ದೂರ ತೀರ ಯಾನವಿಂಗಡಿಸದ

ಹಳಿ ಸೇರಿದ ನಮ್ಮ ಮೆಟ್ರೋ ಚಾಲಕ ರಹಿತ ರೈಲುಗಳು

ಬಹಳ ದಿನಗಳ ಕಾಯುವಿಕೆಯ ನಂತರ ನಮ್ಮ ಮೆಟ್ರೋದ ಬಹುನಿರೀಕ್ಷಿತ ಚಾಲಕರಹಿತ ಮೆಟ್ರೋ ರೈಲು(Driverless Metro) ಬುಧವಾರ ಬೆಳಗ್ಗೆ 3.30ಕ್ಕೆ ಬೆಂಗಳೂರು ತಲುಪಿದೆ.

ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್‌ ಪುಜೆನ್‌ ಕಂ. ಲಿಮಿಟೆಡ್‌ ಈ ರೈಲನ್ನು ನಿರ್ಮಾಣ ಮಾಡಿದೆ.

ಜ. 24 ರಂದು ಚೀನಾದ(China) ಶಾಂಘೈ ಬಂದರಿನ ಮೂಲಕ ಹೊರಟು, ಫೆ.6 ರಂದು ಚೆನ್ನೈಬಂದರಿಗೆ ಬಂದು ತಲುಪಿತ್ತು.

ನಂತರ ಕಸ್ಟಮ್ಸ(Customs) ಕ್ಲಿಯರೆನ್ಸ್‌ ಪಡೆದು, ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ(Hebbagodi) ಡಿಪೋಗೆ ತರಲಾಗಿತ್ತು. ಇದೀಗ ಮೆಟ್ರೋ ರೈಲು ಹಳಿ ಸೇರಿದೆ.

ಈ ಚಾಲಕರಹಿತ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ (Bommasandra)ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಪ್ರತಿ ಕೋಚ್‌ 38.7 ಮೆಟ್ರಿಕ್‌ ಟನ್‌ ತೂಕವಿದೆ.

ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್‌ ಪುಜೆನ್‌ ಕಂ. ಲಿಮಿಟೆಡ್‌ ಈ ರೈಲನ್ನು ನಿರ್ಮಾಣ ಮಾಡಿದೆ. ಜ. 24 ರಂದು ಚೀನಾದ ಶಾಂಘೈ ಬಂದರಿನ ಮೂಲಕ ಹೊರಟು, ಫೆ.6 ರಂದು ಚೆನ್ನೈ(Chennai) ಬಂದರಿಗೆ ಬಂದು ತಲುಪಿತ್ತು. ನಂತರ ಕಸ್ಟಮ್ಸ್‌ ಕ್ಲಿಯರೆನ್ಸ್‌ ಪಡೆದು, ರಸ್ತೆ ಮೂಲಕ ಬುಧವಾರ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತರಲಾಗಿತ್ತು.

ನೀವು ಇದನ್ನು ಇಷ್ಟ ಪಡಬಹುದು:ಚೀನಾದಿಂದ ಸಿಲಿಕಾನ್ ಸಿಟಿಗೆ ಹೊರಟ ಚಾಲಕ ರಹಿತ ಮೆಟ್ರೋ

ಚೀನಾ ಮೂಲದ ಸಿಆರ್‌ಆರ್‌ಸಿ, ಕೋಲ್ಕೊತ್ತಾದ(Calcutta )ಬಳಿ ತನ್ನ ಉತ್ಪಾದನಾ ಘಟಕವನ್ನು ಹೊಂದಿರುವ ಟಿಟಾಗರ್‌ ವ್ಯಾಗನ್ಸ್‌ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್‌ಗಳನ್ನು (36 ರೈಲು ಸೆಟ್‌ಗಳು) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಸಿಆರ್‌ಆರ್‌ಸಿ ಸಂಸ್ಥೆಯು 2023ರ ಆಗಸ್ಟ್‌ನಲ್ಲೇ ಆರು ಬೋಗಿ ರೈಲುಗಳ ಎರಡು ಸೆಟ್‌ಗಳನ್ನು ಪೂರೈಸುವ ಭರವಸೆ ನೀಡಿತ್ತು.

ಸದ್ಯ ಒಂದು ಸೆಟ್‌ ಮಾತ್ರ ಬಂದಿದೆ. ಇನ್ನೊಂದು ಚೀನಾದಿಂದ ಬರಬೇಕು. ಇನ್ನುಳಿದ 34 ರೈಲುಗಳನ್ನು ಟಿಟಾಗರ್‌ ಕಂಪನಿ ಪೂರೈಕೆ ಮಾಡಲಿದೆ.

216 ಕೋಚ್‌ಗಳ ಪೈಕಿ, 126 ಕೋಚ್‌ಗಳನ್ನು ನೇರಳೆ ಮತ್ತು ಹಸಿರು ಮಾರ್ಗಕ್ಕೆ ಮೀಸಲಿಡಲಾಗಿದ್ದು, 90 ಬೋಗಿಗಳನ್ನು ಹಳದಿ ಮಾರ್ಗಕ್ಕೆ ಮೀಸಲಿಡಲಾಗಿದೆ.

ನಮ್ಮ ಮೆಟ್ರೋದ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ (Yello Line)ಮಾರ್ಚ್‌ನಿಂದ (March) ಪರೀಕ್ಷಾರ್ಥ ರೈಲು ಸಂಚಾರ ಆರಂಭವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button