ಬೆಂಗಳೂರು ಕಂಬಳಕ್ಕೆ ಹೋಗುವವರು ಈ ಅಂಶಗಳನ್ನು ಗಮನಿಸಿ.
ಬೆಂಗಳೂರಿನಲ್ಲಿ (Bangalore ) ಕರಾವಳಿ ಭಾಗದ ಲಕ್ಷಾಂತರ ಮಂದಿ ನೆಲೆಸಿದ್ದಾರೆ. ಜೊತೆಗೆ ಕಾಂತಾರ ( kantara ) ಬಂದ ಬಳಿಕ ಬೇರೆ ಭಾಗದ ಜನರಿಗೂ ಕೂಡ ಕಂಬಳ ಬಗ್ಗೆ ಆಸಕ್ತಿ ಹೆಚ್ಚುತ್ತಲೇ ಇದೆ. ಹೀಗಾಗಿ ಕಂಬಳಕ್ಕೆ ಹೆಚ್ಚಿನ ಸಂಖ್ಯೆ ಜನ ಸೇರುವ ನಿರೀಕ್ಷೆಯಿದ್ದು ಕಂಬಳ ಆಯೋಜಕರು ಸರ್ವ ರೀತಿಯಲ್ಲಿಯೂ ತಯಾರಿ ಮಾಡಿಕೊಂಡಿದ್ದಾರೆ. ನೀವು ಕೂಡ ಬೆಂಗಳೂರು ಕಂಬಳಕ್ಕೆ ಹೊರಟಿದ್ದೀರಿ ಅಂತಾದ್ರೆ ಈ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಿ.
ಎರಡು ದಿನದಲ್ಲಿ ಸೇರಿ ಸುಮಾರು 7 ರಿಂ ಕೂದ 8 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು ಸಂಚಾರ ದಟ್ಟಣೆ ಆಗಬಾರದು ಎನ್ನುವ ಕಾರಣಕ್ಕೆ ಸಂಚಾರಿ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು
ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್.
ಹೆಬ್ಬಾಳ (Hebbal )ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.
ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ರಲ್ಲಿ ಪ್ರವೇಶ.ಕ್ಯಾಬ್ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶ.
ಗೇಟ್ ನಂಬರ್ 3ರ ಮೂಲಕ ಕ್ಯಾಬ್ಗಳಿಗೆ ಎಕ್ಸಿಟ್ಗೆ ಸೂಚನೆ ನೀಡಲಾಗಿದೆ.
ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.
ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್ನಲ್ಲಿ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.
ನೀವು ಇದನ್ನು ಇಷ್ಟ ಪಡಬಹುದು:ಬೆಂಗಳೂರು ಕಂಬಳದಲ್ಲಿರಲಿದೆ ಈ ವಿಶೇಷತೆಗಳು
ವಿವಿಐಪಿ ಎಂಟ್ರಿ ಬೇರೆ, ಸಾರ್ವಜನಿಕರಿಗೆ ಬೇರೆ
ಅರಮನೆ ಮೈದಾನದ (Palace ground)ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ನೀಡಲಾಗುತ್ತಿದೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಇರಲಿದೆ. ವಿವಿಐಪಿಗಳಳಿಗೆ ಫನ್ ವರ್ಲ್ಡ್ ಕಡೆಯಿಂದ ಪ್ರವೇಶ ಮಾಡಲು ಅವಕಾಶವಿದೆ.
ಸ್ಪರ್ಧೆ ಯಾವ ವಿಭಾಗದಲ್ಲಿ ನಡೆಯಲಿದೆ?
ನೇಗಿಲು, ಹಗ್ಗ ಹಾಗೂ ಹಲಗೆ
ಕಣೆ ಹಲಗೆ – ನಿಶಾನೆಗೆ ನೀರು ಚಿಮ್ಮಿಸುವ ಸ್ಪರ್ಧೆ. ಈ ವಿಭಾಗದಲ್ಲಿ ಟ್ರ್ಯಾಕ್ ನಲ್ಲಿ ಒಂದು ಜೋಡಿ ಕೋಣ ಓಡುತ್ತವೆ. ಏಳರಿಂದ ಎಂಟು ಅಡಿ ಇರುವ ನಿಶಾನೆಗೆ ನೀರನ್ನು ಚಿಮ್ಮುಸುವ ಕೋಣಗಳು ಗೆಲುವು ಸಾಧಿಸುತ್ತವೆ.ಹಗ್ಗ ಹಿರಿಯ ಹಾಗೂ ಹಗ್ಗ ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತವೆ. ಹಗ್ಗ ಹಿರಿಯ ಅಂದರೆ ಆರು ಹಲ್ಲುಗಳಿಂತ ಹಿರಿಯ ಕೋಣ , ಹಗ್ಗ ಕಿರಿಯ ಅಂದರೆ ಆರು ಹಲ್ಲುಗಳು ಹಾಗೂ ಅದಕ್ಕಿಂತ ಕಡಿಮೆ ಹಲ್ಲುಗಳು ಇರುವ ಕೋಣ. ನೇಗಿಲು ಹಿರಿಯ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಜೊತೆಗೆ ಅಡ್ಡ ಹಲಗೆ ಕನೆ ಹಲಗೆ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಎಷ್ಟು ಹೊತ್ತಿಗೆ ,ಯಾವ ಕಾರ್ಯಕ್ರಮ..?
ಶನಿವಾರ ಕಂಬಳ ಕರೆಗೆ ಚಾಲನೆ ನೀಡುವ ಮೂಲಕ ಕಂಬಳಕ್ಕೆ ಕೂಡ ಆರಂಭ ಸಿಗಲಿದೆ.
ಬೆಳಗ್ಗೆ 10.30ರಿಂದಲೇ ಕೋಣಗಳ ಓಟ ಶುರುವಾಗಲಿದೆ. ಆರಂಭದಲ್ಲಿ ಹಗ್ಗ ಮತ್ತು ನೇಗಿಲಿನ ಕಿರಿಯ ವಿಭಾಗದ ಕೋಣಗಳ ಒಂಟಿ ಓಟವಿರುತ್ತದೆ. ಈ ಕೋಣಗಳು 155 ಮೀಟರ್ ಓಡಲು ತೆಗೆದುಕೊಳ್ಳುವ ಸಮಯವನ್ನು ನೋಟ್ ಮಾಡಲಾಗುತ್ತದೆ. ಇದು ಅವುಗಳ ನಡುವೆ ಓಟದ ಸ್ಪರ್ಧೆಯನ್ನು ಆಯೋಜಿಸಲು.
ನ.25 ರ ಬೆಳಿಗ್ಗೆ 10.30 ಯಿಂದ ಆರಂಭವಾಗುವ ಕಂಬಳ ಹೊನಲು ಬೆಳಕಿನಲ್ಲಿ ಕೋಣಗಳ ಓಟದ ಜೊತೆಗೆ ಸಾಗಿ ನವೆಂಬರ್ 26 ರ ಸಂಜೆಗೆ ಅಂತ್ಯವಾಗಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.