Moreಕಾಡಿನ ಕತೆಗಳುವಿಂಗಡಿಸದ

ಮಹದೇಶ್ವರ ಬೆಟ್ಟದ ಬಳಿಯ ನಾಗಮಲೆ ಚಾರಣಕ್ಕೆ ತಾತ್ಕಾಲಿಕ ನಿಷೇಧ:

ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಎಪ್ಪತ್ತೇಳು ಮಲೆಗಳಲ್ಲಿ ಒಂದಾದ ನಾಗಮಲೆ (Nagamale Trek) ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಚಾರಣ ತಾಣ.

ಇದು ಮಲೆ ಮಹದೇಶ್ವರ ಬೆಟ್ಟದಿಂದ (Male Mahadeshwara Hill) ಸುಮಾರು 12 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ಪ್ರಮುಖ ಆಧ್ಯಾತ್ಮಿಕ ತಾಣವಾಗಿದೆ.

ಇಲ್ಲಿ ಮಹದೇಶ್ವರ ಸ್ವಾಮಿಯ ವಿಗ್ರಹಕ್ಕೆ ನೆರಳಾಗಿರುವ ಹಾವಿನ ಹೆಡೆಯ ಕಲ್ಲಿನ ರೂಪವು ಅತ್ಯಂತ ಆಕರ್ಷಕವಾಗಿದೆ.

ಜಾತ್ರೆಯ ಸಂದರ್ಭದಲ್ಲಿ ಮಹದೇಶ್ವರ ಬೆಟ್ಟಕ್ಕೆ (MM Hill) ಭೇಟಿ ನೀಡುವ ಭಕ್ತರಲ್ಲಿ ಶೇಕಡ 30ರಷ್ಟು ಜನರು ನಾಗಮಲೆಗೂ ಬರುತ್ತಾರೆ.

ಸಮುದ್ರ ಮಟ್ಟದಿಂದ ಸುಮಾರು 900 ಮೀ ಎತ್ತರವಿರುವ ಈ ಮಲೆಯನ್ನು ತಲುಪಲು ಏಳು ಬೆಟ್ಟ ಹತ್ತಿ ಇಳಿಯಬೇಕು. ಒಂದೊಂದು ಬೆಟ್ಟವೂ 900 ರಿಂದ 1000 ಮೀ ಎತ್ತರವಿದೆ.

ಮಹದೇಶ್ವರ ಬೆಟ್ಟದಿಂದ ನಾಗಮಲೆವರೆಗೂ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಅರ್ಧ ದಾರಿಯವರೆಗೆ ಜೀಪಿನಲ್ಲಿ ತೆರಳಿ ನಂತರ ಕಾಲ್ನಡಿಗೆಯಲ್ಲಿ ಹೋಗಬೇಕು.

ಈವರೆಗೆ ಪ್ರವಾಸಿಗರಿಗೆ (Tourists) ಪ್ರಾಣಿಗಳಿಂದ ತೊಂದರೆಯಾಗಬಹುದೆಂಬ ಕಾರಣಕ್ಕೆ ರಾತ್ರಿ ಹೊತ್ತು ಬೆಟ್ಟಕ್ಕೆ ಹೋಗುವುದನ್ನು ಅರಣ್ಯ ಇಲಾಖೆ ನಿರ್ಬಂಧಿಸಿತ್ತು.

ಈಗ ಚಾರಣ ಸ್ಥಳಗಳಲ್ಲಿ (Trekking spots) ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮತ್ತು ಪ್ರವಾಸಿಗರ ದಟ್ಟಣೆಯನ್ನು ನಿಗ್ರಹಿಸುವ ಉದ್ದೇಶದಿಂದ ಚಾರಣಿಗರ (trekkers) ಸಂಖ್ಯೆಯನ್ನು ಮಿತಿಗೊಳಿಸಲು ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಜಾರಿಗೆ ತರಲಿದೆ.

ಸ್ವಲ್ಪ ದಿನಗಳ ಮುಂಚೆ, ಕುಮಾರ ಪರ್ವತ ಚಾರಣದಲ್ಲಿ ಆದ ಜನ ದಟ್ಟಣೆಯಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಎಲ್ಲಾ ಚಾರಣ ತಾಣಗಳಲ್ಲೂ ಆನ್ ಲೈನ್ ನಲ್ಲಿ ಬುಕ್ಕಿಂಗ್ ವ್ಯವಸ್ಥೆ (Online Booking System) ಆರಂಭಿಸುವಂತೆ ಮತ್ತು ಅಲ್ಲಿಯವರೆಗೂ ಈ ವ್ಯವಸ್ಥೆ ಇಲ್ಲದ ಚಾರಣಗಳಿಗೆ ನಿಷೇಧ ಹೇರುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿದ್ದರು.

ಈಗ ನಾಗಮಲೆ ಚಾರಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಮಲೆ ಮಹದೇಶ್ವರ ವನ್ಯಧಾಮದ ಎಸಿಎಫ್ ಪಾಲಾರ್ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆಯಲಾಗಿತ್ತು.

ಈಗ ಫೆ.10ರಿಂದ ಆ ನಿರ್ಬಂಧವನ್ನು (Ban) ಜಾರಿಗೆ ತರಲಾಗಿದೆ. ನಾಗಮಲೆಗೆ ಹೆಚ್ಚು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ.

ಇದರಿಂದ ಪರಿಸರಕ್ಕೆ ಹಾನಿ ಮತ್ತು ಜಲಮೂಲಗಳು ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಇನ್ನೊಂದೆಡೆ, ಚಾರಣಿಗರನ್ನು ಒಯ್ಯುವ ಖಾಸಗಿ ವಾಹನಗಳಲ್ಲಿ (Private Vehicles) ಹಲವು ವಾಹನಗಳ ವಿಮೆ, ಕ್ಷಮತಾ ಪ್ರಮಾಣ ಪತ್ರಗಳನ್ನು ಹೊಂದಿಲ್ಲ.

ನಾಗಮಲೆ ಪ್ರದೇಶದಲ್ಲಿ ಪ್ರಮಾಣಿತ ಕಾರ್ಯ ವಿಧಾನ ಮತ್ತು ಆನ್ ಲೈನ್ ವ್ಯವಸ್ಥೆ ಜಾರಿ ಆಗುವವರೆಗೆ ತಾತ್ಕಾಲಿಕವಾಗಿ ಯಾವುದೇ ವಾಹನಗಳು, ಚಾರಣಿಗರು ಅರಣ್ಯ ಪ್ರದೇಶದ (Forest Area) ಒಳಗಡೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button