ಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಗುಜರಾತಿನಲ್ಲಿರುವ ಈ ವಿಶ್ವ ಪಾರಂಪರಿಕ ತಾಣಗಳಿಗೊಮ್ಮೆ ಭೇಟಿ ನೀಡಿ:

ಯುನೆಸ್ಕೋ ವಿಶ್ವದೆಲ್ಲೆಡೆ ಇರುವ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಮಹತ್ವಗಳನ್ನು ಹೊಂದಿರುವ ತಾಣಗಳನ್ನು ಗುರುತಿಸಿ, “ವಿಶ್ವ ಪಾರಂಪರಿಕ ತಾಣ”ಗಳ (World Heritage Sites) ಪಟ್ಟಿಯಲ್ಲಿ ಸೇರಿಸಿ ಅವುಗಳನ್ನು ಸಂರಕ್ಷಿಸುತ್ತದೆ.

ನಮ್ಮ ದೇಶದಲ್ಲಿ ಒಟ್ಟು 42 ವಿಶ್ವ ಪಾರಂಪರಿಕ ತಾಣಗಳಿದ್ದು, ಅವುಗಳಲ್ಲಿ ಗುಜರಾತಿನ ನಾಲ್ಕು ಐತಿಹಾಸಿಕ ತಾಣಗಳೂ ಸೇರಿವೆ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

1. ಚಂಪನೇರ್ ಪಾವಗಡ ಪುರಾತತ್ವ ಉದ್ಯಾನ(2004):

ಈ ಉದ್ಯಾನವು ಗುಜರಾತಿನ ಪಂಚಮಹಲ್ ಜಿಲ್ಲೆಯಲ್ಲಿದೆ. ಈ ತಾಣವು ಇನ್ನೂ ಸಂಪೂರ್ಣವಾಗಿ ಉತ್ಖನನ ಮಾಡಿಲಾಗಿಲ್ಲದ ಐತಿಹಾಸಿಕ, ಪುರಾತನ ಮತ್ತು ಜೀವಂತ ಸಂಸ್ಕೃತಿಯ ಪರಂಪರೆಯ ಅಮೂಲ್ಯ ಆಸ್ತಿಯನ್ನು ಹೊಂದಿದೆ.

World Heritage Site “champaner pavagadh archaeological park”

ಈ ತಾಣವು 8 ರಿಂದ 14 ನೇ ಶತಮಾನದವರೆಗಿನ ಅನೇಕ ಕುರುಹುಗಳು, ಕೋಟೆಗಳು, ಅರಮನೆಗಳು, ಧಾರ್ಮಿಕ ಕಟ್ಟಡಗಳು, ವಸತಿ ಆವರಣಗಳು, ಕೃಷಿ ರಚನೆಗಳು ಮತ್ತು ನೀರಿನ ಸ್ಥಾಪನೆಗಳ ಅವಶೇಷಗಳನ್ನು ಹೊಂದಿರುವ ಕಾರಣ ಈ ಉದ್ಯಾನವನ್ನು 2004 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು.

ಪಾವಗಡ ಬೆಟ್ಟದ ಮೇಲಿರುವ ಕಾಳಿಕಾಮಾತಾ ದೇವಾಲಯವು ಒಂದು ಪ್ರಮುಖ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಇಲ್ಲಿಗೆ ಪ್ರತೀವರ್ಷ ಅನೇಕ ಭಕ್ತರು ಭೇಟಿ ನೀಡುತ್ತಾರೆ.

2. ರಾಣಿ ಕಿ ವಾವ್ (2014):

ಇದು ಗುಜರಾತ್ ನ ಪಟಾನ್ ನಗರದಲ್ಲಿರುವ ಅತ್ಯಂತ ವಿಶಿಷ್ಟ ಮೆಟ್ಟಿಲುಬಾವಿಯ ಸಂಕೀರ್ಣವಾಗಿದೆ. ಸರಸ್ವತಿ ನದಿಯ ದಡದಲ್ಲಿರುವ ಇದು, 11 ನೇ ಶತಮಾನದಲ್ಲಿ ರಾಜನ ನೆನಪಿನ ಸ್ಮಾರಕವಾಗಿ ನಿರ್ಮಿಸಲಾಯಿತು.

World Heritage Site “Rani Ki Vav”

ಭೂಗತ ಜಲ ಸಂಪನ್ಮೂಲ ಮತ್ತು ಶೇಖರಣಾ ವ್ಯವಸ್ಥೆಗಳ ಒಂದು ವಿಶಿಷ್ಟ ಉದಾಹರಣೆ ಇದಾಗಿರುವುದರಿಂದ ರಾಣಿ ಕಿ ವಾವ್ ಅನ್ನು 2014 ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಈ ಮೆಟ್ಟಿಲುಬಾವಿಯು ತಲೆಕೆಳಗಾದ ದೇವಸ್ಥಾನದ ರೂಪದಲ್ಲಿದೆ. ಮೆಟ್ಟಿಲುಗಳನ್ನು ಏಳು ಹಂತದಲ್ಲಿ ಮಾರು-ಗುರ್ಜರಾ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ೫೦೦ ತತ್ವ ಶಿಲ್ಪಗಳು ಇದು ಹೊಂದಿದೆ.

3. ಅಹಮದಾಬಾದ್ ಐತಿಹಾಸಿಕ ನಗರ (2017):

15 ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಷಾ ನಿಂದ ಸ್ಥಾಪಿತವಾದ ಗೋಡೆಯ ನಗರ ಅಹ್ಮದಾಬಾದ್, ಸಬರಮತಿ ನದಿಯ ಪೂರ್ವ ದಂಡೆಯಲ್ಲಿದ್ದು, ಸುಲ್ತಾನರ ಕಾಲದ ಶ್ರೀಮಂತ ವಾಸ್ತುಶಿಲ್ಪದ ಪರಂಪರೆಯನ್ನು ಪ್ರಸ್ತುತಪಡಿಸುತ್ತದೆ.

World Heritage Site “Historical City of Ahmedabad”

ವಿಶೇಷವಾಗಿ ಭದ್ರಾ ಸಿಟಾಡೆಲ್, ಕೋಟೆ ನಗರದ ಗೋಡೆಗಳು, ದ್ವಾರಗಳು, ಮಸೀದಿಗಳು, ಗೋರಿಗಳು, ಪ್ರಮುಖ ಹಿಂದೂ ಮತ್ತು ಜೈನ ದೇವಾಲಯಗಳು ಅಹಮದಾಬಾದಿನ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸಿವೆ.

ಇದು ಆರು ಶತಮಾನಗಳ ಕಾಲ ಗುಜರಾತ್ ರಾಜ್ಯದ ರಾಜಧಾನಿಯಾಗಿತ್ತು ಮತ್ತು ನಂತರ ಪ್ರಮುಖ ರಾಜಕೀಯ ಮತ್ತು ವಾಣಿಜ್ಯವಾಯಿತು. ಇದರ ಐತಿಹಾಸಿಕ ಪರಂಪರೆಯ ಕಾರಣದಿಂದಾಗಿ 2017ರಲ್ಲಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.

4. ಧೋಲವೀರ (2021):

ಧೋಲಾವೀರಾ ಗುಜರಾತ್‍ನ ಕಚ್ ಜಿಲ್ಲೆಯಲ್ಲಿದೆ. ಈ ತಾಣವು ಪ್ರಾಚೀನ ಸಿಂಧೂತಟದ ನಾಗರೀಕತೆಯ ಅವಶೇಷಗಳನ್ನು ಹೊಂದಿದೆ. ಇದು ಐದು ಅತಿ ದೊಡ್ಡ ಹರಪ್ಪ ತಾಣಗಳಲ್ಲಿ ಒಂದೆನಿಸಿದೆ ಹಾಗೂ ಸಿಂಧೂತಟದ ನಾಗರೀಕತೆಗೆ ಸೇರಿದ ಭಾರತದಲ್ಲಿನ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದು.

World Heritage Site “Dholavira”

ಧೋಲಾವೀರಾ ಆಯತಾಕಾರವಾಗಿದ್ದು, 22 ಹೆಕ್ಟೇರ್‍ನಷ್ಟು ಹರಡಿದೆ.ಇದು ಅತ್ಯಂತ ಪ್ರಾಚೀನ ನಾಗರೀಕತೆಯ ಅವಶೇಷಗಳನ್ನು ಹೊಂದಿರುವ ಕಾರಣ ಇದನ್ನು 2021 ರಲ್ಲಿ ಭಾರತದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button