ಲಂಕೇಯನ್ನು ತಲುಪುವ ಮೊದಲು ಆತ್ಮಲಿಂಗವನ್ನು ನೆಲಕ್ಕೆ ಇಡಬಾರದು, ಒಂದು ವೇಳೆ ನೆಲದ ಮೇಲೆ ಇರಿಸಿದರೆ ಅದು ಚಲಿಸುವುದು ಅಸಾಧ್ಯ ಮತ್ತು ಅದು ತನ್ನ ಶಕ್ತಿಯನ್ನೆಲ್ಲ ಕಳೆದುಕೊಳ್ಳುತ್ತದೆ ಎಂದು ಷರತ್ತನ್ನು ಹಾಕಿ ವರವನ್ನು ನೀಡುತ್ತಾನೆ.

ಈ ಘಟನೆಯನ್ನು ತಿಳಿದ ವಿಷ್ಣುವು ಆತ್ಮಲಿಂಗದಿಂದ ರಾವಣನು ಅಮರತ್ವವನ್ನು ಪಡೆಯಬಹುದು ಮತ್ತು ಭೂಮಿಯಮೇಲೆ ವಿನಾಶವನ್ನು ಉಂಟುಮಾಡಬಹುದು ಎಂದು ಅರಿತುಕೊಂಡು ಗಣೇಶನ ಬಳಿಗೆ ಬಂದು ಆತ್ಮಲಿಂಗವನ್ನು ಕೆಳಗಿಡಿಸುವ ಉಪಾಯವನ್ನು ಹೂಡಿದರು. ರಾವಣನು ಗೋಕರ್ಣವನ್ನು( Gokarna) ತಲುಪುತ್ತಿದ್ದಂತೆ ವಿಷ್ಣುವು(Vishnu )ಮುಸ್ಸಂಜೆಯ ನೋಟವನ್ನು ನೀಡಲು ಸೂರ್ಯನನ್ನು ಮರೆಯಾಗಿಸಿದನು.

ರಾವಣನು ಸಂಜೆಯ ವಿಧಿವಿಧಾನಗಳನ್ನು ಮಾಡಬೇಕಾಗಿತ್ತು, ಅಲ್ಲೇ ಇದ್ದ ಬ್ರಾಹ್ಮಣ ಬಾಲಕನ ವೇಷದಲ್ಲಿದ್ದ ಗಣೇಶನ ಬಳಿ ಆತ್ಮಲಿಂಗವನ್ನು ಕೊಟ್ಟು ನಾನು ಬರುವವರೆಗೂ ಲಿಂಗವನ್ನು ನೆಲಕ್ಕೆ ಇಡದಂತೆ ಕೇಳಿಕೊಂಡನು. ಗಣೇಶನು(Ganesh)ರಾವಣನನ್ನು ಮೂರು ಬಾರಿ ಕರೆಯುವುದಾಗಿ ಅಷ್ಟರೊಳಗೆ ಹಿಂದಿರುಗದಿದ್ದರೆ ಆತ್ಮಲಿಂಗವನ್ನು ನೆಲದ ಮೇಲೆ ಇಡುವುದಾಗಿಯೂ ಒಪ್ಪಂದ ಮಾಡಿಕೊಂಡನು.

Murdeshwar

ಒಪ್ಪಂದದ ಪ್ರಕಾರ ರಾವಣ ಹಿಂದಿರುಗದಿದ್ದಾಗ ಲಿಂಗವನ್ನು ನೆಲದ ಮೇಲೆ ಇಟ್ಟು ಗಣೇಶ ಹೋಗುತ್ತಾನೆ. ಇದರಿಂದ ಕೋಪಗೊಂಡ ರಾವಣ ಆತ್ಮಲಿಂಗವನ್ನು ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಾನೆ. ಆ ತುಂಡುಗಳು ಸಜ್ಜೆಶ್ವರ, ಗುಣೇಶ್ವರ, ಧಾರೇಶ್ವರ ಮತ್ತು ಮೃಡೇಶ್ವರ ಸ್ಥಳಕ್ಕೆ ತಲುಪುತ್ತದೆ. ನಂತರ ಮೃಡೇಶ್ವರವನ್ನು ಮುರ್ಡೇಶ್ವರ ಎಂದು ಮರುನಾಮಕರಣ ಮಾಡಲಾಗಿದೆ.

ಪ್ರಮುಖ ಆಕರ್ಷಣೆಗಳು
ಮುರ್ಡೇಶ್ವರ ದೇವಾಲಯವು ಮೂರು ಕಡೆಯಿಂದಲೂ ನೀರಿನಿಂದ ಆವರಿಸಿದೆ. ಬೃಹದಕಾರದ ಶಿವನ ಪ್ರತಿಮೆಯು 123 ಅಡಿ ಎತ್ತರ ಹೊಂದಿದ್ದು ಇದನ್ನು ನಂಬಿಕೆಯ ಪ್ರತಿಮೆ ಎಂದು ಕರೆಯಲಾಗುತ್ತದೆ. ಶಿವನ ಪ್ರತಿಮೆಯ ಕೆಳಗೆ ಭೂಕೈಲಾಸವಿದ್ದು ಇದು ಮುರ್ಡೇಶ್ವರದ ದಂತ ಕಥೆಯನ್ನು ಸಾರುತ್ತದೆ.237 ಅಡಿ ಎತ್ತರದ ರಾಜಗೋಪುರ ಅತ್ಯಂತ ಆಕರ್ಷಕವಾಗಿದೆ.
ದೇವಾಲಯದ ಜೊತೆಗೆ ಕಂದುಕ ಬೆಟ್ಟದ ಮೇಲೆ ಹಲವಾರು ಶಿಲ್ಪಗಳನ್ನು ಕೆತ್ತಲಾಗಿದೆ.

ಗೀತೋಪದೇಶ, ಸೂರ್ಯನ ರಥ, ಚಿಕ್ಕ ಬಾಲಕನ ರೂಪದಲ್ಲಿ ರಾವಣನ ಆತ್ಮಲಿಂಗವನ್ನು ಸ್ವೀಕರಿಸುವ ಗಣೇಶನ ಶಿಲ್ಪ ಮತ್ತು ಇತರ ಭೂದೃಶ್ಯಗಳು.

ದೇವಾಲಯದಲ್ಲಿ ಮಹಾಶಿವರಾತ್ರಿ(Maha Shivratri )ಕಾರ್ತಿಕ ಪೂರ್ಣಿಮವನ್ನು ದೇವಾಲಯದಲ್ಲಿ ಉತ್ಸಹದಿಂದ ಆಚರಿಸಲಾಗುತ್ತದೆ ಮತ್ತು ಪ್ರತಿ ವರ್ಷ ಜನವರಿ 20 ರಂದು ಮಹಾರಥೋತ್ಸವ ಜರುಗುತ್ತದೆ.

Murdeshwar

ದೇವಾಲಯದ ಮೂರು ಕಡೆಯಿಂದಲೂ ವಿಶಾಲವಾದ ಅರಬ್ಬೀ ಸಮುದ್ರವಿದ್ದು,ಜೆಟ್ ಸವಾರಿ ಮತ್ತು ಬೊಟ್ ಸವಾರಿ, ಫ್ಲೋಟಿಂಗ್ ಬ್ರಿಡ್ಜ್ ಮುಂತಾದ ಮನರಂಜನೆಯನ್ನು ಒಳಗೊಂಡಿದೆ. ವಿದೇಶಿಗರ ಮನಸೆಳೆಯುವ ಸ್ಕೋಬಾ ಡೈವಿಂಗ್ ಇದೆ. ಮುರ್ಡೇಶ್ವರದಿಂದ ಕಾಣಸಿಗುವ ದ್ವೀಪವೆಂದರೆ ಅದು ನೇತ್ರಾಣಿ. ಅತ್ಯಂತ ಶಾಂತವಾದ ಪ್ರದೇಶವೆಂದು ಹೆಸರುವಾಸಿಯಾದ ಈ ಸ್ಥಳಕ್ಕೆ ಬೋಟಿಂಗ್ ಮೂಲಕ ಹೋಗುವ ವ್ಯವಸ್ಥೆಯಿದೆ.

ನೀವು ಇದನ್ನು ಇಷ್ಟ ಪಡಬಹುದು:15 ಸಾವಿರವಿದ್ದರೆ ಸಾಕು ಈ ದೇಶಗಳಿಗೆ ವಿಮಾನದಲ್ಲಿ ಹೋಗಬಹುದು

ಅಕ್ಕ ಪಕ್ಕದಲ್ಲಿ ಪ್ರಸಿದ್ಧ ತಾಣಗಳು
ಇಡಗುಂಜಿ ಗಣಪತಿ ದೇವಾಲಯ, ಸಾರದಹೊಳೆ ಹನುಮಂತರಾಯ, ಹೊನ್ನಾವರದ ಇಕೋ-ಬೀಚ್, ಅಪ್ಪರಕೊಂಡ, ಕಾಂಡ್ಲಾ ನಡಿಗೆ, ಶರಾವತಿ ಹಿನ್ನೀರು, ಮಿರ್ಜಾನ್ ಕೋಟೆ, ಗೇರುಸೊಪ್ಪ ಜೈನ ಬಸಿದಿ ಮತ್ತು ತೂಗು ಸೇತುವೆ, ಊರೂರುಗಳಲ್ಲಿ ಹರಿಯುವ ಜಲಪಾತಗಳು, ಹಳ್ಳ ಕೊಳ್ಳಗಳು, ಸರ್ವಧರ್ಮೀಯರೂ ಸೇರಿ ಆಚರಿಸುವ ಜಾತ್ರೆ, ಗಣೇಶೋತ್ಸವ, ದೀಪಾವಳಿ ಹಬ್ಬಗಳು, ಕೈ ಮುಗಿದು ನಿಲ್ಲುವಂತೆ ಮಾಡುವ ನಾಗಾರಾಧನೆ, ಯಕ್ಷಗಾನ.

Murdeshwar


ತಲುಪುವುದು ಹೇಗೆ
ಹತ್ತಿರದ ರಸ್ತೆ – ಮಂಗಳೂರಿನಿಂದ(Mangalore)165 ಕಿಮೀ ಮತ್ತು ಬೆಂಗಳೂರಿನಿಂದ(Bangalore)455 ಕಿಮೀ
ಹತ್ತಿರದ ರೈಲು ನಿಲ್ದಾಣ – ಮುರುಡೇಶ್ವರ ನಿಲ್ದಾಣವು ದೇವಸ್ಥಾನದಿಂದ ಕೇವಲ 2 ಕಿಮೀ ದೂರದಲ್ಲಿದೆ.
ವಿಮಾನದ ಮೂಲಕ – ದೇವಸ್ಥಾನದಿಂದ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇವಸ್ಥಾನದಿಂದ ಸುಮಾರು 165 ಕಿಮೀ ದೂರದಲ್ಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button