ವಿಂಗಡಿಸದ

ರಾಜ್ಯದ ಈ ಗ್ರಾಮ ಸಂಸ್ಕೃತ ಗ್ರಾಮ ಅಂತಲೇ ಜನಪ್ರಿಯ.

 

ದೇವ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯನ್ನು ಮಾತಾನಾಡುವವರ ಸಂಖ್ಯೆ ಇತ್ತೀಚೆಗೆ ಬಹಳ ಕಡಿಮೆ ಆಗುತ್ತಿದೆ ಅನ್ನೋ ಮಾತಿದೆ. ಆದರೆ ಕರ್ನಾಟಕದ ಈ ಗ್ರಾಮದಲ್ಲಿ ಸಂಸ್ಕೃತಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದಾರೆ. ಹಾಗಾಗಿಯೇ ಈ ಗ್ರಾಮವನ್ನು “ಸಂಸ್ಕೃತ ಗ್ರಾಮ” ಎಂದು ಕರೆಯಲಾಗುತ್ತದೆ.

ಮಲೆನಾಡಿನ  ಸೌಂದರ್ಯದ ಸೆರಗಿನ ಮತ್ತೂರು ಗ್ರಾಮ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದಕ್ಕೆ ಪ್ರಮುಖ ಕಾರಣ ಸಂಸ್ಕೃತ ಭಾಷೆ. 1983 ರಲ್ಲಿ ಈ ಗ್ರಾಮದಲ್ಲಿ ಆರಂಭಗೊಂಡ ಸಂಸ್ಕೃತ ಅಧ್ಯಯನ ಇಂದಿಗೂ ನಡೆಯುತ್ತಿದೆ.

Matturu

ಈ ಮತ್ತೂರು ಗ್ರಾಮವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ಇದನ್ನು ಮಥೂರು ಎಂದು ಕೂಡ ಕರೆಯುತ್ತಾರೆ. ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಗ್ರಾಮದ ಜನರು ದೇವ ಭಾಷೆಯನ್ನು ಮಾತನಾಡುತ್ತಾರೆ. ಇಲ್ಲಿ ಸಂಸ್ಕೃತ ಬೋಧನೆಗಳನ್ನು ಹೇಳಿಕೊಡಲಾಗುತ್ತದೆ. ವಿಶೇಷವೆಂದರೆ, ಈ ಗ್ರಾಮದ ಜನರು ತಮ್ಮ ದೈನಂದಿನ ಭಾಷೆಯನ್ನು ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ.

ನೀವು ಇದನ್ನು ಇಷ್ಟ ಪಡಬಹುದು: ಉಡುಪಿಯಲ್ಲಿದೆ ಒಂದು ಚೆಂದದ ಸಂಸ್ಕೃತಿ ಗ್ರಾಮ

ಈ ಪುಟ್ಟ ಗ್ರಾಮದಲ್ಲಿ ವೇದಗಳು ಮತ್ತು ವೇದಗಳಿಗೆ ಸಂಬಂಧಪಟ್ಟ ಮಹತ್ವಪೂರ್ಣ ಅಧ್ಯಯನವನ್ನು ಕಲಿಸಿಕೊಡಲಾಗುತ್ತದೆ.

1982 ರಲ್ಲಿ ಉಡುಪಿಯ ಪೇಜಾವರ ಮಠದ ಮಠಾಧೀಶರಾದ ವಿಶ್ವೇಶ ತೀರ್ಥರು ಮತ್ತೂರಿಗೆ ಭೇಟಿ ನೀಡಿ, ಗ್ರಾಮವನ್ನು “ಸಂಸ್ಕೃತ ಗ್ರಾಮ” ಎಂದು ನಾಮಕರಣ ಮಾಡಿದ ನಂತರ ಈ ಬದಲಾವಣೆಯಾಯಿತು ಎನ್ನಲಾಗುತ್ತದೆ. 

ವಿಶೇಷವೆಂದರೆ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಬಹುತೇಕರು  ನಿರರ್ಗಳವಾಗಿ ಸಂಸ್ಕೃತ  ಭಾಷೆಯಲ್ಲಿ   ಮಾತನಾಡುತ್ತಾರೆ. ಸಂಸ್ಕೃತ ಸಂಶೋಧನ ಕೇಂದ್ರ ಸಹ ಈ ಗ್ರಾಮದಲ್ಲಿ ಇದ್ದು, ಇಲ್ಲಿ ಸಹ ಸಾಕಷ್ಟು ವಿದ್ಯಾರ್ಥಿಗಳು ಸಂಸ್ಕೃತದ ಅಧ್ಯಾಯನ ನಡೆಸುತ್ತಿದ್ದಾರೆ. ಅಂಗಡಿಗಳಲ್ಲಿ ಸಹ ವ್ಯವಹಾರವನ್ನು ಸಂಸ್ಕೃತ ಭಾಷೆಯಲ್ಲೇ ಮಾಡುತ್ತಾರೆ.

ಮತ್ತೂರು ಶಿವಮೊಗ್ಗದಿಂದ ಕೇವಲ 4 ಕಿ.ಮೀ ದೂರದಲ್ಲಿದೆ.  ಇಲ್ಲಿನ ಜನರು ಸಂಸ್ಕೃತವನ್ನು ತಮ್ಮ ದಿನನಿತ್ಯದ ಸಂವಹನಕ್ಕಾಗಿ ಬಳಸುತ್ತಾರೆ. 5000 ಕ್ಕಿಂತ ಹೆಚ್ಚಿನ ಜನರನ್ನು ಹೊಂದಿರುವ ಈ ಗ್ರಾಮವು ಅರ್ಧಕ್ಕಿಂತ ಹೆಚ್ಚಿನ ಜನರು ಸಂಸ್ಕೃತವನ್ನು ತಮ್ಮ ದಿನನಿತ್ಯದ ಭಾಷೆಯಾಗಿಸಿಕೊಂಡಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button