ಕಾಡಿನ ಕತೆಗಳುವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಕಾಜಿರಂಗ ಅಭಯಾರಣ್ಯದಲ್ಲಿ ಕಂಡು ಬಂತು ಶುಭ್ರ ಜಿಂಕೆ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವು ಅಸ್ಸಾಂನ ಹೆಮ್ಮೆಯ ತಾಣಗಳಲ್ಲಿ ಒಂದಾಗಿದೆ. ಇದು ಅಳಿವಿನಂಚಿನಲ್ಲಿರುವ ಏಕ ಕೊಂಬಿನ ಘೇಂಡಾಮೃಗಗಳ ಆಶ್ರಯ ತಾಣವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈಗ ಇದೇ ಉದ್ಯಾನವನದಲ್ಲಿ ಅಪರೂಪದ ಶ್ವೇತ ವರ್ಣದ ಜಿಂಕೆ ಒಂದು ಕಂಡು ಬಂದಿದೆ.

  • ಆದಿತ್ಯ ಯಲಿಗಾರ

ಅಸ್ಸಾಂ ನಾಡಿನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ, ಅಪರೂಪದ ಬಿಳಿ ಜಿಂಕೆಯೊಂದು ( White Hog)  ಇತ್ತೀಚೆಗೆ ಪತ್ತೆಯಾಗಿದೆ. ಈ ಸುಂದರ ಮತ್ತು ಭವ್ಯ ಪ್ರಾಣಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ವನ್ಯಜೀವಿ ಉತ್ಸಾಹಿಗಳು ಮತ್ತು ಪರಿಸರವಾದಿಗಳ ಗಮನ ಮತ್ತು ಕುತೂಹಲವನ್ನ  ಕೆರಳಿಸಿದೆ.

ಜಯಂತ ಕುಮಾರ್ ಶರ್ಮಾ, ಪ್ರಕೃತಿ ಮತ್ತು ವನ್ಯಜೀವಿ  ಛಾಯಾಗ್ರಾಹಕ, ಬುರಪಹಾರ್ ಶ್ರೇಣಿಯಲ್ಲಿ ಬಿಳಿ ಜಿಂಕೆಗಳ  ಚಿತ್ರ ತೆಗೆದ ನಂತರ ಆ ಪ್ರದೇಶದ ಕೆಲವು ಸ್ಥಳೀಯರು ಅಪರೂಪದ ಪ್ರಾಣಿ ಇರುವ ಸ್ಥಳದ ಬಗ್ಗೆ ಛಾಯಾಗ್ರಾಹಕರಿಗೆ ತಿಳಿಸಿದರು.

ಪಿಟಿಐ (The Press Trust of India)ವರದಿಯ ಪ್ರಕಾರ, ನಾಗಾನ್‌ನ ಕಲಿಯಾಬೋರ್ ಉಪವಿಭಾಗದಲ್ಲಿರುವ ಅಮ್ಗುರಿ ಟೀ ಎಸ್ಟೇಟ್‌ನ 12 ಸಾಲಿನ ಪ್ರದೇಶದಲ್ಲಿ ಈ ಪ್ರಾಣಿ ಕಂಡು ಬಂದಿದೆ.

ನೀವುಇದನ್ನುಇಷ್ಟಪಡಬಹುದು: ಸಾವಿರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಬೆರಗೊಳಿಸುವ ಕತೆಗಳು: ವಿಶ್ವ ವಲಸೆ ಹಕ್ಕಿಗಳ ದಿನ ವಿಶೇಷ

ಅಭಯಾರಣ್ಯದಲ್ಲೊಂದು ಬಿಳಿ ಜಿಂಕೆ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಕೆಎನ್‌ಪಿ (Kaziranga National Park) ವಿಭಾಗೀಯ ಅರಣ್ಯ ಅಧಿಕಾರಿ ಡಿಎಫ್‌ಒ (Divisional Forest Officer) ರಮೇಶ್ ಗೊಗೊಯ್ ಅವರ ಪ್ರಕಾರ, ಈ ನಿರ್ದಿಷ್ಟ ಬಿಳಿ ಜಿಂಕೆಯನ್ನು ಮೊದಲ ಬಾರಿಗೆ ನೋಡಲಾಯಿತು, ಮತ್ತು ಇದು ನಿಯತಕಾಲಿಕವಾಗಿ ಉದ್ಯಾನದಿಂದ ಹೊರಬಂದು ಇತರ ಕಂದು ಜಿಂಕೆಗಳೊಂದಿಗೆ ಆಹಾರಕ್ಕಾಗಿ ಜೊತೆಯಾಗುತ್ತದ್ದೆ.

ಬಿಳಿ ಬಣ್ಣ ಸಂಪೂರ್ಣ ಅನುವಂಶಿಕ

ಜಿಂಕೆಗಳ ಬಿಳಿ ಬಣ್ಣವು ಸಂಪೂರ್ಣವಾಗಿ ಆನುವಂಶಿಕವಾಗಿದ್ದೂ, ಇದು ಜೀನ್ ರೂಪಾಂತರದಿಂದ ಘಟಿಸುತ್ತದೆ ಮತ್ತು ಇದು ಜಿಂಕೆ ಕುಟುಂಬದ ಪ್ರತ್ಯೇಕ ಜಾತಿಯಲ್ಲ ಎಂದು ಡಿಎಫ್‌ಒ ತಿಳಿಸಿದೆ. ಗೊಗೊಯಿ ಪ್ರಕಾರ, ಕಾಜಿರಂಗಾದ 40,000 ಹಾಗ್ ಜಿಂಕೆಗಳಲ್ಲಿ ಅಂತಹ ಒಂದು ಅಥವಾ ಎರಡು ಅಪರೂಪದ ಬಿಳಿ ಹಾಗ್ ಜಿಂಕೆಗಳನ್ನು ಗುರುತಿಸಬಹುದು.

ಏಕ-ಕೊಂಬಿನ ಖಡ್ಗಮೃಗದ ನೆಲೆ ಕಾಜಿರಂಗಾ

ಕಾಜಿರಂಗ ರಾಷ್ಟ್ರೀಯ ಉದ್ಯಾನವು ವಿವಿಧ ಕಾಡು ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ, ಈ ಜಿಂಕೆಯನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಉದ್ಯಾನದಲ್ಲಿ ಕಂಡುಬರುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಪೈಕಿ, ರಾಷ್ಟ್ರೀಯ ಉದ್ಯಾನವನವು ಅಳಿವಿನಂಚಿನಲ್ಲಿರುವ ಏಕ-ಕೊಂಬಿನ ಖಡ್ಗಮೃಗದ (ಘೆಂಡಾಮೃಗ) ಪ್ರಭೇದಗಳಿಗೆ ನೆಲೆಯಾಗಿದೆ ಹೀಗಾಗಿ ಈ ಉದ್ಯಾನವನ  ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ, ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರು ಅಪರೂಪದ ಏಕ ಕೊಂಬಿನ ಘೆಂಡಾಮೃಗವನ್ನ ಕಾಣಲುಇಲ್ಲಿಗೆ ಸೇರುತ್ತಾರೆ.

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಪ್ರತಿವರ್ಷ ಮಾಡುವಂತೆ ಮುಂಬರುವ ಪ್ರವಾಹಕ್ಕೆ ಸಿದ್ಧತೆ ನಡೆಸುತ್ತಿದೆ. ಇದು ಜೂನ್ ಮಧ್ಯಭಾಗ ಮಾತ್ರ ಮತ್ತು ಪೂರ್ಣ ಪ್ರಮಾಣದ ಪ್ರವಾಹವನ್ನು  ಯಾವುದೇ ಗಳಿಗೆಯಲ್ಲಿ  ನಿರೀಕ್ಷಿಸಲಾಗಿದೆ, ಹೀಗಾಗಿ ಇದನ್ನ ಎದುರಿಸಲು ಉದ್ಯಾನವನದ ಅಧಿಕಾರಿಗಳು  ಸಕಲ ಸಿದ್ಧತೆಯನ್ನು ನಡೆಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನಗಳೊಳಗಿನ ಕೆಲವು ತಗ್ಗು ಪ್ರದೇಶಗಳು ಈಗಾಗಲೇ ಮುಳುಗಿವೆ, ಮತ್ತು ಕಾಡಿನ ಚಾರಣ ಸ್ಥಳಗಳು ಸಹ ಪ್ರವಾಹಕ್ಕೆ ಸಿಲುಕಿವೆ. ಆದ ಕಾರಣ ಪ್ರಾಣಿಗಳನ್ನ ವಾರದ 24 ಗಂಟೆಯೂ ಸಂರಕ್ಷಿಸುವ ಹೊಣೆ ಇಲ್ಲಿನ ಅರಣ್ಯ ಅಧಿಕಾರಿಗಳ ಮೇಲಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button