ಅಸ್ಸಾಂನಲ್ಲಿ ನೋಡಬಹುದಾದ ತಾಣಗಳು
ಈಶಾನ್ಯ ಭಾರತದ ರಾಜ್ಯ(Northeast State)ಅಸ್ಸಾಂ.(Assam)ಚಹಾ ಮತ್ತು ರೇಷ್ಮೆಗೆ( Silk) ಹೆಸರುವಾಸಿ. ಸಾಕಷ್ಟು ಅದ್ಭುತ ಪ್ರವಾಸಿ ತಾಣಗಳು ಇಲ್ಲಿವೆ. ಅಂತಹ ಕೆಲವು ತಾಣಗಳು ಇಲ್ಲಿವೆ.
ಸುಲ್ಕುಚಿ (Sualkuchi)
ಅಸ್ಸಾಂನ ಮ್ಯಾಂಚೆಸ್ಟರ್ (Manchester) ಕಾಮ್ರೂಪ್ (Kamrup)ಜಿಲ್ಲೆಯ, ಬೃಹ್ಮಪುತ್ರ(Brahmaputra)ನದಿಯ ದಡದಲ್ಲಿದೆ. ಕೈಮಗ್ಗ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದೆ. ಅಸ್ಸಾಮಿ ರೇಷ್ಮೆ ಉಡುಪುಗಳಿಗೆ ಈ ಗ್ರಾಮ ಹೆಸರುವಾಸಿ.
ಇಲ್ಲಿನ ಜವಳಿ ಉತ್ಪನ್ನಗಳಿಗೆ ಭಾರತದ ನಾನಾ ಭಾಗಗಳಲ್ಲಿ ಸಾಕಷ್ಟು ಬೇಡಿಕೆ ಇದೆ ಗುವಾಹಟಿಯಿಂದ (Guwahati)ಸುಮಾರು 35 ಕಿಮೀ ದೂರದಲ್ಲಿರುವ ಸುಲ್ಕುಚಿ ನೇಯ್ಗೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಪಂಚದ ಅತಿ ದೊಡ್ಡ ಗ್ರಾಮ.
ದಿಗ್ಬೋಯ್ ರಿಫೈನರಿ (Digboi Refinery)
ಭಾರತದ ಮೊದಲ ತೈಲ ಸಂಸ್ಕರಣಾಗಾರ ಇದು. ಡಿಗ್ಬೋಯ್ ಸಂಸ್ಕರಣಾಗಾರವು ದೇಶದ ಅತ್ಯಂತ ಹಳೆಯ ತೈಲ ಬಾವಿಯನ್ನು ಹೊಂದಿದೆ. ಇಲ್ಲಿ ದಿಗ್ಬೋಯ್ ರಿಫೈನರಿ ಜತೆಗೆ ಸಾಕಷ್ಟು ಸುಂದರವಾದ ಬ್ರಿಟಿಷ್ (British)ಬಂಗಲೆಗಳೂ ಇವೆ.
ಡಿಗ್ಬೋಯ್ನಲ್ಲಿರುವ ಸಂಸ್ಕರಣಾಗಾರವು ವರ್ಷಕ್ಕೆ 0.50 ಮಿಲಿಯನ್ ಟನ್ಗಳಷ್ಟು ಸಾಮರ್ಥ್ಯವನ್ನು ಹೊಂದಿತ್ತು. 1996ರ ಜುಲೈನಲ್ಲಿ ಸಂಸ್ಕರಣಾಗಾರದ ಆಧುನೀಕರಣದ ಮೂಲಕ ಇಲ್ಲಿನ ಸಂಸ್ಕರಣಾ ಸಾಮರ್ಥ್ಯವನ್ನು ವರ್ಷಕ್ಕೆ 0.65 ಮಿಲಿಯನ್ ಟನ್ಗಳಿಗೆ ಹೆಚ್ಚಿಸಲಾಯಿತು
ತಲತಾಲ್ ಘರ್(Talatal Ghar)
ತಲತಾಲ್ ಘರ್ ಅರಮನೆ(Palace).ಅಹೋಮ್ ರಾಜ(Ahaom Dynesty )ನೆಚ್ಚಿನ ತಾಣ. ಅಹೋಮ್ ವಾಸ್ತುಶಿಲ್ಪಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ.
ಒಟ್ಟು ಏಳು ಅಂತಸ್ತುಗಳನ್ನು ಹೊಂದಿರುವ ಈ ಅರಮನೆ, ಅಸ್ಸಾಂನ ಅತಿದೊಡ್ಡ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ತಲಾತಲ್ ಘರ್ 18 ನೇ ಶತಮಾನದ ಅರಮನೆ ಮತ್ತು ಸೇನಾ ನೆಲೆ.
ನೀವು ಇದನ್ನೂ ಓದಿ ಇಷ್ಟ ಪಡಬಹುದು :ಬಿಹಾರದಲ್ಲಿ ನೋಡಬಹುದಾದ ತಾಣಗಳು
ರಂಗ್ ಘರ್ (Rang Ghar)
ಇದು ಏಷ್ಯಾದ (Asia)ಮೊದಲ ಆಂಫಿಥಿಯೇಟರ್ ಕೂಡಾ. ರಾಜಮನೆತನದ ಕ್ರೀಡಾ ಮಂಟಪ. ಇದರ ಇತಿಹಾಸ ಕ್ರಿ.ಶ.1746. ಎರಡು ಅಂತಸ್ತಿನ ಕಟ್ಟಡವಿದು. ಶಿವಸಾಗರ(Shivasagar) ಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ.
ಸೂರ್ಯ ಪಹಾರ್(Surya Pahar)
ಭಟಿಯಾಪಾರಾದಲ್ಲಿರುವ (Bhatiapara)ಸೂರ್ಯ ಪಹಾರ್ ಪುರಾತತ್ತ್ವ ಶಾಸ್ತ್ರದ ತಾಣ.ಸೂರ್ಯ ಪಹಾರ್ ಗುವಾಹಟಿ ನಗರದಿಂದ ಸುಮಾರು 127 ಕಿಮೀ ದೂರದಲ್ಲಿದೆ. ಸೂರ್ಯನ ಬೆಟ್ಟ ಎಂದು ಕರೆಯುತ್ತಾರೆ.
ಸ್ಥಳೀಯರ ಪ್ರಕಾರ ಇಲ್ಲಿ 99,999 ಶಿವಲಿಂಗಗಳಿವೆ. ಹಿಂದೂ,(Hindu )ಬೌದ್ಧರು(Buddhism)ಮತ್ತು ಜೈನರಿಗೆ(Jain) ಇದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಅಸ್ಸಾಂನಲ್ಲಿ ಭೇಟಿ ನೀಡಬಹುದಾದಂತಹ ಸುಂದರ ತಾಣಗಳಲ್ಲಿ ಇದು ಕೂಡಾ ಒಂದು.
ಕಾಜಿರಂಗ ರಾಷ್ಟ್ರೀಯ ಉದ್ಯಾನ (Kaziranga National park)
ವಿಶ್ವ ಪರಂಪರೆಯ ತಾಣ(World Heritage Site). ಕಾಜಿರಂಗ ರಾಷ್ಟ್ರೀಯ ಉದ್ಯಾನವು ಜಗತ್ತಿನಲ್ಲಿರುವ ಒಟ್ಟು ಏಕ ಕೊಂಬಿನ ಘೇಂಡಾಮೃಗ (ಖಡ್ಗಮೃಗ)ಗಳ ಪೈಕಿ ಮೂರನೆಯ ಎರಡು ಭಾಗಕ್ಕೆ ನೆಲೆಯಾಗಿದೆ.
ಗೋಲಾಘಾಟ್(Gholghat)ಮತ್ತು ನಾಗಾಂವ್(Nagon)ಜಿಲ್ಲೆಗಳಲ್ಲಿ ಹರಡಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಒಟ್ಟು ವಿಸ್ತೀರ್ಣ 430 ಚದರ ಕಿ.ಮೀ.ಗಳಷ್ಟು. ಈ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ ಬಲು ಸಾಂದ್ರವಾಗಿದ್ದು ಇದು ವಿಶ್ವದ ಕಾಪಿಟ್ಟ ಅರಣ್ಯಗಳ ಪೈಕಿ ಅತಿ ಹೆಚ್ಚೆನಿಸಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು 2006 ರಲ್ಲಿ ಹುಲಿ ಮೀಸಲು ಎಂದು ಘೋಷಿಸಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.