ಕಾಡಿನ ಕತೆಗಳುದೂರ ತೀರ ಯಾನವಿಂಗಡಿಸದವಿಸ್ಮಯ ವಿಶ್ವ

ಸಾವಿರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಬೆರಗೊಳಿಸುವ ಕತೆಗಳು: ವಿಶ್ವ ವಲಸೆ ಹಕ್ಕಿಗಳ ದಿನ ವಿಶೇಷ

#ವಿಶ್ವ ವಲಸೆ ಹಕ್ಕಿಗಳ ದಿನ ವಿಶೇಷ

ಹಕ್ಕಿಗಳ ಪ್ರಪಂಚ ಬಲು ವಿಶಿಷ್ಟ. ಇನ್ನು ವಲಸೆ ಹಕ್ಕಿಗಳ ಜಗತ್ತಂತೂ ಊಹಿಸಲು ಅಸಾಧ್ಯ. ನಾವು ಇದ್ದಲ್ಲೇ ಇದ್ದು ಜೀವನ ಸಾಗಿಸುತ್ತಿರುವ ವೇಳೆಯಲ್ಲಿ ವಲಸೆ ಹಕ್ಕಿಗಳು ಸಾವಿರಾರು ಕಿಮೀ ಆಕಾಶದಲ್ಲಿ ಕ್ರಮಿಸಿರುತ್ತವೆ. ಇವತ್ತು ವಿಶ್ವ ವಲಸೆ ಹಕ್ಕಿಗಳ ದಿನ. ಈ ಸಂದರ್ಭದಲ್ಲಿ ವಲಸೆ ಹಕ್ಕಿಗಳ ಊಹಿಸಲಾಧ್ಯ ಜಗತ್ತನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ,

–  ರೂಪಲ್ ಶೆಟ್ಟಿ

ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು ಎಂದು ಕುವೆಂಪು ಹೇಳಿದ್ದನ್ನು ಚಾಚೂ ತಪ್ಪಗೆ ಪಾಲಿಸುವುದು ವಲಸೆ ಹಕ್ಕಿಗಳು. ಒಮ್ಮೆ ಒಂದು ದೇಶದಲ್ಲಿದ್ದರೆ ಇನ್ನೊಮ್ಮೆ ಮತ್ಯಾವುದೋ ದೇಶದಲ್ಲಿ ಇರುತ್ತವೆ, ವಿಶ್ವ ವಲಸೆ ಹಕ್ಕಿಗಳ ದಿನದ ಈ ಸಂದರ್ಭದಲ್ಲಿ ಅಂಥಾ ಕೆಲವು ಕತೆಗಳನ್ನು ಹೇಳುತ್ತೇನೆ, ಈ ಕತೆಗಳು ನಮ್ಮನ್ನು ವಿಸ್ಮಯಗೊಳಿಸದೇ ಇರದು. ಈ ಕತೆಗಳನ್ನು ಓದಿದ ನಿಮ್ಮ ಮನಸ್ಸಲ್ಲಿ ಚೂರು ಖುಷಿ, ಉತ್ಸಾಹ, ಹುಮ್ಮಸ್ಸು ಉಂಟಾದರೆ ಅಷ್ಟರ ಮಟ್ಟಿಗೆ ಈ ಬರಹ ಸಾರ್ಥಕ.    

1.  4,368 ಕಿಮೀ ಕ್ರಮಿಸಿ ರಷ್ಯಾದಿಂದ ಭಾರತಕ್ಕೆ ಬಂದ ಹಕ್ಕಿ

ನಿಜವಾದ ವರ್ಲ್ಡ್ ಟೂರಿಸ್ಟ್ ಎಂದರೆ ರಷ್ಯಾದ ಈ ಹಕ್ಕಿ. ಡಿಮೋಯ್ ಸಿಲ್ ಕ್ರೇನ್(Demoiselle crane) ಎಂಬ ಈ ಹಕ್ಕಿ ರಷ್ಯಾದ ಟ್ರಾನ್ಸ್ ಬೈಕಾಲಿಯಾ ಎಂಬ ಪ್ರದೇಶದಿಂದ ಹೊರಟು ಕಳೆದ ಫೆಬ್ರವರಿ ಸಮಯದಲ್ಲಿ ರಾಜಸ್ಥಾನದ ಜೋಧಪುರ(Jodhpur) ಜಿಲ್ಲೆಯ ಖಿಂಚನ್(Khinchan) ಎಂಬ ಗ್ರಾಮ ತಲುಪಿತ್ತು. ನಾವೆಲ್ಲಾ ಕೊರೋನಾ ಆತಂಕದಲ್ಲಿ ಇರುವ ಹೊತ್ತಿನಲ್ಲಿ ಈ ಹಕ್ಕಿ ಸುಮಾರು 4,368 ಕಿಮೀ ಕ್ರಮಿಸಿ ಭಾರತಕ್ಕೆ ಬಂದಿತ್ತು. ವಲಸೆ ಹಕ್ಕಿಯೊಂದು ಟ್ರಾವೆಲ್ ಮಾಡಿದ ಅತಿ ಹೆಚ್ಚಿನ ದೂರ ಎಂಬ ದಾಖಲೆಯನ್ನು ಈ ಹಕ್ಕಿ ಬರೆದಿದೆ.

Demoiselle crane World Migratory Bird Day

2.  ಗುಜರಾತ್- ಕಜಕ್ ಸ್ತಾನ್- ಗುಜರಾತ್

ಕೋವಿಡ್ ಭಾರತಕ್ಕೆ ಕಾಲಿಟ್ಟು ಕಂಗೆಡಿಸುತ್ತಿದ್ದ ಹೊತ್ತು ಅದು. 2020ರ ಮಾರ್ಚ್ ತಿಂಗಳು. ಗುಜರಾತಿನ ಅಹಮದಾಬಾದ್ ಸಮೀಪದ ನಳ ಸರೋವರ ಬರ್ಡ್ ಸ್ಯಾಂಕ್ಚುರಿ(Nal Sarovar bird sanctuary)ಯಿಂದ ಒಂದು ಹೆಣ್ಣು ಕ್ರೇನ್(Crane) ಹಕ್ಕಿ ವಲಸೆ ಹೊರಟಿತು. ಅದು ಉತ್ತರ ಕಜಕ್ ಸ್ತಾನಕ್ಕೆ(Kazakhstan) ಹೋಗಿ ಅಲ್ಲಿಂದ ಮತ್ತೆ ವಾಪಸ್ ಹೊರಟು ಸರಿಯಾಗಿ ಅಕ್ಟೋಬರ್ 10ಕ್ಕೆ ಆ ಹಕ್ಕಿ ಎಲ್ಲಿಂದ ಹೊರಟಿತ್ತೋ ಅಲ್ಲಿಗೇ ಬಂದಿತ್ತು.  

Demoiselle crane World Migratory Bird Day

3.  ಕೋಗಿಲೆಯೊಂದು ಸಾಗರದಾಚೆ

ಇದು ಕೋಗಿಲೆಯೊಂದರ ಕತೆ. ಈ ಕೋಗಿಲೆಗೆ ಸೋಲಾರ್ ಆಧರಿತ ಟ್ರಾನ್ಸ್ ಮೀಟರ್ ಅಳವಡಿಸಲಾಗಿತ್ತು. ಅದು ಸ್ಯಾಟಲೈಟ್ ಗೆ ಕನೆಕ್ಟ್ ಆಗಿತ್ತು. ಅದರ ಪ್ರಕಾರ ಈ ಕೋಗಿಲೆ ಮಂಗೋಲಿಯಾ(mangolia) ದೇಶದಿಂದ ಆಫ್ರಿಕಾಗೆ(africa) ಪಯಣಿಸಿತ್ತು. ಇಂಟರೆಸ್ಟಿಂಗ್ ಅಂದ್ರೆ 13 ದೇಶಗಳನ್ನು ದಾಟಿ ಹೋಗಿತ್ತು ಈ ಕೋಗಿಲೆ. ವಾರಕ್ಕೆ ಐದು ಸಾವಿರ ಕಿಮೀ ಕ್ರಮಿಸಿತ್ತು.

ನೀವುಇದನ್ನುಇಷ್ಟಪಡಬಹುದು: ಆಸ್ಟ್ರೇಲಿಯಾದಲ್ಲಿದ್ದು ಕರ್ನಾಟಕದ ಕಾಡು ಉಳಿಸಲು ಶ್ರಮಿಸುತ್ತಿರುವ ವೈಲ್ಡ್ ಲೈಫ್ ಫೋಟೋಗ್ರಾಫರ್: ವಿಜಯ್ ಎಂಬ ಹುಮ್ಮಸ್ಸಿನ ಸಾಧಕನಿಗೆ ನಮಸ್ಕಾರ

4.  ಹಿಮಾಲಯ ದಾಟಿದ ಹಕ್ಕಿ

Amur falcon winter migration from Siberia to the northeast India World Migratory Bird Day

ಅಮೂರ್ ಫಾಲ್ಕನ್(Amur Falcon) ಎಂಬ ಹಕ್ಕಿಯ ಕತೆ ಇನ್ನೂ ವಿಶಿಷ್ಟ. ಮಂಗೋಲಿಯಾದಿಂದ(Mongolia) ಆಫ್ರಿಕಾಗೆ ಹೋಗುವ ದಾರಿಯಲ್ಲಿ ಭಾರತಕ್ಕೆ ಬಂದು ಹಿಮಾಲಯ ದಾಟಿ ಅಲ್ಲಿಂದ ಹಿಂದೂ ಮಹಾ ಸಾಗರ ಮೇಲಿಂದ ಹಾರಿ ಹೋಗಿದೆ. 22,000 ಕಿಮೀ ದಾರಿ ಕ್ರಮಿಸಿದೆ ಈ ಹಕ್ಕಿ ಎಂದರೆ ಯಾರಾದರೂ ಅಚ್ಚರಿಯಾಗದೇ ಇರಲು ಹೇಗೆ ಸಾಧ್ಯ. ಈ ಫಾಲ್ಕನ್ ಹಕ್ಕಿಗಳಿಗೆ ನಮ್ಮ ದೇಶದ ನಾಗಾಲ್ಯಾಂಡ್ ಒಂಥರಾ ರಾಜಧಾನಿ ಇದ್ದಂತೆ. ನಾಗಾಲ್ಯಾಂಡನ್ನು(Nagaland) ವಿಶ್ವದ ಫಾಲ್ಕನ್ ರಾಜಧಾನಿ(falcon capital of world) ಎಂದೂ ಕರೆಯುತ್ತಾರೆ. ಇಲ್ಲಿಗೆ ಸಾವಿರಾರು ಫಾಲ್ಕನ್ ಹಕ್ಕಿಗಳು ಬಂದು ಸ್ವಲ್ಪ ಸಮಯ ಇದ್ದು ಹೋಗುತ್ತವೆ.

Amur falcon winter migration from Siberia to the northeast India World Migratory Bird Day

ಈ ವಲಸೆ ಹಕ್ಕಿಗಳಿ ಹತ್ತಾರು ವಲಸೆ ದಾರಿಗಳಿವೆ. ಅದರಲ್ಲಿ ಶೇ,90 ಹಕ್ಕಿಗಳು ಭಾರತಕ್ಕೆ ಭೇಟಿ ಕೊಟ್ಟು ಸ್ವಲ್ಪ ಸಮಯ ಇದ್ದು ಹೋಗುತ್ತವೆ. ಆ ಎಲ್ಲಾ ಹಕ್ಕಿಗಳಿಗೆ ನಮ್ಮ ದೇಶ ಅಷ್ಟು ಇಷ್ಟ. ಅದೇ ಕಾರಣಕ್ಕಾಗಿ ನಾವು ಹೆಚ್ಚು ಹೆಚ್ಚು ಪಕ್ಷಿ ಸಂರಕ್ಷಣಾ ಕಾರ್ಯ ಮಾಡಬೇಕಾಗಿದೆ.

ಮಾಹಿತಿ: ಪ್ರವೀಣ್ ಕಸ್ವಾನ್, ಐಎಫ್ ಎಸ್ ಅಧಿಕಾರಿ (Parveen Kaswan, IFS)

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button