ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ ಮೂರು ಹೊಯ್ಸಳ ದೇವಾಲಯಗಳು

ಕರ್ನಾಟಕದ ಹೊಯ್ಸಳರ ಕಾಲದ ಮೂರು ಪ್ರಮುಖ ದೇವಾಲಯಗಳಾದ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೆಬೀಡು ಹಾಗೂ ಮೈಸೂರು ಜಿಲ್ಲೆಯ ಸೋಮನಾಥಪುರ ಯುನೆಸ್ಕೋ ಪಟ್ಟಿಗೆ ಸೆಪ್ಟೆಂಬರ 18 ರಂದು ಸೇರ್ಪಡೆಯಾಗಿದ್ದು, ಕನ್ನಡಿಗರು ಹೆಮ್ಮೆ ಪಡುವ ಸುದ್ದಿ ಇದಾಗಿದೆ.

● ಉಜ್ವಲಾ. ವಿ. ಯು

ಹೊಯ್ಸಳರು ಸಂಗೀತ, ನಾಟ್ಯ, ಶಿಲ್ಪಕಲೆಗೆ ತುಂಬಾ ಪ್ರಾಶಸ್ತ್ಯ ನೀಡಿದರು. ಇವರ ಕಾಲದಲ್ಲಿ ಸ್ಥಾಪಿತವಾದ ದೇವಾಲಯಗಳು ಅದ್ಭುತ ವಾಸ್ತುಶಿಲ್ಪಗಳಿಂದ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಬೇಲೂರಿನ ಚನ್ನಕೇಶವ ದೇವಸ್ಥಾನ, ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಹಾಗೂ ಸೋಮನಾಥಪುರದ ಕೇಶವ ದೇವಸ್ಥಾನ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ದೇವಾಲಯಗಳಾಗಿವೆ.

ಬೇಲೂರಿನ ಚನ್ನಕೇಶವ ದೇವಸ್ಥಾನ:

Chennakeshava Temple, Belur

ಚೆನ್ನಕೇಶವ ದೇವಾಲಯವನ್ನು, ಕೇಶವ ಅಥವಾ ವಿಜಯನಾರಾಯಣ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ 12 ನೇ ಶತಮಾನದ ದೇವಾಲಯವಾಗಿದೆ . ಇದು 1116 ADನಲ್ಲಿ ರಾಜ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿಸಲ್ಪಟ್ಟಿತು. ಈ ದೇವಾಲಯವನ್ನು ನಿರ್ಮಿಸಲು 103 ವರ್ಷ ಸಮಯ ತೆಗೆದುಕೊಳ್ಳಲಾಯಿತು. ಶಾಸನಗಳಲ್ಲಿ ಈ ದೇವಾಲಯವನ್ನು “ಐಹಿಕ ವೈಕುಂಠ ” (ವಿಷ್ಣುವಿನ ನಿವಾಸ) ಮತ್ತು “ದಕ್ಷಿಣ ವಾರಣಾಸಿ” ಎಂದು ಕರೆಯಲಾಗಿದೆ.

ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನ:

Hoysaleshwara Temple, Halebidu

ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನವನ್ನು ಹೊಯ್ಸಳ ಯುಗದ ಮುಖ್ಯ ವಾಸ್ತುಶಿಲ್ಪಿ “ಕೇತಮಾಲ” 12 ನೇ ಶತಮಾನದಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನ ಅವರ ಆದೇಶದ ಮೇರೆಗೆ ನಿರ್ಮಿಸಿದನು. ಹೊಯ್ಸಳೇಶ್ವರ ದೇವಸ್ಥಾನವನ್ನು ದ್ವಾರಸಮುದ್ರ ಎಂಬ ಮಾನವ ನಿರ್ಮಿತ ಸರೋವರದ ತೀರದಲ್ಲಿ ನಿರ್ಮಿಸಲಾಗಿದೆ. ಹಳೆಬೀಡು ಶಿಲ್ಪಕಲೆಯ ಬೀಡು ಎಂದೇ ಪ್ರಸಿದ್ಧಿ ಪಡೆದಿದೆ. ಇದನ್ನು ರಾಜ ವಿಷ್ಣುವರ್ಧನ ಮತ್ತು ರಾಣಿ ನಾಟ್ಯರಾಣಿ ಶಾಂತಲಾ ಗೌರವಾರ್ಥವಾಗಿ ನಿರ್ಮಿಸಲಾಗಿದೆ.

ಚೆನ್ನಕೇಶವ ದೇವಾಲಯ, ಸೋಮನಾಥಪುರ:

Chennakeshava Temple, Somanathpura

ಮೈಸೂರಿನ ಸೋಮನಾಥಪುರದಲ್ಲಿರುವ ಈ ದೇವಾಲಯವನ್ನು ಹೊಯ್ಸಳರ ಮೂರನೇ ನರಸಿಂಹ ರಾಜನ ದಂಡನಾಯಕನಾಗಿದ್ದ ಸೋಮನಾಥನು ಕ್ರಿ.ಪೂ 1268 ರಲ್ಲಿ ನಿರ್ಮಿಸಿದನು. ದೇವಾಲಯದ ಪ್ರವೇಶದ್ವಾರದಲ್ಲಿರುವ ಶಾಸನವು ಅದರ ಇತಿಹಾಸವನ್ನು ಹೇಳುತ್ತದೆ. ಇದು ಹೊಯ್ಸಳರು ನಿರ್ಮಿಸಿದ ಕೊನೆಯ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಇನ್ನೂ ಅನೇಕ ದೇವಾಲಯಗಳಿವೆ.

ನೀವು ಇದನ್ನೂ ಇಷ್ಟಪಡಬಹುದು: ಭಾರತದಲ್ಲಿ ನೀವು ನೋಡಬಹುದಾದ 19 ಪಾರಂಪರಿಕ ತಾಣಗಳು: ವಿಶ್ವ ಪಾರಂಪರಿಕ ದಿನ ವಿಶೇಷ

ಈ ದೇವಾಲಯಗಳನ್ನು ವಿಶ್ವ ಪರಂಪರೆ ತಾಣಗಳ (World Heritage Site) ಪಟ್ಟಿಗೆ 2022-23ರಲ್ಲಿ ಸೇರಿಸುವ ಸಲುವಾಗಿ ಕೇಂದ್ರದ ಸಂಸ್ಕೃತಿ ಮತ್ತು ಪ್ರಾಚ್ಯ ವಸ್ತು ಸರ್ವೇಕ್ಷಣಾಲಯ ಸಚಿವಾಲಯ ಭಾರತದಿಂದ ನಾಮನಿರ್ದೇಶನ ಮಾಡಿತ್ತು ಎಂಬುದನ್ನು ಕೇಂದ್ರದ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಈ ವಿಚಾರವನ್ನು ಅಂದಿನ ಟ್ವಿಟ್ಟರ್‌ ನಲ್ಲಿ ತಿಳಿಸಿದ್ದರು.

2022 ಅಕ್ಟೋಬರನಲ್ಲಿ ಯುನೆಸ್ಕೊ (UNESCO) ತಂಡದಿಂದ ಮಲೇಶಿಯಾದಿಂದ ಟಿಯಾಂಗ್ ಕಿಯಾನ್ ಭೂಮ್ ಬೇಲೂರು-ಹಳೇಬೀಡಿಗೆ ಭೇಟಿ ನೀಡಿದ್ದರು. ಆಗ ಟೂರಿಸಂ ಟಾಸ್ಕ್ ಪೋರ್ಸ್ ಮುಖ್ಯೆಸ್ಥೆಯಾಗಿದ್ದ ಡಾ.ಸುಧಾಮೂರ್ತಿ ಅವರು ದೇವಾಲಯ ಕೆತ್ತನೆ, ಶ್ರೀಮಂತಿಕೆ ಮತ್ತು ಐತಿಹಾಸಿಕತೆಯ ಕುರಿತು ವಿವರಣೆ ನೀಡಿದ್ದರು.

ಪ್ರಸ್ತುತ ಸೆಪ್ಟೆಂಬರ 18 2023 ರಂದು ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿರುವ ಮೂರು ಹೊಯ್ಸಳ ದೇವಾಲಯಗಳನ್ನು “42 ನೇ ಯುನೆಸ್ಕೋ ತಾಣ”ವಾಗಿ ಘೋಷಣೆಯಾಗಿವೆ.

ಪಶ್ಚಿಮ ಬಂಗಾಳದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಸ್ಥಾಪಿಸಿದ “ಶಾಂತಿನಿಕೇತನ” ಯುನೆಸ್ಕೋ ಪಟ್ಟಿಗೆ ಸೇರಿದ ಬೆನ್ನಲ್ಲೇ ಕರ್ನಾಟಕದ ಮೂರು ಹೊಯ್ಸಳ ದೇವಾಲಯಗಳೂ ಸೇರಿರುವುದು ಭಾರತೀಯರು ಮತ್ತು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button