ವಿಂಗಡಿಸದ

ಬೆಂಗಳೂರು ಕಂಬಳ ಸಂಪನ್ನ; ಗೆದ್ದು ಬೀಗಿದರಿವರು,

ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆದ ಬೆಂಗಳೂರು ಕಂಬಳ ನಿನ್ನೆ ರಾತ್ರಿ ಸಂಪನ್ನಾಗೊಂಡಿದೆ. ಅರಮನೆ ಮೈದಾನದಲ್ಲಿ ನಡೆದ ಕಂಬಳದಲ್ಲಿ ಎಲ್ಲರನ್ನೂ ಹಿಂದಿಕ್ಕಿ ,ಗುರಿ ಮುಟ್ಟುವವರು ಯಾರು ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲಿಯೂ ಇತ್ತು. ಸದ್ಯ ಅದಕ್ಕೂ ತೆರೆ ಬಿದ್ದಿದ್ದು. ಬೆಂಗಳೂರು ಕಂಬಳದಲ್ಲಿ ವಿಭಾಗವಾರು ಗೆದ್ದವರು ಯಾರು ಎನ್ನುವ ಫಲಿತಾಂಶ ಇಲ್ಲಿದೆ.

ನವೆಂಬರ್‌ 25ರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ನವೆಂಬರ್‌ 26ರ ರಾತ್ರಿ 2 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ (Bangalore Kambala Result) ಎರಡೂ ದಿನಗಳಲ್ಲಿ ಅರಮನೆ ಮೈದಾನದಲ್ಲಿ (Bangalore Palace Grounds) ಕಾಲಿಡಲೂ ಜಾಗವಿಲ್ಲದಂತೆ ಕಂಬಳ ಅಭಿಮಾನಿಗಳು ನೆರೆದಿದ್ದು ಈ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.

ಈ ಕೂಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದವರಿಗೆ 16 ಪವನ್‌ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ದ್ವಿತೀಯ ಪ್ರಶಸ್ತಿ ಗೆದ್ದವರಿಗೆ 8 ಪವನ್‌ ಚಿನ್ನ ಮತ್ತು 50 ಸಾವಿರ ರೂ. ಬಹುಮಾನ ನೀಡಲಾಗಿದೆ. ಮೂರನೇ ಬಹುಮಾನವಾಗಿ 4 ಪವನ್‌ ಚಿನ್ನ ಮತ್ತು 25 ಸಾವಿರ ರೂ. ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.

ಬೆಂಗಳೂರು ಕಂಬಳದ ಫಲಿತಾಂಶ:

ಹಗ್ಗ ಹಿರಿಯ ವಿಭಾಗ

ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು ಪ್ರಥಮ ಬಹುಮಾನ ಪಡೆದರೆ

ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ. ಶ್ರೀಕಾಂತ್‌ ಭಟ್‌ ಅವರ ಕೋಣಗಳನ್ನು ಬಂಬ್ರಾಣ ಬೈಲು ವಂದಿತ್‌ ಶೆಟ್ಟಿ ಅವರು ಓಡಿಸಿದ್ದಾರೆ. ಈ ಕೋಣಗಳು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿವೆ.

Nandalike

ಕನೆಹಲಗೆ ವಿಭಾಗ

ಬೊಳ್ಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ ಭಟ್ “ಬಿ” ಕೋಣ ಪ್ರಥಮ ಬಹುಮಾನ ಪಡೆದಿದ್ದು, 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ. ಹಲಗೆ ಮುಟ್ಟಿದವರು ಉಲ್ಲೂರು ಕಂದಾವರ ಗಣೇಶ್.

ಅಡ್ಡ ಹಲಗೆ ವಿಭಾಗ

ಪ್ರಥಮ: ಎಸ್.ಎಮ್.ಎಸ್ ಫ್ಯಾಮಿಲಿ ಬೆಂಗಳೂರುಹಲಗೆ ಮುಟ್ಟಿದವರು: ಭಟ್ಕಳ ಹರೀಶ್

.ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ನೀವು ಇದನ್ನು ಇಷ್ಟ ಪಡಬಹುದು:ಬೆಂಗಳೂರು ಕಂಬಳದಲ್ಲಿರಲಿದೆ ಈ ವಿಶೇಷತೆಗಳು

ಹಗ್ಗ ಕಿರಿಯ ವಿಭಾಗ

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯನ್

ನೇಗಿಲು ಹಿರಿಯ ವಿಭಾಗ

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿಓಡಿಸಿದವರು: ಪಟ್ಟೆ ಗುರು ಚರಣ್

ಕಿರಿಯ ವಿಭಾಗ

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ

ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟ

ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button