ಭಾರತೀಯ ಪ್ರಯಾಣಿಕರಿಗೆ ವೀಸಾ-ಮುಕ್ತ ಪ್ರವೇಶ ಘೋಷಿಸುವ ಸಾಧ್ಯತೆಯಲ್ಲಿ “ವಿಯೆಟ್ನಾಂ”:
ಥೈಲ್ಯಾಂಡ್ ಮತ್ತು ಶ್ರೀಲಂಕಾದ ನಂತರ ಈಗ ವಿಯೆಟ್ನಾಂ ಕೂಡಾ ತನ್ನ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ಭಾರತೀಯ ಪ್ರವಾಸಿಗರಿಗೆ ವೀಸಾ-ಮುಕ್ತ ಪ್ರವೇಶವನ್ನು ಘೋಷಿಸುವ ಸಾಧ್ಯತೆಯಲ್ಲಿದೆ.
● ಉಜ್ವಲಾ ವಿ.ಯು
ವಿಯೆಟ್ನಾಂನ ಸಂಸ್ಕೃತಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವರಾದ ನ್ಗುಯ್ನ್ ವ್ಯಾನ್ ಜಂಗ್ ಅವರು ಚೀನಾ ಮತ್ತು ಭಾರತ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಅಲ್ಪಾವಧಿಯ ವೀಸಾ ಮನ್ನಾ ಮಾಡಲು ಒತ್ತಾಯಿಸುತ್ತಿದ್ದಾರೆ. ಈ ಉಪಕ್ರಮವು COVID-19 ಸಾಂಕ್ರಾಮಿಕದಿಂದ ಆದಂತಹ ವ್ಯತಿರಿಕ್ತ ಪರಿಣಾಮದಿಂದ ಚೇತರಿಸಿಕೊಳ್ಳಲು ಮತ್ತು ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಅಗತ್ಯವಾದ ಉತ್ತೇಜನವನ್ನು ಒದಗಿಸುತ್ತದೆ.
ಪ್ರಸ್ತುತ, ಫ್ರಾನ್ಸ್, ಜರ್ಮನಿ, ಇಟಲಿ, ಸ್ವೀಡನ್, ಸ್ಪೇನ್, ಡೆನ್ಮಾರ್ಕ್ ಮತ್ತು ಫಿನ್‌ಲ್ಯಾಂಡ್ ಸೇರಿದಂತೆ ವಿವಿಧ ಯುರೋಪಿಯನ್ ರಾಷ್ಟ್ರಗಳ ಪ್ರವಾಸಿಗರಿಗೆ ಈಗಾಗಲೇ ವಿಯೆಟ್ನಾಂ ವೀಸಾ ಮುಕ್ತ ಪ್ರವೇಶದ ಪ್ರಯೋಜನವನ್ನು ನೀಡುತ್ತಿದೆ. ಭಾರತೀಯ ಪ್ರವಾಸಿಗರಿಗೂ ಈ ಪ್ರಯೋಜನವನ್ನು ವಿಸ್ತರಿಸುವ ಇತ್ತೀಚಿನ ಯೋಚನೆಯಿಂದಾಗಿ ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಕುರಿತು ವಿಯೆಟ್ನಾಂ ಕೂಡಾ ಅಂಗೀಕಾರ ಸೂಚಿಸಿದಂತೆ ಕಂಡುಬರುತ್ತಿದೆ.
ನೀವು ಇದನ್ನೂ ಇಷ್ಟಪಡಬಹುದು: ಭಾರತ ಸೇರಿದಂತೆ 7 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ
2022 ರ ಪ್ರವಾಸೋದ್ಯಮ ಬೆಳವಣಿಗೆಗೆ ಹೋಲಿಸಿದರೆ 2023 ರ 10 ತಿಂಗಳಿನಲ್ಲಿ 10 ಮಿಲಿಯನ್ ಅಂತರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಮೂಲಕ 4.6 ರಷ್ಟು ಹೆಚ್ಚಿನ ಅಭಿವೃದ್ಧಿ ವಿಯೆಟ್ನಾಂನ ಪ್ರವಾಸೋದ್ಯಮ ಕಂಡಿದೆ.
ಫು ಕ್ವೋಕ್ ಐಲ್ಯಾಂಡ್, ನ್ಹಾ ಟ್ರಾಂಗ್, ಡಾ ನಾಂಗ್, ಹಾ ಲಾಂಗ್ ಬೇ ಮತ್ತು ಹೋಯಿ ಆನ್‌ನಂತಹ ಜನಪ್ರಿಯ ವಿಯೆಟ್ನಾಮೀಸ್ ತಾಣಗಳು ಭಾರತೀಯ ಪ್ರವಾಸಿಗರು ಅತಿ ಹೆಚ್ಚು ಭೇಟಿ ನೀಡುವ ತಾಣಗಳಾಗಿವೆ.
ಇದಲ್ಲದೇ, ಪ್ರಯಾಣಿಕರಿಗೆ ಅನುಕೂಲವಾಗುವಂತೆ, ವಿಯೆಟ್ನಾಂ ಪ್ರಸ್ತುತ ವರ್ಷದ ಆಗಸ್ಟ್‌ನಿಂದ ಎಲ್ಲಾ ದೇಶಗಳ ವ್ಯಕ್ತಿಗಳಿಗೆ ಇ-ವೀಸಾಗಳ ವಿತರಣೆಯನ್ನು ಪ್ರಾರಂಭಿಸಿದೆ. ಈ ಇ-ವೀಸಾಗಳು 90-ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ. ಈ ಮೂಲಕ ವಿಯೆಟ್ನಾಂ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತವೆ.
ವಿಯೆಟ್ನಾಂ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೆ, ಅದು ಈಗಾಗಲೇ ಇದೇ ರೀತಿಯ ಕ್ರಮಗಳನ್ನು ಜಾರಿಗೆ ತಂದಿರುವ ಶ್ರೀಲಂಕಾ ಮತ್ತು ಥೈಲ್ಯಾಂಡ್ ನ ಪಟ್ಟಿಗೆ ಸೇರುತ್ತದೆ. ಹಾಗೂ ಭಾರತೀಯ ಪ್ರವಾಸಿಗರಿಗೆ ವೀಸಾ ಇಲ್ಲದೇ ಪ್ರವಾಸ ಮಾಡಬಹುದಾದ ದೇಶಗಳ ಪಟ್ಟಿಯಲ್ಲಿ ವಿಯೆಟ್ನಾಂನ ಕೂಡಾ ಸೇರುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.