ನೀಮಚ್ ಮಾತಾ ಮಂದಿರ ರೋಪ್ವೇ – ಉದಯಪುರದ ನೂತನ ಪ್ರವಾಸಿ ಆಕರ್ಷಣೆ
ದಾಮೋದರ್ ರೋಪ್ವೇಸ್ ಮತ್ತು ಇನ್ಫ್ರಾ ಲಿಮಿಟೆಡ್ (DRIL) ನ ಹೊಸ ಯೋಜನೆಯಾದ ನೀಮಚ್ ಮಾತಾ ಮಂದಿರ ರೋಪ್ವೇಯ ಅಧಿಕೃತ ಉದ್ಘಾಟನೆಯನ್ನು ಉದಯಪುರ ಇತ್ತೀಚೆಗೆ ಘೋಷಿಸಿದೆ.
ನೀಮಚ್ ಮಾತಾ ಮಂದಿರ ರೋಪ್ವೇ (Neemach Mata Mandir ropeway) ನೀಮಚ್ ಮಾತಾ ಮಂದಿರಕ್ಕೆ ನೇರ ಸಂಪರ್ಕ ಒದಗಿಸುತ್ತದೆ. ಪುಷ್ಕರ್ನಲ್ಲಿ ಸಾವಿತ್ರಿ ಮಾಲಾ ರೋಪ್ವೇ ಯಶಸ್ಸಿನ ನಂತರ ರಾಜಸ್ಥಾನದಲ್ಲಿ ಇದು DRIL ನ ಎರಡನೇ ರೋಪ್ವೇ ಯೋಜನೆಯಾಗಿದೆ.
ರೋಪ್ವೇ ಒಟ್ಟು 429.19 ಮೀಟರ್ಗಳಷ್ಟು ದೂರವನ್ನು ಹೊಂದಿದೆ. ಮೊದಲು ಪ್ರವಾಸಿಗರು ಮಂದಿರವನ್ನು ತಲುಪಲು 45 ನಿಮಿಷ ಕ್ರಮಿಸಬೇಕಾಗಿತ್ತು, ಈಗ ರೋಪ್ ವೇ ಮೂಲಕ ಕೇವಲ 3 ನಿಮಿಷಗಳಲ್ಲಿ ಮಂದಿರವನ್ನು ತಲುಪಬಹುದು.
ನೀಮಚ್ ಮಾತಾ ಮಂದಿರ ರೋಪ್ವೇ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು, 12 ಉತ್ತಮ ಗಾಳಿ ಕ್ಯಾಬಿನ್ಗಳನ್ನು ಒಳಗೊಂಡಿದೆ ಮತ್ತು ಗಂಟೆಗೆ 400 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ರೋಪ್ವೇ ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ರೌಂಡ್ಟ್ರಿಪ್ ಟಿಕೆಟ್ಗೆ ಪ್ರತಿ ಪ್ರಯಾಣಿಕರಿಗೆ ಕೇವಲ ರೂ185 ವೆಚ್ಚವಾಗುತ್ತದೆ.
ಗಮನಾರ್ಹ ಅಂಶವೆಂದರೆ ಈ ಯೋಜನೆಯನ್ನು ಪರಿಸರಕ್ಕೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡದೇ ನಿರ್ಮಿಸಲಾಗಿದೆ. 500 ಅಡಿ ಎತ್ತರದಿಂದ ದಕ್ಷಿಣ ಅರಾವಳಿ ಪ್ರದೇಶದ ಸುಂದರವಾದ ಭೂದೃಶ್ಯವನ್ನು ಆನಂದಿಸಬಹುದಾಗಿದೆ.
“ಉದಯಪುರ” (Udaipur) ಭಾರತದಲ್ಲಿ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ನಗರವು ಸಿಟಿ ಪ್ಯಾಲೇಸ್, ಲೇಕ್ ಪಿಚೋಲಾ, ಜಗ ಮಂದಿರ, ಸಹೇಲಿಯೋನ್ ಕಿ ಬಾರಿ ಅಂತಹ ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.
ಈ ರೋಪ್ವೇ ಉದಯಪುರ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ತುಂಬಲಿದೆ. ಇದು ದೇವಾಲಯಕ್ಕೆ ಭೇಟಿ ನೀಡುವ ನಗರದ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಸುಂದರವಾದ ಮತ್ತು ತ್ವರಿತ ಪ್ರಯಾಣವನ್ನು ಒದಗಿಸುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.