ದೂರ ತೀರ ಯಾನವಂಡರ್ ಬಾಕ್ಸ್ವಿಂಗಡಿಸದಸಂಸ್ಕೃತಿ, ಪರಂಪರೆ

ಅರುಣಾಚಲ ಪ್ರದೇಶದಲ್ಲಿ ನೋಡಬಹುದಾದ ತಾಣಗಳು

ಭಾರತದ ಈಶಾನ್ಯ ರಾಜ್ಯ(North East)ಅರುಣಾಚಲ ಪ್ರದೇಶ . ಹಿಂದೆ, ಅಸ್ಸಾಂನ(Assam) ಭಾಗವಾಗಿದ್ದವು. ಮತ್ತು ಈ ಭಾಗಗಳನ್ನು NEFA (North East Frontier Agency) ಎಂದು ಕರೆಯಲಾಗುತ್ತಿತ್ತು.

ಇಲ್ಲಿ ನೋಡಲು ಹಲವಾರು ಐತಿಹಾಸಿಕ, ಧಾರ್ಮಿಕ ನೆಲೆಗಳಿವೆ. ನೀವೂ ಪ್ರವಾಸ ಪ್ರಿಯರಾದರೆ ಈ ರಾಜ್ಯಕ್ಕೊಮ್ಮೆ ಭೇಟಿ ನೀಡಿ.

ಡಾಂಗ್ ಕಣಿವೆ (Dong Valley)

ಅರುಣಾಚಲ ಪ್ರದೇಶದ 1240 ಮೀಟರ್ ಎತ್ತರದಲ್ಲಿರುವ ರಾಜ್ಯದ ಡಾಂಗ್ ಕಣಿವೆಯು (Dong Valley) ಪ್ರತೀ ದಿನ “ದೇಶದ ಮೊದಲ ಸೂರ್ಯೋದಯ”(Sunrise)ಕ್ಕೆ ಸಾಕ್ಷಿಯಾಗುತ್ತದೆ.ಡಾಂಗ್ ಕಣಿವೆಯನ್ನು ಭಾರತದ ‘ಉದಯಿಸುತ್ತಿರುವ ಸೂರ್ಯನ ಭೂಮಿ’ ಎಂದೂ ಕರೆಯುತ್ತಾರೆ.

Must visit places in Arunchal Pradesh

ಈ ಕಣಿವೆಯು ದೇಶದ ಪೂರ್ವದ ತುದಿಗೆ ಹತ್ತಿರದಲ್ಲಿದೆ ಮತ್ತು ಪ್ರತಿದಿನ ಮೊದಲ ಸೂರ್ಯನ ಬೆಳಕನ್ನು ಪಡೆಯುತ್ತದೆ. ಜನರು ಸೂರ್ಯೋದಯವನ್ನು ವೀಕ್ಷಿಸಲು ಅತ್ಯುನ್ನತ ಶಿಖರ ಬಿಂದುವಿಗೆ ಚಾರಣ(Trekking )ಮಾಡುತ್ತಾರೆ.

ತವಾಂಗ್(Tawang)

ಅರುಣಾಚಲ ಪ್ರದೇಶದಲ್ಲಿ ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಹಿಮದಿಂದ ಕೂಡಿದ ಪರ್ವತಗಳು(Mountains )ಮತ್ತು ಪಾಸ್‌ಗಳಿಗೆ ಹೆಸರುವಾಸಿಯಾಗಿದೆ, ಇದು ಅರುಣಾಚಲ ಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ(Tourist Place) ಒಂದಾಗಿದೆ.

North East of India Arunchal Pradesh

ಶಾಂತಿ ಮತ್ತು ನೆಮ್ಮದಿಗಾಗಿ ಬೌದ್ಧ ಮಠಗಳಿಗೆ ಭೇಟಿ ನೀಡಬಹುದು.ಇದು ಇಟಾನಗರದಿಂದ 448 ಕಿಮೀ ದೂರದಲ್ಲಿದೆ ಮತ್ತು 3048 ಮೀಟರ್ ಎತ್ತರದಲ್ಲಿದೆ.ಭಾರತದ ಅತ್ಯಂತ ದೊಡ್ಡ ಮಠವಾದ ತವಾಂಗ್ ಮಠ (Tawang Temple) ಇರುವುದು ಈ ರಾಜ್ಯದಲ್ಲಿ.

ನೀವು ಇದನ್ನೂ ಇಷ್ಟ ಪಡಬಹುದು: ದೇಶದ ಅತಿ ದುಬಾರಿ ರೈಲು ಪ್ರಯಾಣಗಳಿವು

ಧೋಲಾ -ಸಾದಿಯಾ (Dhola Sadiya Bridge)

ಭೂಪೇನ್ ಹಜಾರಿಕಾ ಸೇತುವೆ ಎಂದು ಕರೆಯಲಾಗುತ್ತದೆ , ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

Must visit places in Arunchal Pradesh

ಈ ಸೇತುವೆಯು ಬ್ರಹ್ಮಪುತ್ರದ (Brahmaputra)ಪ್ರಮುಖ ಉಪನದಿಯಾದ ಲೋಹಿತ್(Lohith )ನದಿಯನ್ನು ವ್ಯಾಪಿಸಿದೆ , ಸೇತುವೆಯು ಉತ್ತರ ಅಸ್ಸಾಂ ಮತ್ತು ಪೂರ್ವ ಅರುಣಾಚಲ ಪ್ರದೇಶದ ನಡುವಿನ ಮೊದಲ ಶಾಶ್ವತ ರಸ್ತೆ ಸಂಪರ್ಕವಾಗಿದೆಅರುಣಾಚಲ ಪ್ರದೇಶದ ಲೋಹಿತ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಧೋಲಾ ಸಾದಿಯಾ ಸೇತುವೆಯು ಭಾರತದ ಅತಿ ಉದ್ದದ ಸಂಪರ್ಕ ಸೇತುವೆಯಾಗಿದೆ.

ಇಟಾ ಕೋಟೆ(Ita Fort)

ಅಹೋಮ್(Ahom) ಭಾಷೆಯಲ್ಲಿ “ಇಟಾ” (Uta)ಎಂದರೆ ಇಟ್ಟಿಗೆ. ಆದ್ದರಿಂದ ಈ ಪ್ರಾಚೀನ ಕೋಟೆಯನ್ನು “ಇಟ್ಟಿಗೆಗಳ ಕೋಟೆ” ಎಂದು ಕರೆಯಲಾಗುತ್ತದೆ.

North East of India

ಇಟಾ ಕೋಟೆ 15 ನೇ ಶತಮಾನದಷ್ಟು ಹಿಂದಿನದು ಎಂದು ಹೇಳಲಾಗುತ್ತದೆ.ಜಿತಾರಿ (Jitari)ರಾಜವಂಶದ ರಾಜ ರಾಮಚಂದ್ರ ಈ ಕೋಟೆಯನ್ನು ನಿರ್ಮಿಸಿದ. ಕೋಟೆಗೆ ಮೂರು ದೊಡ್ಡ ಪ್ರವೇಶದ್ವಾರಗಳಿವೆ. ಅವು ಕೂಡ ಸಾಕಷ್ಟು ಸುಂದರವಾಗಿವೆ.

ಗೊಂಪಾ ಮಂದಿರ(Gompa Temple)

ಶಾಂತಿ ಮತ್ತು ನೆಮ್ಮದಿ ಬಯಸುವವರಿಗೆ ಗೊಂಪಾ ಮಂದಿರವು ಪ್ರಶಸ್ತ್ಯವಾದ ಸ್ಥಳವಾಗಿದೆ. ಗುಡ್ಡಗಾಡುಗಳ ನಡುವೆ ಇರುವ ಗೊಂಪಾ ಮಂದಿರ ಇಟಾನಗರ(Ita Nagar) ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ.ಈ ಬೌದ್ಧ ದೇವಾಲಯವನ್ನು ನಿರ್ಮಿಸಿದವರು ಅಲ್ಲ ದಲೈ ಲಾಮಾ(Dalai Lam)

Must visit places in Arunchal Pradesh

ಗೊಂಪಾಗೆ ಬರುವಾಗ ಸಣ್ಣ ಮತ್ತು ಮಲ್ಟಿ-ಹ್ಯೂಡ್ ಪ್ರವೇಶ ದ್ವಾರ ನಿಮ್ಮನ್ನು ಸ್ವಾಗತಿಸುತ್ತದೆ. ದೇವಾಲಯದ ಒಳಗೆ ಭಗವಾನ್ ಬುದ್ಧನ ದೊಡ್ಡ ಪ್ರತಿಮೆಯಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button