ಬೆರಗಿನ ಪಯಣಿಗರುವಿಂಗಡಿಸದಸ್ಮರಣೀಯ ಜಾಗ

ನಮ್ಮ ಮೆಟ್ರೋ ಮಹತ್ವದ ಮೈಲಿಗಲ್ಲು: ಶತಕೋಟಿ ಪ್ರಯಾಣಿಕರ ಸಂಚಾರ

ನಮ್ಮ ಮೆಟ್ರೋ (Namma Metro) ಬೆಂಗಳೂರಿನ (Bangaluru) ಸಂಚಾರ ವ್ಯವಸ್ಥೆಗೆ ಜೀವನಾಡಿಯಿದ್ದಂತೆ. 5-10 ನಿಮಿಷ ಮೆಟ್ರೋ ಸ್ತಬ್ಧವಾದ್ರೆ ಸಿಲಿಕಾನ್ ಸಿಟಿ ಮಂದಿಯ ಪಾಡು ಹೇಗಿರಬಹುದು ಎನ್ನುವುದನ್ನ ಊಹಿಸಿಕೊಳ್ಳುವುದಕ್ಕೆ ಅಸಾಧ್ಯ.

ನೇರಳೆ ( Purple Line) ಹಾಗೂ ಹಸಿರು ಬಣ್ಣದ ಮಾರ್ಗದಲ್ಲಿ ( Green Line) ಸಂಚರಿಸುವ ಈ ಮೆಟ್ರೋ ನಿತ್ಯ ಲಕ್ಷಾಂತರ ಜನರ ಬದುಕಿನ ಸಂಚಾರದ ಬಂಡಿ.

ಕಣ್ಣು ಹಾಯಿಸಿದ ದೂರಕ್ಕೂ ಕಾಣಿಸುವ ಟ್ರಾಫಿಕ್‌ಗಳ ನಡುವೆ ಜನರನ್ನು ಸಮಯದ ಉಳಿತಾಯದ ಜೊತೆಗೆ ಅತಿ ವೇಗದಲ್ಲೂ ಸಂಚರಿಸುವ ಮೆಟ್ರೋ ಯೋಜನೆಯನ್ನೇ ನಂಬಿಕೊಂಡು ಹೆಚ್ಚು ಕಡಿಮೆ ಅರ್ಧಕರ್ಧ ಬೆಂಗಳೂರಿನ ಮಂದಿ ಜೀವನ ನಡೆಸುತ್ತಿದ್ದಾರೆ.

ಈ ಕಾರಣಕ್ಕಾಗಿಯೇ ನಮ್ಮ ಮೆಟ್ರೋ ಯೋಜನೆ ಮಹತ್ವದ ಮೈಲುಗಲ್ಲೊಂದನ್ನು ಸಾಧಿಸಿದೆ.ಸುಮಾರು 12 ವರ್ಷಗಳ ಹಿಂದೆ ಉದ್ಯಾನನಗರಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿತ್ತು. 2011 ಅಕ್ಟೋಬರ್‌ ( October) 20 ರಿಂದ ಮೆಟ್ರೋ ಬೆಂಗಳೂರಿನಲ್ಲಿ ತನ್ನ ಓಡಾಟವನ್ನು ನಡೆಸಿತ್ತು.

MG ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ 6.7km ದೂರ ನಮ್ಮ ಮೆಟ್ರೋದ ಮೊದಲ ಕಾರ್ಯಾಚರಣೆ ಆರಂಭಿಸಿತ್ತು. ಮೊದಲ ವರ್ಷದಲ್ಲಿ ಸರಾಸರಿ 33,152 ಪ್ರಯಾಣಿಕರು ಪ್ರತಿದಿನ ಮೆಟ್ರೋ ಬಳಸುತ್ತಿದ್ದರು.

ಆದರೆ ಇದೀಗ ಮೆಟ್ರೋ ಶತಕೋಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿದ ಸಾಧನೆಯನ್ನು ಮಾಡಿದೆ. 12 ವರ್ಷಗಳಲ್ಲಿ ವಾರ್ಷಿಕವಾಗಿ ಸರಾಸರಿ 5.5 ಕಿಮೀ ಮೆಟ್ರೋ ಮಾರ್ಗ ವಿಸ್ತರಣೆ ಆಗುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಮ್ಮ ಮೆಟ್ರೋ ಈಗ 65 ನಿಲ್ದಾಣಗಳೊಂದಿಗೆ 74 ಕಿಮೀ ಕಾರ್ಯಾಚರಣೆಯ ಜಾಲವನ್ನು ಹೊಂದಿದೆ.ಕಳೆದ ತಿಂಗಳು ಅಂದ್ರೆ 2024ರ ಡಿಸೆಂಬರ್‌ 29ರವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ನೂರು ಕೋಟಿಯನ್ನು ದಾಟಿದ್ದು, ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ.

ಒಂದು ಮೂಲದ ‘ಪ್ರಕಾರ ನಿತ್ಯಲೂ ಮೆಟ್ರೋದಲ್ಲಿ ಸರಿಸುಮಾರು 7 ಲಕ್ಷ ಪ್ರಯಾಣಿಕರು ಸಂಚಾರವನ್ನು ಮಾಡುತ್ತಾರಂತೆ. ಈ ತಿಂಗಳಿನಲ್ಲಿಯೇ ಈವರೆಗೆ ಸುಮಾರು 1.40 ಕೋಟಿ ಜನರು ನಮ್ಮ ಮೆಟ್ರೋದಲ್ಲಿ ಓಡಾಟವನ್ನು ನಡೆಸಿದ್ದಾರಂತೆ.

ಡಿಸೆಂಬರ್‌ನಲ್ಲಿ ಒಟ್ಟು 1.73 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಡಿ.13ರಂದು ಗರಿಷ್ಠ 7.48ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದರು. ಇದರಲ್ಲಿ ಶೇ. 51ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌, ಶೇ.31ರಷ್ಟು ಟೋಕನ್‌ ಬಳಕೆದಾರರು ಸೇರಿದ್ದಾರೆ. ಜೊತೆಗೆ ಶೇ. 14ರಷ್ಟು ಕ್ಯೂ ಆರ್‌ ಟಿಕೆಟ್ ಬಳಕೆದಾರರಿದ್ದಾರೆ.

2023ರ ಜನವರಿಯಲ್ಲಿ 5.11 ಲಕ್ಷವಿದ್ದ ಕ್ಯೂ ಆರ್‌ ಟಿಕೆಟ್‌ ಬಳಕೆದಾರರ ಸಂಖ್ಯೆ ಡಿಸೆಂಬರ್‌ಗೆ 25.9 ಲಕ್ಷ ದಾಟಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ.ಪ್ರಸ್ತುತ ಇದೀಗ ಪ್ರತಿ ದಿನವೂ ಸುಮಾರು 300 ಟ್ರಿಪ್‌ಗಳನ್ನು ಎರಡೂ ಮಾರ್ಗಗಳಲ್ಲಿ ನಿರ್ವಹಿಸಲಾಗುತ್ತದೆ.

ವಿಶೇಷವಾಗಿ ಮೆಜೆಸ್ಟಿಕ್‌ನಲ್ಲಿ ನಿಲ್ದಾಣದ ದಟ್ಟಣೆಯನ್ನು ನಿರ್ವಹಿಸಲು ಪೀಕ್‌ ಸಮಯದಲ್ಲಿ ಶಾರ್ಟ್‌-ಲೂಪ್‌ ರೈಲುಗಳನ್ನು ನಿಯೋಜಿಸಲಾಗಿದೆ. 400 ಆರಂಭಿಕ ಕಾರ್ಯಾಚರಣೆ ಸಿಬ್ಬಂದಿಯೊಂದಿಗೆ ಬಿಎಂಆರ್‌ಸಿಎಲ್‌ ನೆಟ್‌ವರ್ಕ್‌ನ ಬೆಳವಣಿಗೆಯೊಂದಿಗೆ 1,800 ಉದ್ಯೋಗಿಗಳಿಗೆ ವಿಸ್ತರಿಸಿದೆ.

ಚಲ್ಲಘಟ್ಟದಿಂದ ಕಾಡುಗೋಡಿಗೆ (ವೈಟ್‌ಫೀಲ್ಡ್‌) ಸಂಪೂರ್ಣ ನೇರಳೆ ಮಾರ್ಗವನ್ನು ತೆರೆದ ನಂತರ, ಪೀಕ್‌ ಸಮಯದಲ್ಲಿ ಹೆಚ್ಚುವರಿ ರೈಲುಗಳಿಗೆ ಪ್ರಯಾಣಿಕರ ಬೇಡಿಕೆಯಾಗಿದೆ.

ನೀವು ಎಂದಾದರೂ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣವನ್ನು ಮಾಡಿದ್ದರೆ, ನಮ್ಮ ಮೆಟ್ರೋ ಅನುಭವವನ್ನು ಪಡೆದಿದ್ದರೆ, ಮೆಟ್ರೋದಲ್ಲಿ ಸಂಚರಿಸಲಿರುವ ಆ ಶತಕೋಟಿ ಪ್ರಯಾಣಿಕರಲ್ಲಿ ನೀವೂ ಕೂಡ ಸೇರಿರುತ್ತೀರಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button