ಒಡಿಶಾದಲ್ಲಿ ನೋಡಬಹುದಾದ ತಾಣಗಳು
ಒಡಿಶಾ(Odisha)ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಸುರ್ದೀಘ ಇತಿಹಾಸವನ್ನು ಹೊಂದಿದೆ.
ಈ ಕಾರಣದಿಂದಲೇ ಒಡಿಶಾದ ಪ್ರವಾಸಕ್ಕೆ ದೇಶದ ನಾನಾ ಭಾಗಗಳಿಂದಲೇ ಅಲ್ಲದೆ, ವಿದೇಶಗಳಿಂದಲೂ ಜನರು ಭೇಟಿ ನೀಡುತ್ತಿರುತ್ತಾರೆ.ಇಲ್ಲಿ ನೋಡಬಹುದಾದ ತಾಣಗಳ ಮಾಹಿತಿ ಇಲ್ಲಿದೆ.
ಸೂರ್ಯ ದೇವಾಲಯ (Sun Temple In Konark)
ಒಡಿಶಾದಲ್ಲಿರುವ ಸೂರ್ಯ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ(World Heritage site)ಒಂದಾಗಿದೆ. . ಕೋನಾರ್ಕ್ನಲ್ಲಿರುವ ಸೂರ್ಯ ದೇವಾಲಯದ ಎತ್ತರವು ಸುಮಾರು 227 ಅಡಿಗಳಿಗಿಂತ ಹೆಚ್ಚು ಎತ್ತರವಾಗಿದೆ.
ಈ ಅದ್ಭುತವು ಸುಮಾರು 7 ಶತಮಾನದಲ್ಲಿ ನಿರ್ಮಾಣವಾಗಿದೆ, ಇದು ದೇಶದ ಅತಿ ಎತ್ತರದ ದೇವಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಬಾರಾಬತಿ ಕೋಟೆ (Barabati Fort)
ಒಡಿಶಾದ ಕಟಕ್ನಲ್ಲಿರುವ(Cuttack) ಈ ಐತಿಹಾಸಿಕ ಬಾರಾಬತಿ ಕೋಟೆಯು ಭವ್ಯವಾದ ಇತಿಹಾಸವನ್ನು ಹೊಂದಿದೆ. ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಪ್ರವೇಶ ದ್ವಾರವನ್ನು ಹೊಂದಿರುವ ಪ್ರಸಿದ್ಧ ಕೋಟೆ ಇದಾಗಿದೆ.
14ನೇ ಶತಮಾನದಲ್ಲಿ ಗಂಗ(Ganga) ರಾಜವಂಶದಿಂದ ನಿರ್ಮಿಸಲ್ಪಟ್ಟ ಕೋಟೆ ಕಟಕ್ ಪಟ್ಟಣದ ಅದ್ಭುತ ನೋಟವನ್ನು ಪ್ರವಾಸಿರಿಗೆ ನೀಡುತ್ತದೆ.ಇದೊಂದು ಭದ್ರವಾದ ಕೋಟೆಯಾಗಿದ್ದು, ೯ ಅಂತಸ್ತಿನ ಅರಮನೆಯ ಮಣ್ಣಿನ ದಿಬ್ಬವಾಗಿದೆ.
ಜಗನ್ನಾಥ ಈ ದೇವಾಲಯ (Jagannath Temple)
ಒಡಿಶಾವನ್ನು ‘ಜಗನ್ನಾಥನ ತವರು ರಾಜ್ಯವೆಂದೇ’ ಕರೆಯುತ್ತಾರೆ. ಕ್ರಿ.ಶ 12ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಾಲಯವು ಜಗನ್ನಾಥನ ನೆಲೆಯಾಗಿದೆ.
ಸ್ವಾಮಿಯನ್ನು ಭಕ್ತಿಯಿಂದ ನಮಿಸಲು ವಿಶ್ವದಾದ್ಯಂತ ಜನರು ಪುರಿಗೆ(Puri) ಭೇಟಿ ನೀಡುತ್ತಾರೆ.ದೇವಾಲಯದ ಶಿಖರದ ಮೇಲೆ ಹಿಂದೂ ದೇವತೆಗಳ ಶಿಲ್ಪಗಳನ್ನು ನೀವು ಗಮನಿಸಬಹುದು.
ಚಿಲ್ಕಾ ಸರೋವರ (Chilika Lake)
ಒಡಿಶಾದಲ್ಲಿರುವ ಚಿಲ್ಕಾ ಸರೋವರ ಪಕ್ಷಿಪ್ರೇಮಿಗಳ ಸ್ವರ್ಗ. ಅದರಲ್ಲೂ ಫೆಬ್ರವರಿಯ ಸಮಯದಲ್ಲಿ ಸಾಕಷ್ಟು ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ. ಮುಖ್ಯವಾಗಿ ಫ್ಲೆಮಿಂಗೋ, (Flamingo)ಸೇರಿದಂತೆ ಬಗೆಬಗೆಯ ಪಕ್ಷಿಗಳು ಸಾವಿರಾರು ಕಿಮೀ ದೂರದಿಂದ ಹಾರಿ ಇಲ್ಲಿ ಬರುತ್ತವೆ. ಇಂಥ ಸಮಯದಲ್ಲಿ ಸರೋವರ ನೋಡುವುದೇ ಒಂದು ಸೊಗಸು. ಛಾಯಾಗ್ರಹಣ ಆಸಕ್ತರಿಗೂ ಇದು ಅತ್ಯುತ್ತಮ ತಾಣ.
ನೀವು ಇದನ್ನೂ ಇಷ್ಟ ಪಡಬಹುದು : ನಾಗಾಲ್ಯಾಂಡ್ ನಲ್ಲಿ ನೋಡಬಹುದಾದ ತಾಣಗಳು
ಭುವನೇಶ್ವರದ ದೇವಾಲಯಗಳು (Bhubaneswar Temple)
ಲಿಂಗರಾಜ ದೇವಸ್ಥಾನ,(Lingaraj Temple) ರಾಜರಾಣಿ ದೇವಾಲಯ(Rajarani Temple), ಮುಕ್ತೇಶ್ವರ ದೇವಸ್ಥಾನ(Mukteshwar Temple)ಸೇರಿದಂತೆ ಹಲವು ದೇವಾಲಯಗಳು ಭುವನೇಶ್ವರದಲ್ಲಿ ನೋಡಲೇಬೇಕಾದವುಗಳು. ಸಿಟಿ ಆಫ್ ಟೆಂಪಲ್ಸ್(City Of Temples) ಎಂದು ಕರೆಯುತ್ತಾರೆ.
ರಘುರಾಜಪುರ (Raghurajapur)
ಚಿತ್ರಕಲೆ, ಸಂಸ್ಕೃತಿಯಲ್ಲಿ ಆಸಕ್ತರಿಗೆ (Painting and Culture) ಇದೊಂದು ಮಿಸ್ ಮಾಡಬಾರದ ತಾಣ. ಈ ಹಳ್ಳಿಯಲ್ಲಿ ಪಾರಂಪರಿಕ ಕಲೆಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಪ್ರತಿ ಮನೆಯ ಮಂದಿಯೂ ಪಟಚಿತ್ರ ಕಲೆಯಲ್ಲಿ ಪರಿಣಿತರು. ಇಡೀ ಹಳ್ಳಿಯೇ ಕಲಾಸೇವೆಯನ್ನೇ ಬದುಕಾಗಿಸಿದವರು.
ಹಿರಾಕುಡ್ ಅಣೆಕಟ್ಟು (Hirakud Dam)
ಮಹಾನದಿ ನದಿಗೆ(Mahanadi River)ಅಡ್ಡಲಾಗಿ ನಿರ್ಮಿಸಲಾಗಿದೆ , ಇದು ಭಾರತದ ಒಡಿಶಾ ರಾಜ್ಯದ ಸಂಬಲ್ಪುರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ . ಇದು ವಿಶ್ವದ ಅತಿ ಉದ್ದದ ಮಣ್ಣಿನ ಅಣೆಕಟ್ಟು. ಅಣೆಕಟ್ಟಿನ ಹಿಂದೆ ಹಿರಾಕುಡ್ ಜಲಾಶಯವು 55 ಕಿಮೀ ಉದ್ದದ ಸರೋವರವನ್ನು ವಿಸ್ತರಿಸಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.