ದೂರ ತೀರ ಯಾನವಿಂಗಡಿಸದ

ಚೀನಾದಿಂದ ಸಿಲಿಕಾನ್ ಸಿಟಿಗೆ ಹೊರಟ ಚಾಲಕ ರಹಿತ ಮೆಟ್ರೋ


ನೀವೆಲ್ಲ ಚಾಲಕ ರಹಿತ ವಾಹನ, ಹಾರುವ ಕಾರಿನ ಬಗ್ಗೆ ಕೇಳಿಯೇ ಇರ್ತೀರಿ. ಆದ್ರೆ ಇದೀಗ ಚಾಲಕ ರಹಿತ ಮೆಟ್ರೋ ನೋಡೋ ಸಮಯ ಕೂಡ ಸನಿಹವಾಗಿದೆ.

ಹೌದು, ಬೆಂಗಳೂರಿನಲ್ಲಿ ಚಾಲಕ ಇಲ್ಲದೇ ನಮ್ಮ ಮೆಟ್ರೋ ಸಂಚರಿಸಿ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ. ಈಗಾಗಲೇ ಚಾಲಕ ರಹಿತ ಮೆಟ್ರೋ ಚೀನಾದಿಂದ (China) ಬೆಂಗಳೂರು (Bengaluru )ಕಡೆ ಹೊರಟಿದೆ.

ಚಾಲಕ ರಹಿತ ಮೆಟ್ರೋ ರೈಲು(Driverless Metro) ಬೆಂಗಳೂರಿನಲ್ಲಿ(Bengaluru) ಆರಂಭಗೊಳ್ಳುತ್ತಿದೆ. ಇದರೊಂದಿಗೆ ನಮ್ಮ ಮೆಟ್ರೋ ಹಳದಿ ಕಾರಿಡಾರ್ ಹೊಸ ಇತಿಹಾಸ ರಚಿಸಲು ಸಜ್ಜಾಗಿದೆ.

ಹೌದು…ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಎಲೆಕ್ಟ್ರಾನಿಕ್ಸ್ ಸಿಟಿ (Electronic City)ಮೆಟ್ರೋಗೆ ಮೊದಲ ಆರು ಬೋಗಿಗಳ ರೈಲನ್ನು ಜನವರಿ 20 ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಹಡಗು ಮೆಟ್ರೋ ರೈಲು ಹೊತ್ತು ಸದ್ಯ ಚೆನ್ನೈನತ್ತ (Chennai)ತೆರಳುತ್ತಿದೆ.

Driverless Metro


ಇದು 2024 ರ ಮಧ್ಯ ಅಥವಾ ಫೆಬ್ರವರಿ ಅಂತ್ಯದ ವೇಳೆಗೆ ಚೆನ್ನೈ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಚೆನ್ನೈನಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗುತ್ತದೆ.

ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಬಳಿಕ ಎಲೆಕ್ಟ್ರಾನಿಕ್ಸ್ ಸಿಟಿ-ಆರ್‌ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಓಡಾಡಲಿದ್ದು, ಸೆಪ್ಟೆಂಬರ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಚಾಲಕ ರಹಿತ ರೈಲಿನ ವಿಶೇಷತೆ
ಚಾಲಕ ಇರದಿದ್ದರೂ ಈಗಾಗಲೇ ಅಳವಡಿಸಲಾದ ಪ್ರೋಗ್ರಾಂ ಆಧಾರದ ಮೇಲೆ ರೈಲು ಸಂಚರಿಸಲಿದೆ.

Namma Bengaluru

ನೀವು ಇದನ್ನು ಇಷ್ಟ ಪಡಬಹುದು:ನಮ್ಮ ಮೆಟ್ರೋ ಮಹತ್ವದ ಮೈಲಿಗಲ್ಲು: ಶತಕೋಟಿ ಪ್ರಯಾಣಿಕರ ಸಂಚಾರ

ರೈಲಿನ ಸಂಚಾರವನ್ನು ಕಂಟ್ರೋಲ್‌ ರೂಮ್ನಲ್ಲಿ ನಿಗಾ ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿ.ಮೀ. ವೇಗದಲ್ಲಿ ಚಲಿಸಲಿದೆ. 25 ಕೆವಿ ಸಾಮರ್ಥ್ಯದ ವಿದ್ಯುತ್‌ ಸಹಾಯದಿಂದ ಸಂಚರಿಸುತ್ತದೆ.

ಸಿಸಿಟಿವಿ ಕ್ಯಾಮೆರಾಗಳನ್ನೂ ಬೋಗಿಗಳಲ್ಲಿ ಅಳವಡಿಸಲಾಗಿದೆ. ಇನ್ನು ಸಂಚಾರದಲ್ಲಿ ಸಮಸ್ಯೆ ಉಂಟಾದರೆ ತಕ್ಷಣ ಓಸಿಸಿಗೆ ಸಂದೇಶ ರವಾನೆ ಆಗಲಿದೆ. ಆಗ ತಕ್ಷಣ ರೈಲಿನ ಸಂಚಾರವನ್ನು ನಿಲ್ಲಿಸಲಾಗುತ್ತೆ.


ಚಾಲಕ ರಹಿತ ರೈಲು ಇದಾಗಿದ್ದು, ಈಗ ಸಂಚರಿಸುತ್ತಿರುವ ರೈಲಿನ ವಿನ್ಯಾಸಕ್ಕಿಂತ ಸಂಪೂರ್ಣ ಭಿನ್ನವಾಗಿರಲಿದೆ. ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಮ್ ಮೂಲಕ ನಿರ್ವಹಿಸಲಾಗುತ್ತದೆ.

ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನುಳಿದಂತೆ ಎಲ್ಲ ಬೋಗಿಗಳಲ್ಲಿ ಸಿಸಿ ಕ್ಯಾಮೆರಾ ಬೋಗಿಗಳಲ್ಲಿ ಅಳವಡಿಸಲಾಗಿದೆ.

ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಸಂಚರಿಸುವುದು ಅನುಮಾನ, ಎರಡು ವರ್ಷ ಚಾಲಕರು ಇದನ್ನು ಚಾಲನೆ ಮಾಡಲಿದ್ದು, ಬಳಿಕ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.


ಮೊದಲ ರೈಲನ್ನು ಸೆಪ್ಟೆಂಬರ್ 2023 ರಲ್ಲಿ ರವಾನಿಸಲು ನಿರ್ಧರಿಸಲಾಗಿದ್ದರೂ, ಬಹು ಕಾರಣಗಳಿಂದಾಗಿ ವಿಳಂಬವಾಗಿತ್ತು.

ಯೆಲ್ಲೋ ಲೈನ್ ಬೆಂಗಳೂರಿನಲ್ಲಿ ಒಂದು ನಿರ್ಣಾಯಕ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸುತ್ತದೆ, ಇದು ಇನ್ಫೋಸಿಸ್ ಮತ್ತು ಬಯೋಕಾನ್‍ನಂತಹ ಕಂಪನಿಗಳಿಗೆ ನೆಲೆಯಾಗಿದೆ.
ಈ ಅತ್ಯಾಧುನಿಕ ಚಾಲಕ ರಹಿತ ಮೆಟ್ರೋ ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಯೋಜನೆಗೆ ಬಹು ದೊಡ್ಡ ಭಾಗವಾದ್ರೂ ಅಚ್ಚರಿಯಿಲ್ಲ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button