ಆಹಾರ ವಿಹಾರವಿಂಗಡಿಸದ

ಭಾರತದ “ಮಸಾಲ ಚಹಾ” ಗೆ 2ನೇ ಅತ್ಯುತ್ತಮ ನಾನ್-ಆಲ್ಕೋಹಾಲಿಕ್ ಪಾನೀಯ ಪ್ರಶಸ್ತಿ

ಎಷ್ಟೋ ಜನರ ದಿನ ಆರಂಭವಾಗುವುದೇ ಚಹಾದಿಂದ. ಶೀತವಾದ, ಕೆಮ್ಮು ಬಂದಾಗ, ತಲೆನೋವು ಜೋರಾದಾಗ ಚಹಾಗೆ ಸ್ವಲ್ಪ ಶುಂಠಿ, ತುಳಸಿ, ಲವಂಗ, ಕಪ್ಪು ಮೆಣಸು, ಏಲಕ್ಕಿ ಇತರೆ ಮಸಾಲೆ ಬೆರಸಿ ಕುಡಿದರೇ ಎಲ್ಲಾ ನೋವು ಮಾಯವಾಗಿ, ಫ್ರೆಶ್ ಅನುಭವವಾಗುತ್ತದೆ.

ಈಗ ಎಲ್ಲರ ನೆಚ್ಚಿನ ಮಸಾಲ ಚಹಾಗೆ (Masala Chai) 2023ನೇ ಸಾಲಿನ ವಿಶ್ವದ ಎರಡನೇ ಅತ್ಯುತ್ತಮ ಆಲ್ಕೋಹಾಲ್ ರಹಿತ ಪಾನೀಯ (Non Alcoholic Drink) ಪ್ರಶಸ್ತಿ ದೊರಕಿದೆ.

ಜಾಗತಿಕವಾಗಿ ಮನ್ನಣೆ ಪಡೆದಿರುವ ಚಹಾಗೆ ಆಹಾರ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್ (TasteAtlas) ಈ ಗೌರವ ನೀಡಿ ಪುರಸ್ಕರಿಸಿದೆ.

ಟೇಸ್ಟ್ ಅಟ್ಲಾಸ್ ಸಂಸ್ಥೆಯು ಆಯಾ ದೇಶಗಳ ಸಾಂಪ್ರದಾಯಿಕ ಆಹಾರ, ಸ್ಥಳೀಯ ವೈವಿಧ್ಯತೆ ಹಾಗೂ ಜಗತ್ತಿನಾದ್ಯಂತ ಅತ್ಯುತ್ತಮ ರೆಸ್ಟೋರೆಂಟ್ ಗಳ ಕುರಿತು ಮಾರ್ಗದರ್ಶನ ನೀಡುವ ಸಂಸ್ಥೆಯಾಗಿದೆ.

ಇತ್ತೀಚೆಗೆ, ಟೇಸ್ಟ್‌ಅಟ್ಲಾಸ್ 2023-24ರ ವರ್ಷಾಂತ್ಯದ ಪ್ರಶಸ್ತಿಗಳ ಭಾಗವಾಗಿ ಪುರಸ್ಕಾರಗಳ ಪಟ್ಟಿಯನ್ನು ಬಹಿರಂಗಪಡಿಸಿತು. ಉತ್ತಮ ಆಲ್ಕೋಹಾಲ್ ರಹಿತ ಪಾನೀಯಗಳ ವಿಭಾಗದಲ್ಲಿ “ಮೆಕ್ಸಿಕೋದ ಆಗಸ್ ಫ್ರೆಸ್ಕಾಸ್” ಪಾನೀಯಕ್ಕೆ ಮೊದಲ ಪ್ರಶಸ್ತಿ ದೊರತರೆ, ಭಾರತದ ಮಸಲಾ ಚಹಾಗೆ ಎರಡನೇ ಪ್ರಶಸ್ತಿ ದೊರಕಿದೆ.

“ಮೆಕ್ಸಿಕೋದ ಆಗಸ್ ಫ್ರೆಸ್ಕಾಸ್” (Mexican Aguas frescas) ಪಾನಿಯವು ಹಣ್ಣುಗಳು, ಸೌತೆಕಾಯಿ, ಹೂವುಗಳು, ಬೀಜ, ಧಾನ್ಯ, ಸಕ್ಕರೆ ಮತ್ತು ನೀರಿನೊಂದಿಗೆ ತಯಾರಿಸಲಾಗುವ ಪಾನೀಯವಾಗಿದೆ. ಇದು ಭಾರತದಲ್ಲಿ ಅಷ್ಟು ಪ್ರಸಿದ್ಧಿ ಹೊಂದಿಲ್ಲ.

ಚಹಾ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ವಿದೇಶಗಳಲ್ಲೂ ಪ್ರಸಿದ್ಧವಾಗಿದೆ. ಭಾರತದಲ್ಲಿ ಚಹಾಗೆ ಸಾಮಾನ್ಯವಾಗಿ ಹಾಲು ಸೇರಿಸಿ ಮಾಡಲಾಗುತ್ತದೆ. ಇತರೆ ದೇಶಗಳಲ್ಲಿ ಬಹುತೇಕ ಕಡೆ ಈ ಪದ್ಧತಿ ಇಲ್ಲ. ಭಾರತದ ಈ ಚಹಾ ವನ್ನು ಇಂಗ್ಲೆಂಡ್, ಯುರೋಪ್, ಮತ್ತು ಇತರೆ ದೇಶಗಳಲ್ಲಿ ಪ್ರಸಿದ್ಧಿ ಮಾಡಿದ್ದು ಬ್ರಿಟಿಷರು.

ಈ ಚಹಾದ ಹುಟ್ಟಿನ ಬಗ್ಗೆ ಹಲವಾರು ಗೊಂದಲಗಳಿವೆ. ಕೆಲವರು ಈ ಚಹಾ ಚೀನಾದಲ್ಲಿ ಹುಟ್ಟಿದ್ದು ಎನ್ನುತ್ತಾರೆ. ನಮ್ಮ ದೇಶದಲ್ಲಿಯೂ ಆಯುರ್ವೇದ ಪದ್ಧತಿಯಲ್ಲಿ ಈ ಚಹಾದ ಎಲೆಗಳನ್ನು ಹಲವಾರು ವರ್ಷಗಳ ಹಿಂದೆಯೇ ಬಳಸಲಾಗುತ್ತಿತ್ತು.

ಈಗಂತೂ ವಿವಿಧ ಬಗೆಯ ಚಹಾಗಳು ಪ್ರಸಿದ್ಧಿ ಹೊಂದಿದೆ. ಗ್ರೀನ್ ಟೀ, ಲೆಮನ್ ಟೀ, ಬ್ಲ್ಯಾಕ್ ಟೀ, ಹೀಗೆ ವೈವಿಧ್ಯಮಯ ಟೀ ಸವಿಯಬಹುದು. ಅದರಲ್ಲೂ ಮಸಲಾ ಚಹಾ ಎಲ್ಲಾ ಕಾಲದಲ್ಲಿಯೂ, ಎಲ್ಲರೂ ಪ್ರಿಯವಾದ ಪಾನೀಯ. ಈ ಪಾನೀಯಕ್ಕೆ ಜಾಗತಿಕವಾಗಿ ಮನ್ನಣೆ ದೊರೆತಿರುವುದು ಭಾರತೀಯರು ಹೆಮ್ಮೆ ಪಡುವ ಸಂಗತಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button