ದೂರ ತೀರ ಯಾನವಿಂಗಡಿಸದ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಶುಭ ಸುದ್ದಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಶುಭ ಸುದ್ದಿ ಸಿಕ್ಕಿದೆ. ಶೀಘ್ರದಲ್ಲೇ ಹೊಸ ಸೆಕ್ಯುರಿಟಿ ಸ್ಕ್ರೀನಿಂಗ್‌ (Security Screening) ಪ್ರಕ್ರಿಯೆಗೆ ಇಲ್ಲಿನ ಟರ್ಮಿನಲ್ 2 (T2)ಒಳಗಾಗಲಿದೆ.ಹಳೆಯ ತಪಾಸಣಾ ಕ್ರಮಕ್ಕೆ ವಿದಾಯ ಹೇಳಿ ,ಆ ಜಾಗಕ್ಕೆ ಹೊಸ ಪ್ರಕ್ರಿಯೆ ಆರಂಭ ಆಗಲಿದೆ. ಒಂದು ವೇಳೆ ಪ್ರಕ್ರಿಯೆ ಯಶಸ್ವಿಯಾದರೆ ವಿಮಾನ ಪ್ರಯಾಣಿಕರಿಗಂತೂ ಶುಭ ಸುದ್ದಿಯೇ ಸರಿ.

ಇದು ಪ್ರಯಾಣಿಕರ ಸಮಸ್ಯೆಯನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಇದರಿಂದ ಪ್ರಯಾಣಿಕರಿಗೆ ನೆರವಾಗಲಿದೆ. ಅಲ್ಲದೆ ಸಮಯದ ಉಳಿತಾಯ ಕೂಡ ಆಗಲಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ. ಒಮ್ಮೆ ಓದಿ

Kempegowda international airport

ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಹೊಸ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (CTX) ಯಂತ್ರಕ್ಕಾಗಿ ಟ್ರಯಲ್ ರನ್ ಅನ್ನು ಅರಂಭಿಸುವುದಾಗಿ ಹೇಳಿ ಕೊಂಡಿದೆ. ಈ ಯಂತ್ರವು ಸ್ವಯಂಚಾಲಿತ ಟ್ರೇ ಮರುಪಡೆಯುವಿಕೆ ವ್ಯವಸ್ಥೆ ಮತ್ತು ಫುಲ್‌ ಬಾಡಿ ಸ್ಕ್ಯಾನರ್‌ಗಳನ್ನು ಹೊಂದಿದೆ.

ಇದರ ಭಾಗವಾಗಿ ದೇಶೀಯ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲಾಗುತ್ತದೆ.. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಈ ಪ್ರಯೋಗ ಹೊಸ ದಾಖಲೆ ಕೂಡಾ ಮಾಡಲಿದೆ. ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (CTX) ಯಂತ್ರಕ್ಕಾಗಿ ಪ್ರಯಾಣಿಕರ ಪ್ರಯೋಗಗಳನ್ನು ನಡೆಸುವ ಭಾರತದ ಮೊದಲ ವಿಮಾನ ನಿಲ್ದಾಣವಾಗಿ ಕೆಐಎ ಹೆಗ್ಗಳಿಕೆ ಪಡೆಯಲಿದೆ.

ನೀವು ಇದನ್ನೂ ಓದಬಹುದು:ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ ಪ್ರವೇಶ ಘೋಷಿಸಿದ “ಮಲೇಷಿಯಾ”

Terminal 2

ಸಿಟಿಎಕ್ಸ್‌ ಯಂತ್ರದ ಅಳವಡಿಕೆಯಿಂದ ಭದ್ರತಾ ತಪಾಸಣೆಯ ಸಮಯದಲ್ಲಿ ಪ್ರಯಾಣಿಕರು ತಮ್ಮ ಹ್ಯಾಂಡ್‌ಬ್ಯಾಗ್‌ಗಳಿಂದ ಮೊಬೈಲ್ ಫೋನ್‌ಗಳು (Mobile phone)ಮತ್ತು ಲ್ಯಾಪ್‌ಟಾಪ್‌ಗಳಂತಹ (Laptop)ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದು ಟ್ರೇಗೆ (Try) ಇಡಬೇಕಂತಿಲ್ಲ. ಈ ತಂತ್ರಜ್ಞಾನವನ್ನು ಬಳಸುವ ಮೂಲಕ, ನಿರ್ವಾಹಕರು ವಿವಿಧ ಆಯಾಮಗಳಿಂದ ಬ್ಯಾಗ್‌ಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ, ಮರು-ಪರಿಶೀಲನೆಗಳು ಮತ್ತು ಭೌತಿಕ ತಪಾಸಣೆಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಸಮಯದ ಉಳಿತಾಯ ಕೂಡ ಆಗಲಿದೆ.

Bangalore

ಇದರಿಂದಾಗಿ, ಪ್ರಯಾಣಿಕರು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹೇರ್‌ಜೆಲ್‌ಗಳು, ಏರೋಸಾಲ್‌ಗಳನ್ನು ತಮ್ಮ ಹ್ಯಾಂಡ್‌ಬ್ಯಾಗ್‌ನಲ್ಲಿಯೇ (Hand bag)ಇಟ್ಟುಕೊಂಡು ಸ್ಕ್ರೀನಿಂಗ್‌ಗೆ ಹೋಗಬಹುದು. ಇದರಿಂದ ಪ್ರಯಾಣಿಕರಿಗೆ ಒಳಿತಾಗಲಿದ್ದು ,ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬರಲಿ ಅಂತ ವಿಮಾನ ಪ್ರಯಾಣಿಕರು ಕಾಯಿತ್ತಿದ್ದಾರೆ.

ಇದಲ್ಲದೆ, ಸಿಟಿಎಕ್ಸ್‌ ಯಂತ್ರದ ಪರಿಚಯವು ವಾಕ್-ಥ್ರೂ ಮೆಟಲ್ ಡಿಟೆಕ್ಟರ್ ಮೂಲಕ ಹಾದುಹೋಗುವ ನಂತರ ಪ್ರಯಾಣಿಕರನ್ನು ಚೆಕ್‌ ಮಾಡುವ ಅಭ್ಯಾಸವನ್ನು ತೆಗೆದುಹಾಕುತ್ತದೆ. ಸಿಟಿಎಕ್ಸ್‌ ಪ್ರೂಫ್ ಆಫ್ ಕಾನ್ಸೆಪ್ಟ್ (POC) ಪ್ರಸ್ತುತ T2 ನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button