ದೂರ ತೀರ ಯಾನನಮ್ ತಿಂಡಿ ರೆಸಿಪಿಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಕೊಪ್ಪಳದಲ್ಲಿ ನೋಡಬಹುದಾದ ತಾಣಗಳಿವು

ಬೆಂಗಳೂರಿನಿಂದ(Bangalore )ಸುಮಾರು 300 ಕಿ.ಮೀ ದೂರದಲ್ಲಿರುವ ಕೊಪ್ಪಳದಲ್ಲಿ(Koppal) ಅನೇಕ ಅದ್ಭುತವಾದ ಪ್ರವಾಸಿ ಸ್ಥಳಗಳಿವೆ.

ಸುಂದರವಾದ ದೇವಾಲಯಗಳು, ಮನರಂಜನಾ ಹಾಗು ಪಿಕ್ನಿಕ್‌ ತಾಣಗಳನ್ನು ಒಳಗೊಂಡಿದೆ.ಗಂಗ(Ganga,), ಹೊಯ್ಸಳ(Hoysala), ಚಾಲುಕ್ಯ(Chalukya ,)ರಾಜವಂಶಿಕರ ಕೊಡುಗೆಗಳಿಗೆ ಕೊಪ್ಪಳ ಸಾಕ್ಷಿಯಾಗಿದೆ. ಕೊಪ್ಪಳದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಕುರಿತಾದ ಮಾಹಿತಿ ಇಲ್ಲಿದೆ.

ಪಂಪಾ ಸರೋವರ(Pampa Sarovar)

ಐದು ಪವಿತ್ರ ಸರೋವರಗಳಲ್ಲಿ ಒಂದಾಗಿದೆ. ಹಿಂದೂ ಪುರಾಣದಲ್ಲಿ ಪಂಪಾ ಸರೋವರವನ್ನು ಶಿವನ(Shiva )ಪತ್ನಿ ಪಾರ್ವತಿಯ(Parvati )ಒಂದು ರೂಪವಾದ ಪಂಪಾ ಶಿವನಿಗೆ ಭಕ್ತಿ ತೋರಿಸುವುದಕ್ಕೆ ತಪಸ್ಸು ಮಾಡಿದ ಸ್ಥಳವಾಗಿದೆ.

ಕೊಪ್ಪಳ ಕೋಟೆ(Koppal Fort)

Must visit places in Koppal

ಕೊಪ್ಪಳದಲ್ಲಿ ಐತಿಹಾಸಿಕ ಕೊಪ್ಪಳ ಕೋಟೆ ಇದೆ. ಇದು ದೇಶದಲ್ಲಿರುವ ಪ್ರಬಲವಾದ ಕೋಟೆಗಳಲ್ಲಿ ಒಂದು ಎಂದು ಪರಿಗಣಿಸ್ಪಟ್ಟಿದೆ. ಈ ಭದ್ರವಾದ ಕೋಟೆ ಯಾರು ನಿರ್ಮಿಸಿದರು ಎಂಬುದರ ಬಗ್ಗೆ ಇನ್ನು ಗೊಂದಲವಿದೆ. ಆದಾಗ್ಯೂ, 1786 ರ ಸಮಯದಲ್ಲಿ ಟಿಪ್ಪು ಸುಲ್ತಾನ್‌(Tippu Sultan) ಸ್ವಾಧೀನಪಡಿಸಿಕೊಂಡರು. ಅಷ್ಟೇ ಅಲ್ಲ, ಫ್ರೆಂಚ್‌ (French)ಇಂಜಿನಿಯರ್‌ಗಳ ಸಹಾಯದಿಂದ ಕೋಟೆಯನ್ನು ಪುನರ್ ನಿರ್ಮಿಸಿದರು ಎನ್ನಲಾಗಿದೆ.

ಆನೆಗುಂದಿ (Anegundi)

ಆನೆಗುಂದಿಯನ್ನು ಹಂಪಿಗಿಂತ(Hampi )ಹೆಚ್ಚು ಪುರಾತನವಾದುದು ಎಂದು ಹೇಳಲಾಗುತ್ತದೆ. ಪೌರಾಣಿಕ ಕಥೆಗಳಲ್ಲಿಯು ಈ ಆನೆಗುಂಡಿ ಅಥವಾ ಆನೆಗುಂದಿಯ ಬಗ್ಗೆ ಉಲ್ಲೇಖವಿದೆ. ಇಲ್ಲಿ ಕೂಡ ಅನೇಕ ಪುರಾತನವಾದ ದೇವಾಲಯ ಹಾಗು ಕೋಟೆಗಳನ್ನು ನೋಡಬಹುದು. ಆನೆಗುಂದಿಯಲ್ಲಿ ಪಂಪಾ ಸರೋವರ, ಚಿಂತಾಮಣಿ ದೇವಾಲಯ( Chintamani Temple) ಹಾಗು ರಂಗನಾಥ ದೇವಾಲಯ(Ranganatha Temple) ತುಂಬಾನೇ ಜನಪ್ರಿಯವಾಗಿದೆ.

Must visit places in Koppal

ಕಿಶ್ಕಿಂದೆ(Kishkinde )ಎಂದೂ ಕರೆಯಲ್ಪಡುವ ಅನೆಗುಂಡಿ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ ಅಂಜನಾದ್ರಿ ಬೆಟ್ಟ(Anjanadri Hills), ಅನೆಗುಂಡಿ ಕೋಟೆ, ಗಗನ್ ಮಹಲ್(Gagan Mahal), ಸನಾಪುರ ಸರೋವರ(Sanapura Sarovar), ಪಂಪ ಸರೋವರ, ಕೃಷ್ಣದೇವರಾಯ ಸಮಾಧಿ ಇತ್ಯಾದಿಗಳು ಆನೆಗುಂಡಿಯ ಪ್ರಮುಖ ಆಕರ್ಷಣೆಗಳು.

ನೀವು ಇದನ್ನು ಇಷ್ಟ ಪಡಬಹುದು: ಹುಬ್ಬಳ್ಳಿ ಧಾರವಾಡದಲ್ಲಿ ನೋಡಬಹುದಾದ ತಾಣಗಳು

ಅಂಜನಾದ್ರಿ ಬೆಟ್ಟ (Anjanadri Hills)

ಹನುಮಂತ ಜನಿಸಿದ ಎನ್ನಲಾದ ಅಂಜನಾದ್ರಿ ಬೆಟ್ಟ ಇರುವುದೂ ಇಲ್ಲಿಯೇ. ಆ ಬೆಟ್ಟದ ತಪ್ಪಲಿನಲ್ಲಿಯೇ ನೂರಾರು ವಿಸ್ಮಯಗಳಿವೆ. ಈ ದೇವಾಲಯದ ಒಳಗಡೆ ಹನುಮನ (Hanuman)ಇಷ್ಟದೇವತೆಗಳಾದ ರಾಮ(Rama) ಸೀತೆಯರನ್ನು(Site) ಪೂಜಿಸಲಾಗುತ್ತದೆ. ಈ ಬೆಟ್ಟವನ್ನು ಹತ್ತಲು ನೀವು 550 ಮೆಟ್ಟಿಲುಗಳನ್ನು ಏರಬೇಕು. ಈ ಮೆಟ್ಟಿಲುಗಳನ್ನು ಏರಲು 45-60 ನಿಮಿಷಗಳು ಸಾಕು.

Must visit places in Koppal

ಅಂಜನಾದ್ರಿಯನ್ನು ತಲುಪಲು ನೀವು ರಸ್ತೆ ಸಾರಿಗೆ ಮಾರ್ಗವನ್ನು ಆಯ್ದುಕೊಳ್ಳುವುದು ಸೂಕ್ತ. ಇಲ್ಲಿಗೆ ತಲುಪಲು ಸಾರ್ವಜನಿಕ ಸಾರಿಗೆಗಳು ಮತ್ತು ಖಾಸಗಿ ಸಾರಿಗೆಗಳನ್ನು ಬಳಸಬಹುದು. ಕೊಪ್ಪಳ ನಗರದಿಂದ ಇಲ್ಲಿಗೆ ತಲುಪಲು ಒಂದು ಗಂಟೆ ಬೇಕಾಗುತ್ತದೆ.

ಗವಿಮಠ (Gavimath

ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಾರಣಾಸಿಯಿಂದ(Varanasi )ಬಂದ ಶ್ರೀ ರುದ್ರಮುನಿ ಶಿವಯೋಗಿಗಳು(Rudramuni Shivayogi)ಮಠವನ್ನು ಸ್ಥಾಪಿಸಿದ ಮೂಲ ಗುರುಗಳಾಗಿದ್ದಾರೆ. ಕೊಪ್ಪಳದ ಗವಿಮಠದ ಪ್ರಮುಖ ಆರಾಧ್ಯಕೇಂದ್ರ ಗವಿಸಿದ್ದೇಶ್ವರ(Gavi siddeshwara) ಕರ್ತೃ ಗದ್ದುಗೆ. ಇದು ಮಠದ ಹನ್ನೊಂದಡೆ ಪೀಠಾಧಿಪಾತಿಯಾಗಿದ್ದ ಗವಿಸಿದ್ದೇಶ್ವರ ಸ್ವಾಮೀಜಿಯವರ ಕ್ರಿಯಾಸಮಾಧಿಯಾಗಿದೆ.

Must visit places in Koppal

ಇದೇ ಕರ್ತೃ ಗುದ್ದುಗೆ ಭಕ್ತರ ಆರಾಧನೆಯ ಕೇಂದ್ರವಾಗಿದೆ. ಗವಿಸಿದ್ದೇಶ್ವರ ಶ್ರೀಗಳ ಗುರುಗಳಾಗಿದ್ದ ಹತ್ತನೇ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ, ತಾವು ಲಿಂಗೈಕ್ಯರಾಗಲು ಮಠದಲ್ಲಿ ನಿರ್ಮಿಸಿಕೊಂಡಿದ್ದ ಕ್ರಿಯಾಸಮಾಧಿಯನ್ನು ತಾವೇ ಜೀವಂತ ಪ್ರವೇಶಿಸಿದ್ದ ಹನ್ನೊಂದನೆ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿಯವರು ಗುರುಗಳ ಬದಲಿಗೆ ತಾವೇ ಕ್ರಿಯಾ ಸಮಾಧಿಯನ್ನು ಪ್ರವೇಶಿಸಿ, ಲಿಂಗ ಪೂಜೆ ಮಾಡುತ್ತಾ ಜೀವಂತ ಸಮಾದಿಯಾಗಿದ್ದಾರಂತೆ.

ಹೀಗಾಗಿ ಅವರನ್ನು ಈ ಭಾಗದಲ್ಲಿ ದೇವರ ಸ್ವರೂಪದಲ್ಲಿ ಭಕ್ತರು ಕಾಣುತ್ತಾರೆ. ಗವಿಸಿದ್ದೇಶ್ವರ ಸ್ವಾಮೀಜಿಯ ಗದ್ದುಗೆ ದರ್ಶನದಿಂದ ಜೀವನದ ಸಂಕಷ್ಟಗಳೆಲ್ಲಾ ದೂರವಾಗುತ್ತವೆ ಅನ್ನೋ ನಂಬಿಕೆ ಗವಿಮಠದ ಭಕ್ತರಲ್ಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರು ಗವಿಸಿದ್ದೇಶ್ವರ ಶ್ರೀಗಳ ಗದುಗೆಯ ದರ್ಶನ ಪೆಡದು ಪುನಿತರಾಗುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button