ವಿಂಗಡಿಸದವಿಸ್ಮಯ ವಿಶ್ವ

ಜಪಾನ್‌ನ ಐವೊ ಜಿಮಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ:

ರಾಜಧಾನಿ ಟೋಕಿಯೊದಿಂದ ದಕ್ಷಿಣಕ್ಕೆ 150 ಕಿಮೀ ದೂರದಲ್ಲಿರುವ ಐವೊ ಜಿಮಾದ ಕರಾವಳಿಯ ನಿಜಿಮಾ ದ್ವೀಪದಲ್ಲಿರುವ ಜ್ವಾಲಾಮುಖಿಯು ನವೆಂಬರ್ 23 ರಂದು ಸ್ಫೋಟಿಸಿತು.

ಸ್ಫೋಟದ ಅಬ್ಬರ ಆಕಾಶದೆತ್ತರದವರೆಗೆ ಹರಡಿರುವ ವಿಡಿಯೋ ಕಂಡ ಜನ ನಿಬ್ಬೆರಗಾಗಿದ್ದಾರೆ. ಜ್ವಾಲಾಮುಖಿ (Volcano) ಸ್ಫೋಟಗೊಂಡ ತಕ್ಷಣ ಬಂಡೆಕಲ್ಲುಗಳು ಮತ್ತು ಅದರ ಬೂದಿಯು ಗಾಳಿ ಮತ್ತು ಸಮುದ್ರವನ್ನು ಸೇರಿವೆ.

ಸ್ಫೋಟದ ಕ್ಷಣವನ್ನು ಜಪಾನ್‌ನ (Japan) ಕೋಸ್ಟ್ ಗಾರ್ಡ್ ಸಂಸ್ಥೆ ಸೆರೆಹಿಡಿದಿದ್ದು, ಅದು ಮಂಗಳವಾರ ತುಣುಕನ್ನು ಹಂಚಿಕೊಂಡಿದೆ. ಸ್ಫೋಟವು ಸುಮಾರು 200 ಮೀ (656 ಅಡಿ) ಎತ್ತರವನ್ನು ತಲುಪಿದೆ ಎಂದು ಸಂಸ್ಥೆ ತಿಳಿಸಿದೆ.

ಜಪಾನ್‌ನಲ್ಲಿರುವ 67 ಜ್ವಾಲಾಮುಖಿಗಳಲ್ಲಿ 55 ಇನ್ನೂ ಸಕ್ರಿಯವಾಗಿವೆ ಎಂದು ಪರಿಗಣಿಸಲಾಗಿದೆ. ಹೆಚ್ಚುವರಿಯಾಗಿ ಕರಾವಳಿಯಲ್ಲಿ ಒಂದು ಸಕ್ರಿಯ ಜಲಾಂತರ್ಗಾಮಿ ಜ್ವಾಲಾಮುಖಿ ಇದೆ ಎಂದು ಹೇಳಲಾಗುತ್ತದೆ.

ಈಗಾಗಲೇ ಇಲ್ಲಿ 38 ಜ್ವಾಲಾಮುಖಿಗಳೊಂದಿಗೆ ಕಳೆದ 1,300 ವರ್ಷಗಳಲ್ಲಿ ಒಟ್ಟು 130 ಸ್ಫೋಟಗಳು ಸಂಭವಿಸಿವೆ ಎಂದು ವರದಿ ಹೇಳುತ್ತದೆ.

ನವೆಂಬರ 23 ರ ಸ್ಫೋಟದ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದನ್ನು ವೀಕ್ಷಿಸಿದ ಜನ ಮೂಕವಿಸ್ಮಿತರಾಗಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button