ಆಹಾರ ವಿಹಾರವಿಂಗಡಿಸದ

ಮುಚ್ಚಲಿದೆ 69 ವರ್ಷಗಳ ಹಳೆಯ ಹೋಟೇಲ್; ಆಹಾರಪ್ರಿಯರಿಗೆ ಬೇಸರ

ಹೌದು, ಬೆಂಗಳೂರಿನ ಹೃದಯಭಾಗದಲ್ಲಿರುವ ಮಲ್ಲೇಶ್ವರಂನ ಸುಪ್ರಸಿದ್ಧ ಹಾಗೂ ಪುರಾತನ ಹೋಟೇಲ್ ನ್ಯೂ ಕೃಷ್ಣ ಭವನ್ ಡಿ.6 ರಂದು ಮುಚ್ಚಲಿದೆ. ಈ ವಿಷಯ ತಿಳಿದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಉಜ್ವಲಾ ವಿ.ಯು.

ನ್ಯೂ ಕೃಷ್ಣ ಭವನ್ ಹೋಟೇಲ್ 1954 ರಲ್ಲಿ ರಾಮಕೃಷ್ಣ ಪ್ರಭು ಅವರಿಂದ ಆರಂಭಗೊಂಡಿತು. ಆನಂತರ ಅವರ ಮಗ ಸುಂದರ್ ಆರ್. ಪ್ರಭು ಅವರಿಗೆ ವರ್ಗಾಯಿಸಲಾಯಿತು. ಸದ್ಯ ಮೊಮ್ಮಗ ಸುನಿಲ್ ಎಸ್. ಪ್ರಭು ಅವರು ನಿರ್ವಹಿಸುತ್ತಿದ್ದರು.

ಆದರೆ ಈಗ ಸ್ವತಃ ಹೋಟೇಲ್ ಮಾಲಿಕರೇ ಹೋಟೆಲ್ ಮುಂದೆ ಫಲಕ ಹಾಕಿದ್ದು, ” ಆತ್ಮೀಯ ಗ್ರಾಹಕರೇ ನ್ಯೂ ಕೃಷ್ಣ ಭವನ್‌ ಡಿಸೆಂಬರ್‌ 6, 2023 ರಂದು ಮುಚ್ಚಲಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ” ಎಂದಿದ್ದಾರೆ.

ಸುಮಾರು ಏಳು ದಶಕಗಳ ಕಾಲ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳನ್ನು ಉಣಬಡಿಸುವ ಮೂಲಕ ನಿಷ್ಠಾವಂತ ಗ್ರಾಹಕರನ್ನು ಪಡೆದಿದ್ದ ಹೋಟೆಲ್ ಈಗ ಈ ನಿರ್ಧಾರವನ್ನು ಏಕೆ ಮಾಡಿದೆ ಎಂಬುದು ಜನರ ಪ್ರಶ್ನೆ.

ಮಲ್ಲೇಶ್ವರದ ಹಿರಿಯ ಜೀವಗಳಿಗೆ ಬಾಲ್ಯದ ಮತ್ತು ಅನೇಕ ವರ್ಷಗಳ ಸವಿ ನೆನಪುಗಳನ್ನು ನೀಡಿದ್ದ ಹೋಟೆಲ್ ಮುಚ್ಚುತ್ತಿರುವ ವಿಷಯ ತಿಳಿದು, ಅವರೆಲ್ಲಾ ಬೇಸರಗೊಳ್ಳುವಂತೆ ಆಗಿದೆ.

ನ್ಯೂ ಕೃಷ್ಣ ಭವನ ಹೋಟೆಲ್ ರುಚಿಕರವಾದ ಪಾಕಪದ್ಧತಿ ಮತ್ತು ತ್ಯಾಜ್ಯ ನಿರ್ವಹಣೆಯಿಂದ ಜನರ ಗಮನ ಸೆಳೆದಿತ್ತು. ಬೇರೆಲ್ಲೂ ಸಿಗದ ರುಚಿ ರುಚಿಯಾದ ಖಾದ್ಯಗಳು ಇಲ್ಲಿ ದೊರೆಯುತ್ತಿದ್ದವು.

ಇಲ್ಲಿಯ ಬಟನ್ ಇಡ್ಲಿ, ಹಸಿರು ಮಸಾಲೆ ಇಡ್ಲಿ, ನೀರ್‌ ದೋಸೆ, ಮಸಾಲೆ ದೋಸೆ, ಬಾದಾಮ್ ಹಲ್ವಾಗಳಂತಹ ವಿವಿಧ ಭಕ್ಷ್ಯಗಳನ್ನು ಸವಿಯಲೆಂದೇ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದರು.

ಸದ್ಯ ನ್ಯೂ ಕೃಷ್ಣ ಭವನ ಹೋಟೆಲ್‌ (New Krishna Bhavan Hotel) ಕಟ್ಟಡವನ್ನು ಮಾಲೀಕರು ಆಭರಣ ಕಂಪನಿಯೊಂದಕ್ಕೆ ಮಾರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿ ಆಭರಣ ಮಳಿಗೆಯೊಂದು ತಲೆ ಎತ್ತಲಿದೆ.

ಇನ್ನು ಈ ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಬಾಣಸಿಗರಲ್ಲಿ ಕೆಲವರು 30-40 ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅಂತಹ ಕೆಲಸಗಾರರ ಸೇವೆಯನ್ನು ನೆನೆದು, ನಮನಗಳನ್ನು ತಿಳಿಸಿರುವ ಮಾಲೀಕರು ಅವರಿಗೆಲ್ಲಾ ಮುಂದೆ ಬೇರೆ ಹೋಟೆಲ್ ಗಳಲ್ಲಿ ಉದ್ಯೋಗ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.

New Krishna Bhavan Hotel to shut it’s doors

ಈ ಹೋಟೆಲ್ ಭವಿಷ್ಯದಲ್ಲಿ ಬೇರೆ ಎಲ್ಲಾದರೂ ಆರಂಭಗೊಳ್ಳಲಿದೆಯೇ? ಎಂಬ ಗ್ರಾಹಕರ ಪ್ರಶ್ನೆಗೆ ಇನ್ನೂ ಮಾಲೀಕರಿಂದ ಉತ್ತರ ಲಭಿಸಿಲ್ಲ. ಆದರೆ ಇತರೆ ಮೂಲಗಳಿಂದ ಆರಂಭಿಸಬಹುದೆಂಬ ಮಾಹಿತಿ ಲಭ್ಯವಾಗಿದೆ.

ಮುಂದಿನ ದಿನಗಳಲ್ಲಿ ನ್ಯೂ ಕೃಷ್ಣ ಭವನ ಹೋಟೆಲ್ ಮತ್ತೆ ಜನರಿಗೆ ತನ್ನ ವಿಶಿಷ್ಟ ಸಾಂಪ್ರದಾಯಿಕ ಖಾದ್ಯಗಳ ಸವಿ ಉಣಬಡಿಸಲು ಬೇರೆಲ್ಲಾದರೂ ಆರಂಭವಾಗುತ್ತದೆಯೇ ಎಂದು ಕಾದು ನೋಡಬೇಕಿದೆ. ಅಲ್ಲಿಯವರೆಗೂ ಆಹಾರಪ್ರಿಯರು ಈ ಹೋಟೆಲ್ ಅನ್ನು ಮಿಸ್ ಮಾಡಿಕೊಳ್ಳಲೇಬೇಕು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button