ದೂರ ತೀರ ಯಾನವಿಂಗಡಿಸದ

ಹುಬ್ಬಳ್ಳಿ – ಮುಂಬೈಗೆ ವಿಮಾನ ಸೇವೆ ಪುನರಾರಂಭ.

ಹುಬ್ಬಳ್ಳಿ ( Hubballi) ಮತ್ತು ಮುಂಬೈ( Mumbai) ನಡುವಿನ ನೇರ ವಿಮಾನ ಸೇವೆಯು ಮಾರ್ಚ್ ನಲ್ಲಿ( March) ಸ್ಥಗಿತಗೊಂಡಿದ್ದು,ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯ ಮೇರೆಗೆ ಈಗ ಪುನ

ಜುಲೈ ( July )15 ರಿಂದ ಹುಬ್ಬಳ್ಳಿ – ಮುಂಬೈಗೆ ನೇರ ವಿಮಾನ ಸೇವೆ ಆರಂಭವಾಗಲಿದ್ದು ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Indigo Hubballi to Mumbai

ಇಂಡಿಗೋ ಸಂಸ್ಥೆ ಜುಲೈ(July) 15ರಿಂದಲೇ ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಯನ್ನು ಪುನ ಆರಂಭಿಸಲಿದ್ದು,ವಿಮಾನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಹಾಗೆಯೇ ಬುಕ್ಕಿಂಗ್ ಸಹ ಆರಂಭವಾಗಿದೆ.

ವಿಮಾನದ ವೇಳಾಪಟ್ಟಿ

ಈ ಹಿಂದೆ ಇದ್ದಂತೆ ಇಂಡಿಗೋ( Indigo) ಹುಬ್ಬಳ್ಳಿ-ಮುಂಬೈ ನಡುವೆ 186 ಸೀಟುಗಳ ಎ320 ಮಾದರಿ ವಿಮಾನದ ಹಾರಾಟ ನಡೆಸಲಿದೆ.ವಿಮಾನ 6ಇ 736 ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬೈನಿಂದ( Chhatrapati Shivaji international Airport Mumbai)

ಮಧ್ಯಾಹ್ನ 3 ಗಂಟೆಗೆ ಹೊರಟು ಹುಬ್ಬಳ್ಳಿಗೆ( Hubballi) ಸಂಜೆ 4.10ಕ್ಕೆ ತಲುಪುತ್ತದೆ. ಹಾಗೆಯೇ ಪ್ರತಿದಿನ ಈ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.

Hubli Airport

ವಿಮಾನ 6ಇ 737 ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ( Hubballi Airport )ಸಂಜೆ 4.40ಕ್ಕೆ ಹೊರಟು,ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈಗೆ( Mumbai )5.50ಕ್ಕೆ ತಲುಪಲಿದೆ. ಇಂಡಿಗೋ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

ಧಾರವಾಡ( Dharwad) ಸಂಸದ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಹ್ಲಾದ್ ಜೋಶಿ ( Pralhad Joshi)ಇಂಡಿಗೋ ಸಂಸ್ಥೆಯ ಜೊತೆಗೆ ನಿರಂತರವಾಗಿ ವಿಮಾನ ಸೇವೆ ಪುನರ್ ಆರಂಭಿಸಲು ಮಾತುಕತೆ ನಡೆಸುತ್ತಿದ್ದರು.

ಇಂಡಿಗೋ ನಿರ್ವಹಣಾ ಸಮಿತಿಯು ಪ್ರಸ್ತಾವನೆಯ ಮೇರೆಗೆ ಮುಂಬೈ-ಹುಬ್ಬಳ್ಳಿ- ಮುಂಬೈ ನಡುವಿನ ತಮ್ಮ ವಿಮಾನ ಸಂಚಾರದ ಸೇವೆಯನ್ನು ಪುನರಾರಂಭಿಸುತ್ತಿದೆ. ಜುಲೈ 15 ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ.

ಹುಬ್ಬಳ್ಳಿ-ಮುಂಬೈ( Hubballi to Mumbai )ನಡುವಿನ ನೇರ ವಿಮಾನ ಸೇವೆಗೆ ಉತ್ತಮ ಸ್ಪಂದನೆ ಇತ್ತು.

ಆದರೆ ಮುಂಬೈ ವಿಮಾನ (Mumbai) ನಿಲ್ದಾಣದಲ್ಲಿ ತಾಂತ್ರಿಕ ತೊಂದರೆ ಇಂದಾಗಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಆದರೆ ಈಗ ಹುಬ್ಬಳ್ಳಿ ಇಂದ ಮುಂಬೈಗೆ ವಿಮಾನ ಸೇವೆ ಪುನಃ ಆರಂಭವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸಕ್ಕೆ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ ( ​​Kannada.Travel ) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button