ಪ್ರಯಾಣಿಕರಿಗೆ USD14,000 ವರೆಗೆ ವೈದ್ಯಕೀಯ ರಕ್ಷಣೆಯನ್ನು ಘೋಷಿಸಿದ ಥೈಲ್ಯಾಂಡ್
ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಸಮಸ್ಯೆಗಳ ನಂತರ ಪ್ರವಾಸಿಗರನ್ನು ಮರಳಿ ಆಕರ್ಷಿಸಲು ಥೈಲ್ಯಾಂಡ್ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.
ಈ ಯೋಜನೆಗಳ ಅಡಿಯಲ್ಲಿ, ಈಗ ಮತ್ತೊಂದು ಹೊಸ ಉಪಕ್ರಮವನ್ನು ಜಾರಿಗೆ ತಂದಿದೆ. ಅದುವೇ ಥೈಲ್ಯಾಂಡ್ ಗೆ (Thailand) ಭೇಟಿ ನೀಡಿದ ಪ್ರವಾಸಿಗರು ಅಪಘಾತಗಳ (accidents) ಸಂದರ್ಭದಲ್ಲಿ USD 14,000 ವರೆಗೆ ವೈದ್ಯಕೀಯ ರಕ್ಷಣೆಯನ್ನು (Medical coverage) ಪಡೆಯುತ್ತಾರೆ.
ಇಷ್ಟೇ ಅಲ್ಲದೇ, ಪ್ರವಾಸಿಗರ ಸಾವಿನ (tourist’s death) ಸಂದರ್ಭದಲ್ಲಿ ಸರ್ಕಾರವು ಒಂದು ಮಿಲಿಯನ್ ಬಹ್ತ್ ಅಂದರೆ ಅಂದಾಜು USD 37,270 ವರೆಗೆ ಪರಿಹಾರವನ್ನು ನೀಡುತ್ತದೆ.
ಸಾಂಕ್ರಾಮಿಕ ರೋಗದಿಂದಾಗಿ ಥೈಲ್ಯಾಂಡ್ ಪ್ರವಾಸೋದ್ಯಮವು (Thailand Tourism) ನಿಧಾನಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ.
ಈಗ ಥೈಲ್ಯಾಂಡ್ ಒದಗಿಸುತ್ತಿರುವ ಸುರಕ್ಷತಾ ಕ್ರಮಗಳು (safety measures) ಮತ್ತು ಆರ್ಥಿಕ ರಕ್ಷಣೆಗಳು (financial protection) ಪ್ರಯಾಣಿಕರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತಿದೆ.
ಥೈಲ್ಯಾಂಡ್‌ನ ಪ್ರವಾಸಿಗರ ಸುರಕ್ಷತಾ ಕ್ರಮಗಳ ಯೋಜನೆಯು 2024ರ ಜನವರಿ 1 ರಂದು ಆರಂಭವಾಯಿತು. ಇದು ಆಗಸ್ಟ್ 31, 2024 ರವರೆಗೆ ಚಾಲನೆಯಲ್ಲಿರುತ್ತದೆ.
ಥೈಲ್ಯಾಂಡ್ ಪ್ರವಾಸಿಗರ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ. ಥೈಲ್ಯಾಂಡ್ ಗೆ ಭೇಟಿ ನೀಡುವ ಪ್ರವಾಸಿಗರು ಕಾಳಜಿಯನ್ನು ಪಡೆಯುತ್ತಾರೆ ಎಂದು ಪ್ರವಾಸಿಗರಿಗೆ ಖಚಿತ ಪಡಿಸುವುದು ಈ ಉಪಕ್ರಮದ ಪ್ರಾಥಮಿಕ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸುದಾವನ್ ವಾಂಗ್ಸುಫಾಕಿಜ್ಕೊಸೊಲ್ ಅವರು ತಿಳಿಸಿದರು.
ಥೈಲ್ಯಾಂಡ್ ಪ್ರಪಂಚದಾದ್ಯಂತ ಯುವಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಅದರ ಸುಂದರ ಕಡಲತೀರಗಳು, ಸಂಸ್ಕೃತಿ, ರೋಮಾಂಚಕ ಸಾಹಸಗಳಿಂದ ಪ್ರಸಿದ್ಧವಾಗಿದೆ.
ಈಗ ಥೈಲ್ಯಾಂಡ್ ಪ್ರವಾಸಿಗರ ಸುರಕ್ಷತಾ ಕ್ರಮಗಳಿಂದಾಗಿ, ಪ್ರಶಾಂತತೆ ಮತ್ತು ಉತ್ಸುಕತೆ ಎರಡನ್ನೂ ಬಯಸುವ ಪ್ರಯಾಣಿಕರಿಗೆ ಸುರಕ್ಷಿತ ತಾಣವಾಗಿ ತನ್ನ ಸ್ಥಾನಮಾನವನ್ನು ಪುನಃ ದೃಢೀಕರಿಸಲು ದೇಶವು ಪ್ರಯತ್ನಿಸುತ್ತಿದೆ.
ಥೈಲ್ಯಾಂಡ್ ಗೆ 2023ರಲ್ಲಿ 28 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು.
2024 ರಲ್ಲಿ, ಥೈಲ್ಯಾಂಡ್ 35 ಮಿಲಿಯನ್ ಸಂದರ್ಶಕರನ್ನು ಆಕರ್ಷಿಸುವ ಗುರಿಯನ್ನು ದೇಶ ಹೊಂದಿದೆ ಮತ್ತು ಅದರ ಪ್ರವಾಸೋದ್ಯಮ ಆದಾಯ USD 55 ಬಿಲಿಯನ್ ಗಳಿಸುವುದು ಆಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.