ದೂರ ತೀರ ಯಾನವಿಂಗಡಿಸದಸಂಸ್ಕೃತಿ, ಪರಂಪರೆಸೂಪರ್ ಗ್ಯಾಂಗು

ಹಂಪಿಯಲ್ಲಿ ನೋಡಬಹುದಾದ ತಾಣಗಳು

ಹಂಪಿ, (Hampi)ವಿಶ್ವ ಪ್ರಸಿದ್ಧ ತಾಣ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ(World Heritage Site). ವಿಜಯನಗರ(Vijayanagara )ಜಿಲ್ಲೆಯಲ್ಲಿರುವ ಈ ಸ್ಥಳದಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ.

ವಿಶ್ವದ ಅತಿದೊಡ್ಡ ಓಪನ್-ಏರ್ ಮ್ಯೂಸಿಯಂ ಎನಿಸಿಕೊಂಡಿರುವ ಹಂಪಿ ತುಂಗಭದ್ರ(TungaBhadra)ನದಿಯ ದಡದಲ್ಲಿರುವ ಈ ನಗರದಲ್ಲಿ ಬೃಹತ್ ಐತಿಹಾಸಿಕ ಅವಶೇಷಗಳು ಸೇರಿದಂತೆ ಹಲವು ಸಂಸ್ಕೃತಿಯನ್ನು ಬಿಂಬಿಸುವ ಹೆಗ್ಗರುತು ಇಲ್ಲಿವೆ.

Hampi Ustav

ವರ್ಷಕ್ಕೆ ಒಮ್ಮೆ ಹಂಪಿ ಉತ್ಸವವನ್ನು(Hampi Utsav) ಭರ್ಜರಿಯಾಗಿ ನಡೆಸಲಾಗುತ್ತದೆ. ಇನ್ನು ಹಂಪಿಗೆ ಹೋದಾಗ ತಪ್ಪದೇ ಭೇಟಿ ನೀಡಲೇಬೇಕಾದ ಸ್ಥಳಗಳು ಯಾವುವು ಎಂಬುದು ಇಲ್ಲಿದೆ.

ವಿರೂಪಾಕ್ಷ ದೇವಾಲಯ(Virupaksha Temple)

ವಿರೂಪಾಕ್ಷ ದೇವಾಲಯವು ವಿಜಯನಗರ ಕಾಲವನ್ನು ನೆನಪಿಸುತ್ತದೆ. ಹಂಪಿಯ ಸ್ಮಾರಕಗಳಲ್ಲಿ ಹೆಚ್ಚು ಆಕರ್ಷಣೀಯವಾಗಿದೆ. ಇಂತಹ ಪ್ರಾಚೀನ ಆಲಯವು ಯುನೆಸ್ಕೋ(UNESCO )ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ.

Virupaksha Temple, Hampi

ಮಹಾಶಿವನನ್ನು(Mahashiva )ವಿರೂಪಾಕ್ಷ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇನ್ನು, ಆಲಯವನ್ನು 7 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ .

ಎಲಿಫೆಂಟ್ ಸ್ಟೇಬಲ್‌ (Elephant Stable)

ಹಂಪಿಯಲ್ಲಿರುವ ಅಶ್ವಶಾಲೆಗಳು 16 ನೇ ಶತಮಾನಕ್ಕೆ ಸೇರಿದ್ದು, ಅಶ್ವಶಾಲೆಯ ಸಮೀಪದಲ್ಲಿ ಹಲವಾರು ದೇವಾಲಯಗಳು ಇದ್ದವು ಎನ್ನಲಾಗುತ್ತದೆ. ಇದನ್ನು ಎಲಿಫೆಂಟ್ ಸ್ಟೇಬಲ್‌ (Elephant Stable)ಎಂದು ಸಹ ಕರೆಯುತ್ತಾರೆ.

Must visit places within Hampi

ಇಲ್ಲಿನ ಪ್ರಭಾವಶಾಲಿ ರಚನೆಗಳು ವಿಜಯನಗರ ಸಾಮ್ರಾಜ್ಯದ ಜೀವನವನ್ನು ನೆನಪಿಸುತ್ತದೆ. ರಾಜವಂಶದ ಅಶ್ವಗಳನ್ನು ಇಲ್ಲಿಯೇ ಇರಿಸಲಾಗುತ್ತಿತ್ತು ಎನ್ನುವ ಪ್ರತೀತಿ ಇದೆ.

ಹಂಪಿ ಬಜಾರ್(Hampi Bazaar)

ಹಂಪಿಯ ಹಂಪಿ ಬಜಾರ್‌ ಪ್ರಸಿದ್ಧ ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿಯೇ ಇದೆ. ಮುಖ್ಯವಾಗಿ 16 ನೇ ಶತಮಾನದ ಜನರ ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ. ಇದು ಕೂಡ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

Must visit places within Hampi

ವಿಜಯನಗರ (Vijayanagara)ಸಾಮ್ರಾಜ್ಯದ ಅವಶೇಷಗಳನ್ನು ಸಂಪೂರ್ಣವಾಗಿ ಅನ್ವೇಷಿಸಲು ಹಂಪಿ ಬಜಾರ್‌ಗೆ ಭೇಟಿ ನೀಡಿ.

ನೀವು ಇದನ್ನು ಓದಬಹುದು: ಬೀದರ್ ಗೆ ಹೋದರೆ ಈ ಜಾಗಗಳಿಗೆ ಹೋಗಿ ಬನ್ನಿ

ಮಾತುಂಗ ಬೆಟ್ಟ(Matanga Hill)

ಹಂಪಿಯ ಅತಿ ಎತ್ತರವಾದ ಸ್ಥಳವೆಂದರೆ ಅದು ಮಾತುಂಗ ಬೆಟ್ಟ ಆಗಿದೆ. ಮಾತುಂಗ ಬೆಟ್ಟಗಳು ಹಂಪಿ ಬಜಾರ್‌ನ ತುದಿಯಲ್ಲಿದ್ದು, ಬೆಟ್ಟದ ಮೇಲೆ ನಿಂತು ಹಂಪಿಯ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.ಈ ಬೆಟ್ಟದ ಮೇಲೆ ಸಣ್ಣ ದೇವಾಲಯಗಳಿವೆ(Temple)

Must visit places within Hampi

ನರಸಿಂಹ ದೇವಾಲಯ (Narasimha Temple)

ನರಸಿಂಹ ದೇವಾಲಯವು ಹಂಪಿಯ ಅತ್ಯಂತ ದೊಡ್ಡ ಪ್ರತಿಮೆಯಾಗಿದೆ. ಇದನ್ನು ಲಕ್ಷ್ಮಿ ನರಸಿಂಹ (Lakshmi Narasimha)ದೇವಾಲಯ ಎಂದೂ ಸಹ ಕರೆಯುತ್ತಾರೆ. ಇದು15 ನೇ ಶತಮಾನಕ್ಕೆ ಸೇರಿದ್ದು, ಕಣ್ಣುಕುಕ್ಕುವ ದೈತ್ಯ ಪ್ರತಿಮೆ ಇದಾಗಿದೆ.

Narasimha Temple

ಹಂಪಿಯಲ್ಲಿ ನೋಡಬಹುದಾದ ಇತರ ಸ್ಥಳ

ತಿರುವೆಂಗಲನಾಥ ದೇವಸ್ಥಾನ(Tiruvengalanatha Temple)

ಹಜಾರ ರಾಮ ದೇವಸ್ಥಾನ(Hazara Rama Temple)

ಸಾಸಿವೆಕಾಳು ಗಣೇಶ(Sasivekalu Ganesh Temple)

ವಿಠಲ ದೇವಸ್ಥಾನ(Vittala Temple)

ಹಿಪ್ಪಿ ದ್ವೀಪ(Hippi Island)

ಬಡವಿ ಲಿಂಗ (Badavi linga),ಇತ್ಯಾದಿ

Vittala Temple

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button