ದೂರ ತೀರ ಯಾನವಿಂಗಡಿಸದ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು ಸಂಚಾರದ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ನೀವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ತಲುಪುವುದಕ್ಕೆ ಹರಸಾಹಸ ಪಡಬೇಕಾಗಿಲ್ಲ.

ಜಾಸ್ತಿ ಹಣವನ್ನು ಖರ್ಚು ಮಾಡಬೇಕಿಲ್ಲ.ರೈಲಿನಲ್ಲಿ ಕಡಿಮೆ ದರದಲ್ಲಿ ವಿಮಾನ ನಿಲ್ದಾಣವನ್ನು ಟ್ರಾಫಿಕ್ ಕಿರಿ ಕಿರಿಯಿಲ್ಲದೆ ತಲುಪಬಹುದು.

ನೈಋತ್ಯ ರೈಲ್ವೆಯು ವಿವಿಧ ರೈಲ್ವೆ ನಿಲ್ದಾಣಗಳಿಂದ ವಿಮಾನ ನಿಲ್ಧಾಣಕ್ಕೆ ಸಂಪರ್ಕ ಕಲ್ಪಿಸುವ 8 ರೈಲುಗಳನ್ನು ಪರಿಚಯಿಸಿದೆ. ಇವೆಲ್ಲವೂ 90 ನಿಮಿಷದಲ್ಲಿ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣಕ್ಕೆ ತಲುಪುತ್ತವೆ.

ಈ ಹಿಂದೆಯೇ ಈ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕೂಡ ಹೆಚ್ಚಿನವರಿಗೆ ಇದರ ಮಾಹಿತಿ ಕೊರತೆಯಿದೆ. ಅಲ್ಲದೆ ಇತರ ಭಾಗಗಳಿಗೂ ಇದನ್ನು ವಿಸ್ತರಿಸಬೇಕು ಎನ್ನುವ ಆಗ್ರಹ ಕೂಡ ಇದೆ.

Train Sttaion

ಏರ್‌ಪೋರ್ಟ್‌ ಟ್ಯಾಕ್ಸಿಗೆ(Airport Taxi) 1000 ರೂಪಾಯಿ ಇದ್ದರೆ ಈ ರೈಲಿನ ಟಿಕೆಟ್ ದರ 10 ರೂಪಾಯಿ ಮೆಜೆಸ್ಟಿಕ್(Mejestic) ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು ಪ್ರಯಾಣ ದರ 10 ರೂಪಾಯಿ. ಬೆಂಗಳೂರು(Bengaluru) ಕಂಟೋನ್ಮೆಂಟ್ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ದರ 15 ರೂಪಾಯಿ. ವಿಮಾನ ನಿಲ್ದಾಣವನ್ನು ತಲುಪಲು ಇದು ಅತ್ಯಂತ ಅಗ್ಗದ ಮಾರ್ಗವಾಗಿದೆ.

ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ದರ 600 ರೂಪಾಯಿಯಿಂದ 1,000 ರೂಪಾಯಿ ಇದೆ. ರೈಲು ವೇಳಾಪಟ್ಟಿಯ ಪ್ರಕಾರ, ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲುಗಳು ಚಲಿಸುತ್ತವೆ.

ರೈಲು ಸಂಖ್ಯೆ 06269/06270 ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ. 5:55 ಕ್ಕೆ ಮತ್ತು ಒಂದು ನಿಮಿಷದ ನಿಲುಗಡೆಯೊಂದಿಗೆ 6:50 ಕ್ಕೆ ಕೆಂಪೇಗೌಡ ನಿಲ್ದಾಣಕ್ಕೆ ತಲುಪುತ್ತದೆ.

ಪ್ರಯಾಣಿಕರು ಬೆಂಗಳೂರು ಪೂರ್ವ, ಬೈಯ್ಯಪ್ಪನಹಳ್ಳಿ(Baippanahalli), ಚನ್ನಸಂದ್ರ(Channasandra), ಯಲಹಂಕ(Yalahanka), ಹಲಸೂರು(Halsuru) ಮತ್ತು ದೊಡ್ಡಜಾಲದಿಂದ ಈ ರೈಲನ್ನು ಹತ್ತಬಹುದು.

Kempegowda Airport

ರೈಲು ಸಂಖ್ಯೆ 06279/06280 ಯಶವಂತಪುರದಿಂದ(Yashawantapura) ಬೆಳಿಗ್ಗೆ 8:30 ಕ್ಕೆ ಹೊರಟು 9:17 ಕ್ಕೆ ವಿಮಾನ ನಿಲ್ದಾಣವನ್ನು ತಲುಪುತ್ತದೆ. ವಿಮಾನ ನಿಲ್ದಾಣದಿಂದ, ರೈಲು 8:21 ಕ್ಕೆ ವಿಮಾನ ನಿಲ್ದಾಣದ ನಿಲುಗಡೆ ನಿಲ್ದಾಣದಿಂದ ಹೊರಡುತ್ತದೆ.

ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ, ಕೊಡಿಗೇಹಳ್ಳಿ, ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿಲುಗಡೆ ಮತ್ತು 9:25 ಕ್ಕೆ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

ಇನ್ನೊಂದು ರೈಲು ವಿಮಾನ ನಿಲ್ದಾಣದಿಂದ ಸಂಜೆ 6:43ಕ್ಕೆ ಹೊರಟು ರಾತ್ರಿ 8:20ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.

ಕೆಂಪೇಗೌಡ ವಿಮಾನ ನಿಲ್ಧಾಣಕ್ಕೆ ನೇರ ರೈಲುಗಳ ವೇಳಾಪಟ್ಟಿ

ಮೆಜೆಸ್ಟಿಕ್‌ನಿಂದ ಬೆಳಗ್ಗೆ 4.45ಕ್ಕೆ ಹೊರಟು ಕೆಐಎಗೆ ಬೆಳಗ್ಗೆ 5.50ಕ್ಕೆ ತಲುಪುತ್ತದೆ.ಯಲಹಂಕದಿಂದ ಬೆಳಗ್ಗೆ 7ಕ್ಕೆ ಹೊರಟು ಕೆಐಎಗೆ ಬೆಳಗ್ಗೆ 7.20ಕ್ಕೆ ತಲುಪುತ್ತದೆ.

ಯಶವಂತಪುರ ದಿಂದ ಬೆಳಗ್ಗೆ 8.30ಕ್ಕೆ ಹೊರಟು ಕೆಐಎಗೆ 9.17ಕ್ಕೆ ತಲುಪುತ್ತದೆಕಂಟೋನ್ಮೆಂಟ್‌ನಿಂದ ಬೆಳಗ್ಗೆ 5.55ಕ್ಕೆ ಹೊರಟು ಕೆಐಎಗೆ 6.50ಕ್ಕೆ ತಲುಪುತ್ತದೆಮೆಜೆಸ್ಟಿಕ್‌ನಿಂದ ರಾತ್ರಿ 9 ಗಂಟೆಗೆ ಹೊರಟು ಕೆಐಎಗೆ ರಾತ್ರಿ 10.05ಕ್ಕೆ ತಲುಪುತ್ತದೆ.

ಕೆಂಪೇಗೌಡ ವಿಮಾನ ನಿಲ್ಧಾಣದಿಂದ ನೇರ ರೈಲುಗಳ ವೇಳಾಪಟ್ಟಿ

ಕೆಐಎನಿಂದ ಬೆಳಗ್ಗೆ 6.22ಕ್ಕೆ ಹೊರಟು ಯಲಹಂಕಕ್ಕೆ 6.05ಕ್ಕೆ ತಲುಪುತ್ತದೆ.ಕೆಐಎನಿಂದ ಬೆಳಗ್ಗೆ 7.45ಕ್ಕೆ ಹೊರಟು ಕಂಟೋನ್ಮೆಂಟ್‌ಗೆ 8.50ಕ್ಕೆ ತಲುಪುತ್ತದೆ.ಕೆಐಎನಿಂದ ಬೆಳಗ್ಗೆ 8.21ಕ್ಕೆ ಹೊರಟು ಯಶವಂತಪುರಕ್ಕೆ 9.25ಕ್ಕೆ ತಲುಪುತ್ತದೆ.ಕೆಐಎನಿಂದ ಸಂಜೆ 6.43ಕ್ಕೆ ಹೊರಟು ಮೆಜೆಸ್ಟಿಕ್‌ಗೆ 8.20ಕ್ಕೆ ತಲುಪುತ್ತದೆ.ಕೆಐಎನಿಂದ ರಾತ್ರಿ 10.37ಕ್ಕೆ ಹೊರಟು ಮೆಜೆಸ್ಟಿಕ್‌ಗೆ 11.55ಕ್ಕೆ ತಲುಪುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button