Moreಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತದಲ್ಲಿರುವ ಈ ಐತಿಹಾಸಿಕ “ಕಾರಾಗೃಹಗಳು” ಪ್ರವಾಸಿಗರಿಗೆ ಮುಕ್ತವಾಗಿದೆ;

“ಜೈಲು ಪ್ರವಾಸೋದ್ಯಮ” (Jail Tourism) ಎಂದಾದರೂ ಕೇಳಿದ್ದೀರಾ?ಸಾಮಾನ್ಯವಾಗಿ ಇಲ್ಲಿಗೆ ಯಾರೂ ಇಷ್ಟಪಟ್ಟು ಹೋಗಲು ಬಯಸುವುದಿಲ್ಲ.

ಜೀವನದಲ್ಲಿ ಯಾವುದೋ ಕಹಿ ಘಟನೆಯಿಂದ ಮಾಡಿದ ತಪ್ಪಿಗೆ ಇಲ್ಲಿ ಹೋಗಬೇಕಾತ್ತದೆ. ಒಂದು ರೀತಿಯಲ್ಲಿ, ತಪ್ಪಿತಸ್ಥರನ್ನು ತಿದ್ದಿ ಬುದ್ಧಿ ಹೇಳುವ ಶಾಲೆ “ಕಾರಾಗೃಹ”(Prisons).

ಆದರೆ ಭಾರತದಲ್ಲಿರುವ ಈ ಕಾರಾಗೃಹಗಳಿಗೆ ನೀವು ಯಾವ ತಪ್ಪನ್ನೂ ಮಾಡದೇ ಒಬ್ಬ ಪ್ರವಾಸಿಗನಾಗಿ ಭೇಟಿ ನೀಡಬಹುದು.

ಹೌದು, ಭಾರತದಲ್ಲಿ ಕೆಲವು ಐತಿಹಾಸಿಕವಾಗಿ ಮಹತ್ವದ ಜೈಲುಗಳನ್ನು (Historical Prisons) ಅನ್ವೇಷಿಸಲು ಸಂದರ್ಶಕರಿಗೆ ಅವಕಾಶಗಳಿವೆ.

ಭಾರತದ ಈ ಕಾರಾಗೃಹಗಳು ಭೂತಕಾಲದಲ್ಲಿ ನಡೆದ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಹೋರಾಟಗಳನ್ನು (Indian Independence movement) ನೆನಪಿಸುತ್ತವೆ. ಅಂತಹ ಕಾರಾಗೃಹಗಳ ಮಾಹಿತಿ ಇಲ್ಲಿದೆ.

1.ಸೆಲ್ಯುಲರ್ ಜೈಲ್, ಪೋರ್ಟ್ ಬ್ಲೇರ್: (Cellular Jail, Port Blair)

ಅಂಡಮಾನ್ ನ ಪೋರ್ಟ್ ಬ್ಲೇರ್ “ಸೆಲ್ಯುಲರ್ ಜೈಲ್” ಅನ್ನು “ಕಾಲಾ ಪಾನಿ” (Kala Pani) ಎಂದೂ ಕರೆಯಲಾಗುತ್ತದೆ.

ಇದು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಬಟುಕೇಶ್ವರ್ ದತ್ ಮತ್ತು ವೀರ್ ಸಾವರ್ಕರ್ (Veer Savarkar) ಅವರಂತಹ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಕಷ್ಟಗಳಿಗೆ ಸಾಕ್ಷಿಯಾಗಿದೆ.

ಸಂಜೆಯ ಸಮಯದಲ್ಲಿ ಇಲ್ಲಿ ಭಾರತೀಯ ಸ್ವಾತ್ರಂತ್ರ್ಯ ಹೋರಾಟದ ಕಥೆಗಳನ್ನು ನಿರೂಪಿಸಲಾಗುತ್ತದೆ.

2. ಅಗುಡಾ ಜೈಲು, ಗೋವಾ: (Aguada Jail, Goa)

ಗೋವಾದ ಅಗುಡಾ ಜೈಲು ಪೋರ್ಚುಗೀಸ್ ಆಳ್ವಿಕೆಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಮ್ ಮನೋಹರ್ ಮತ್ತು ಟಿಬಿ ಕುನ್ಹಾ ಅವರಂತಹ ಗಮನಾರ್ಹ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟ ಕಾರಾಗೃಹ.

3.ಯರವಾಡ ಜೈಲು, ಪುಣೆ, ಮಹಾರಾಷ್ಟ್ರ: (Yerawada Jail, Pune)

ಮಹಾರಾಷ್ಟ್ರದ ಪುಣೆಯಲ್ಲಿರುವ ಈ ಕಾರಾಗೃಹ ಭಾರತದ ಅತಿ ದೊಡ್ಡ ಕಾರಾಗೃಹಗಳಲ್ಲಿ ಒಂದಾಗಿದೆ. ಇದನ್ನು ಬ್ರಿಟಿಷರು 1957 ರಲ್ಲಿ ನಿರ್ಮಿಸಿದರು.

ಮಹಾತ್ಮ ಗಾಂಧಿ (Mahatma Gandhi), ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು ಮತ್ತು ಬಾಲಗಂಗಾಧರ ತಿಲಕ್ ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟ ಕಾರಾಗೃಹ ಇದಾಗಿದೆ.

4.ತಿಹಾರ್ ಜೈಲು, ನವದೆಹಲಿ: (Tihar Jail, New Delhi)

ದೆಹಲಿಯ ಈ ಜೈಲು ಭಾರತದ ಅತಿ ದೊಡ್ಡ ಕಾರಾಗೃಹವೆನಿಸಿದೆ. ಇಲ್ಲಿ ಜೈಲು ಉದ್ಯಮವನ್ನು ಸಂಪೂರ್ಣವಾಗಿ ಕೈದಿಗಳೇ ನಿರ್ವಹಿಸುತ್ತಾರೆ.

“ತಿಹಾರ್ ಬ್ರ್ಯಾಂಡ್” (Tihar Brand) ಅಡಿಯಲ್ಲಿ ಹಲವು ವಸ್ತುಗಳು ಇಲ್ಲಿ ಕೈದಿಗಳೇ ಉತ್ಪಾದಿಸುತ್ತಾರೆ.

5. ವೈಪರ್ ದ್ವೀಪ, ಅಂಡಮಾನ್: (Viper Island, Andaman)

ಅಂಡಮಾನ್ ನ ಈ ದ್ವೀಪವು ಭಾರತೀಯ ಇತಿಹಾಸದಲ್ಲಿ ಅತ್ಯಂತ ಕರಾಳ ದಿನಗಳಿಗೆ ಸಾಕ್ಷಿಯಾಗಿದೆ.

ಆಗಿನ ಕಾಲದಲ್ಲಿ ಬ್ರಿಟಿಷರ (British) ವಿರುದ್ಧ ಮಾತನಾಡುವವರನ್ನು ಇಲ್ಲಿಗೆ ಕರೆ ತಂದು ಚಿತ್ರಹಿಂಸೆ ನೀಡುತ್ತಿದ್ದರು.

6. ಸಂಗಾರೆಡ್ಡಿ ಕಾರಾಗೃಹ, ಹೈದರಾಬಾದ್: (Sangareddy Prison, Hyderabad)

220 ವರ್ಷಗಳಷ್ಟು ಹಳೆಯದಾದ ಈ ಕಾರಾಗೃಹವು ವಸಾಹತು ಯುಗದ ಜೈಲಾಗಿದ್ದು, ಇದನ್ನು ಈಗ ವಸ್ತು ಸಂಗ್ರಹಾಲಯವಾಗಿ (Museum) ಪರಿವರ್ತಿಸಲಾಗಿದೆ.

ಈ ವಸ್ತುಸಂಗ್ರಹಾಲಯವು ‘ಫೀಲ್ ದಿ ಜೈಲ್’ (Feel The Jail) ಯೋಜನೆಯ ಅಡಿಯಲ್ಲಿ, ಸಂದರ್ಶಕರು ಇಲ್ಲಿ 24 ಗಂಟೆಗಳ ಕಾಲ ಬಂಧಿಯಾಗಿ ಕೈದಿಯ ಅನುಭವವನ್ನು ಪಡೆಯಬಹುದು.

ಭಾರತದ ಸುಂದರ ಭೂದೃಶ್ಯಗಳಿಗೆ ಭೇಟಿ ನೀಡುವ ಜೊತೆಯಲ್ಲಿ, ಭಾರತದ ಈ ಐತಿಹಾಸಿಕ ಮತ್ತು ವಿಶಿಷ್ಟ ಅನುಭವ ನೀಡುವ ಕಾರಾಗೃಹಗಳಿಗೂ ಸಹ ಭೇಟಿ ನೀಡಿ. ಇದು ಖಂಡಿತ ನಿಮಗೆ ಹೊಸ ಅನುಭವವನ್ನು ನೀಡುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button