ದೂರ ತೀರ ಯಾನವಿಂಗಡಿಸದ

ಬೆಂಗಳೂರಿನಿಂದ ಮಾಲ್ಡೀವ್ಸ್ ಗೆ ಹೊಸ ನೇರ ವಿಮಾನ ಮಾರ್ಗ

ಮಾಲ್ಡೀವ್ಸ್‌ನ (Maldives) ಪ್ರಮುಖ ವಿಮಾನಯಾನ ಸಂಸ್ಥೆ ಮಾಂಟಾ ಏರ್ (Manta Air), ಭಾರತದಿಂದ ಮಾಲ್ಡೀವ್ಸ್‌ಗೆ ನೇರ ವಿಮಾನಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು 2024ರಿಂದ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸುತ್ತದೆ. ಜನವರಿ 2024 ರಿಂದ ಬೆಂಗಳೂರಿನಿಂದ (Bangalore) ಧಾಲು ವಿಮಾನ ನಿಲ್ದಾಣದ ನೇರ ಮಾರ್ಗಗಳನ್ನು ಅನಾವರಣಗೊಳಿಸುತ್ತದೆ.

Maldives’ Manta Air To Operate Direct Flights Between Bengaluru

‘ ನಮ್ಮ ಕಂಪನಿಯ ಪಥದಲ್ಲಿ ಪ್ರಮುಖ ಕ್ಷಣವನ್ನು ಸೂಚಿಸುತ್ತದೆ. ನಾವು ಮಾಲ್ಡೀವ್ಸ್‌ನಲ್ಲಿ ಪ್ರಮುಖ ದೇಶೀಯ ಮತ್ತು ಸೀಪ್ಲೇನ್ ಕ್ಯಾರಿಯರ್ ನಿಂದ ಹಿಡಿದು ಅಂತರಾಷ್ಟ್ರೀಯ ಏರ್‍ಲೈನ್ ಆಪರೇಟರ್ ಗೆ ಪ್ರಗತಿ ಹೊಂದುತ್ತಿದ್ದೇವೆ. ಮಾಂಟಾ ಏರ್‍ನ ವಿಸ್ತರಣೆಯೊಂದಿಗೆ ಭಾರತದಿಂದ ಮಾಲ್ಡೀವ್ಸ್‌ಗೆ ಹೊಸ ನೇರ ವಿಮಾನ ಮಾರ್ಗ, ಭಾರತೀಯ ಪ್ರವಾಸಿಗರಿಂದ ಪ್ರಯಾಣದ ಆಸಕ್ತಿ ಮತ್ತು ಬುಕಿಂಗ್‍ನಲ್ಲಿ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಮಾಂಟಾ ಏರ್‍ನ ಡೆಪ್ಯೂಟಿ ಸಿಇಒ ಅಹ್ಮದ್ ಮೌಮೂನ್ ತಿಳಿಸಿದ್ದಾರೆ.

Maldives’ Manta Air To Operate Direct Flights Between Bengaluru

ನೀವು ಇದನ್ನು ಇಷ್ಟ ಪಡಬಹುದು:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಶುಭ ಸುದ್ದಿ

2024ರ ಜನವರಿಯಿಂದ ಬೆಂಗಳೂರು ಹಾಗೂ ಮಾಲ್ಡಿವ್ಸ್ ನಡುವೆ ಹೊಸ ನೇರ ವಿಮಾನ ಮಾರ್ಗ ಪ್ರಾರಂಭವಾಗಲಿದೆ. ವಿಮಾನಯಾನ ಸಂಸ್ಥೆಯು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್‌ನ ಧಾಲು ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳನ್ನು ನಿರ್ವಹಿಸುತ್ತದೆ.

ಈ ವಿಮಾನಗಳು ವಾರದಲ್ಲಿ ಮೂರು ದಿನಗಳು ಕಾರ್ಯನಿರ್ವಹಿಸಲಿದ್ದು, ಎಲ್ಲಾ ವಿಮಾನಗಳು ಬೆಳಿಗ್ಗೆ ಮಾಲ್ಡೀವ್ಸ್‌ಗೆ ಆಗಮಿಸುತ್ತವೆ ಮತ್ತು ಸಂಜೆ ತಡವಾಗಿ ಭಾರತಕ್ಕೆ ಹೊರಡುತ್ತವೆ ಎಂದು ತಿಳಿಸಿದ್ದಾರೆ.

Maldives’ Manta Air To Operate Direct Flights Between Bengaluru

ಪ್ರಯಾಣಿಕರು ಮಾಲೆಯಲ್ಲಿರುವ ಮುಖ್ಯ ವೇಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗುವ ತೊಂದರೆಗಳು ತಪ್ಪುತ್ತವೆ. ಜೊತೆಗೆ ಹೆಚ್ಚುವರಿ ವೆಚ್ಚವನ್ನು ತಪ್ಪಿಸಲು ಮತ್ತು ಅನೇಕ ಐಷಾರಾಮಿ ರೆಸಾರ್ಟ್‌ಗಳಿಗೆ ನೇರ ಪ್ರವೇಶವನ್ನು ಪಡೆಯಲು ಇದು ನೆರವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button