ಉಡುಪಿಗೆ ಹೋದಾಗ ವರಂಗಕ್ಕೂ ಹೋಗಿ ಬನ್ನಿ
ವರಂಗ (Varanga) ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದೆ. ಹನ್ನೆರಡನೇ ಶತಮಾನದಲ್ಲಿ ಈ ಬಸದಿ ಹಾಗೂ ಇಲ್ಲಿನ ಮೂರ್ತಿಯನ್ನು ನಿರ್ಮಿಸಲಾಗಿದೆ ಎಂದು ಇತಿಹಾಸಗಳು ಹೇಳುತ್ತದೆ.
ಇಲ್ಲಿನ ಕೆರೆಯನ್ನು ಅಂದಿನ ಆಳುಪ ಮನೆತನದ ರಾಣಿಯಾದ ಜಾಕಾಲೀದೇವಿ ನಿರ್ಮಿಸಿದ್ದಳೆಂದು ಹೇಳಲಾಗುತ್ತದೆ.ಈ ಬಸದಿಗೆ ವರಂಗ ಎಂದು ಹೆಸರು ಬರಲು ಭಿನ್ನ ಪ್ರತೀತಿಯಿದೆ.
ವರಂಗ ಎಂಬ ರಾಜನು ಇಲ್ಲಿಯ ಪ್ರದೇಶವನ್ನು ಅಳುತಿದ್ದ ಕಾರಣದಿಂದ ವರಂಗ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಲ್ಲಿ ಇರುವ ನೇಮಿನಾಥಮೂರ್ತಿಯು ಸ್ವಲ್ಪ ವಾಲಿಕೊಂಡಿದ್ದು ಹಾಗಾಗಿ ವಾರೆಅಂಗ ಹೊಂದಿದ ಮೂರ್ತಿ ಎಂದು ಕರೆಯುತಿದ್ದರು ಮುಂದೆ ಇದು “ವರಂಗ ” ಎಂದು ಪ್ರಸಿದ್ದಿಯಾಯಿತು ಎಂದು ಹೇಳಲಾಗುತ್ತದೆ.
ಪದ್ಮಾವತಿಯ ದರ್ಶನ ಮಾಡಬೇಕಾದರೆ ನೀವು ಇಲ್ಲಿನ ಕೆರೆಯಿಂದ ದೋಣಿಯಲ್ಲಿ ವಿಹರಿಸಿ ಹೋಗಬೇಕು. ಬೆಳಿಗ್ಗೆ 8.30 ಯಿಂದ 1 ಗಂಟೆಯ ತನಕ, ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯ ತನಕ ವಾರದ ಏಳು ದಿನ ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ.
14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿದೆ ನಕ್ಷತ್ರಾಕಾರದ ಚತುರ್ಮುಖ ಬಸದಿ (Chaturmukha Basadi). ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು 100 ಮೀಟರ್ಗಿಂತಲೂ ಹೆಚ್ಚು ದೂರವನ್ನು ದೋಣಿ ಮೂಲಕ ಪ್ರಯಾಣಿಸಬೇಕು.
ಪೂರ್ಣ ಬಸದಿ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಪ್ರವೇಶ ದ್ವಾರದಲ್ಲಿರುವ 45 ಅಡಿ ಎತ್ತರದ ಮಾನಸ್ತಂಭ ಕರಾವಳಿಯ ಅತಿ ಪ್ರಾಚೀನವಾಗಿದೆ. ಹಿರಿಯಂಗಡಿ ಹಾಗೂ ಅಳದಂಗಡಿ ಬಳಿಕ 3ನೇ ಅತಿ ದೊಡ್ಡ ಮಾನಸ್ತಂಭ ಇದು.
ಇಲ್ಲಿ ನೇಮಿನಾಥ ಸ್ವಾಮಿ ಬಸದಿಗೆ ಹೊಂದಿಕೊಂಡಂತೆ ಸಮಾಧಿ ಮತ್ತು ನಿಷಿಧಿಗಳಿವೆ. ಹೆಬ್ರಿಯಿಂದ ಕಾರ್ಕಳ ಮಾರ್ಗದಲ್ಲಿ 5ಕಿಮೀ ಸಾಗುವಾಗ ವರಂಗಕ್ಷೇತ್ರ ತಲುಪಬಹುದು.ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ ಸುಮಾರು 25ಕಿಮೀ ಹಾಗೆಯೇ ಉಡುಪಿಯಿಂದ ಸುಮಾರು 37ಕಿಮೀ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.