ವಿಂಗಡಿಸದ

ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ ಪ್ರವೇಶ ಘೋಷಿಸಿದ “ಮಲೇಷಿಯಾ”

ಶ್ರೀಲಂಕಾ ಮತ್ತು ಥೈಲ್ಯಾಂಡ್‌ನ ವೀಸಾ-ಮುಕ್ತ ಪ್ರವೇಶ ಘೋಷಿಸಿದ ಬೆನ್ನಲ್ಲೇ ಈಗ ಮಲೇಶಿಯಾ ಕೂಡಾ ಡಿಸೆಂಬರ 1 ರಿಂದ 30 ದಿನಗಳವರೆಗೆ ಅಲ್ಪಾವಧಿ ವೀಸಾ-ಮುಕ್ತ ಪ್ರವೇಶವನ್ನು ಭಾರತ ಮತ್ತು ಚೀನಾ ದೇಶದ ಪ್ರವಾಸಿಗರಿಗೆ ಘೋಷಿಸಿದೆ.

ಉಜ್ವಲಾ.ವಿ.ಯು.

ಮಲೇಷಿಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾನುವಾರ ನಡೆದ ಪೀಪಲ್ಸ್ ಜಸ್ಟೀಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಈ ಘೋಷಣೆಯನ್ನು ಮಾಡಿದರು.

ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಂತೆ ಮಲೇಷಿಯಾ (Malaysia) ಕೂಡಾ ತನ್ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಿಂದ ಈ ಉಪಕ್ರಮವನ್ನು ಜಾರಿಗೊಳಿಸುತ್ತಿದೆ. ಹೊಸ ವೀಸಾ-ಮುಕ್ತ (Visa Free entry) ನಿಯಮದ ಅಡಿಯಲ್ಲಿ, ಭಾರತೀಯ ಪ್ರಯಾಣಿಕರು ವೀಸಾ ಇಲ್ಲದೆ 30 ದಿನಗಳವರೆಗೆ ಮಲೇಷಿಯಾದಲ್ಲಿ ಪ್ರವಾಸ ಮಾಡಬಹುದಾಗಿದೆ.

Malaysia to allow Visa free entry to Indian Citizens

ಕ್ರಿಮಿನಲ್ ದಾಖಲೆಗಳನ್ನು ಒದಗಿಸುವ ಮತ್ತು ಭಯೋತ್ಪಾದನೆಯ ಅಪಾಯವಿರುವ ಕಾರಣ ಭದ್ರತಾ ದೃಷ್ಟಿಯಿಂದ ಭದ್ರತಾ ತಪಾಸಣೆಗಳು ಮುಂದುವರಿಯಲಿವೆ.

ಮಲೇಷ್ಯಾಗೆ ಭಾರತ ಮತ್ತು ಚೀನಾ ಎರಡೂ ದೇಶಗಳೂ ಹೂಡಿಕೆಯ ದೊಡ್ಡ ಮಾರುಕಟ್ಟೆಗಳಾಗಿವೆ. ಈಗ, ಸರಳೀಕೃತ ಪ್ರವೇಶ ಪ್ರಕ್ರಿಯೆಯಿಂದ, ಪ್ರವಾಸಿಗರು ಏಷ್ಯಾದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾದ ಮಲೇಷ್ಯಾಕ್ಕೆ ತಡೆರಹಿತ ಪ್ರಯಾಣವನ್ನು ಅನುಭವಿಸಬಹುದು.

ಪ್ರಸ್ತುತ, ಭಾರತೀಯರಿಗೆ ಮಲೇಷಿಯಾದ ಇ-ವೀಸಾ ಸೌಲಭ್ಯವನ್ನು ನೀಡುತ್ತಿದೆ. ಪ್ರತಿ ವ್ಯಕ್ತಿಗೆ INR 3,799 ವೆಚ್ಚವಾಗುತ್ತದೆ. ಆದರೆ ಈಗ ವೀಸಾ-ಮುಕ್ತ ಪ್ರವೇಶವನ್ನು ಅನುಮೋದಿಸುವುದರಿಂದ ಇನ್ನಷ್ಟು ಕಡಿಮೆ ಶುಲ್ಕದಲ್ಲಿ ಪ್ರವಾಸಿಗರು ಪ್ರವಾಸ ಮಾಡಬಹುದು.

ಮಲೇಷಿಯಾ ಏರ್‌ಲೈನ್ಸ್, ಬಾಟಿಕ್ ಏರ್, ಏರ್‌ಏಷ್ಯಾ ಮತ್ತು ಇಂಡಿಗೋ ಮೂಲಕ ಭಾರತ ಮತ್ತು ಮಲೇಷ್ಯಾ ನಡುವೆ ವಾರಕ್ಕೆ 158 ವಿಮಾನಗಳನ್ನು ನೀಡಲಾಗುತ್ತದೆ ಎಂದು ಮಲೇಷ್ಯಾ ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಏಜೆನ್ಸಿ ತಿಳಿಸಿದೆ.

2019 ರ ಕೋರೋನಾ ಸಂದರ್ಭದಲ್ಲಿ, ಮಲೇಶಿಯಾಗೆ ಚೀನಾದಿಂದ 1.5 ಮಿಲಿಯನ್ ಮತ್ತು ಭಾರತದಿಂದ 354,486 ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಇದಕ್ಕೆ ಹೋಲಿಸಿದರೆ, ಮಲೇಷ್ಯಾ ಈ ವರ್ಷದ ಜನವರಿ ಮತ್ತು ಜೂನ್ ನಡುವೆ 9.16 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿದೆ. ಚೀನಾದಿಂದ 498,540 ಮತ್ತು ಭಾರತದಿಂದ 283,885 ಪ್ರವಾಸಿಗರು ಆಗಮಿಸಿದ್ದಾರೆ.

ಶ್ರೀಲಂಕಾ ಮತ್ತು ಥೈಲ್ಯಾಂಡ್‌ ದೇಶಗಳು ಈಗಾಗಲೇ ಭಾರತೀಯರಿಗೆ 2024 ರವರೆಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿವೆ. ವಿಯೆಟ್ನಾಂ ಕೂಡಾ ಘೋಷಿಸುವ ನಿರೀಕ್ಷೆಯಲ್ಲಿದೆ. ಇದರ ನಡುವೆ ಮಲೇಷಿಯಾ ಕೂಡಾ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸಿದ್ದು, ಭಾರತೀಯ ಪ್ರಯಾಣಿಕರು ಪ್ರಸ್ತುತ 30 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರವೇಶಿಸಬಹುದಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button