ಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

81ನೇ ವಯಸ್ಸಲ್ಲಿ ಹಿಮಾಲಯ ಏರಿದ ಫ್ಯಾಂಟಮ್ ಅಮ್ಮ ಉಷಾ ಸೋಮನ್: ಅಮ್ಮಂದಿರ ದಿನದ ವಿಶೇಷ

#ವಿಶ್ವ ಅಮ್ಮಂದಿರ ದಿನ ವಿಶೇಷ

ಇಡೀ ವಿಶ್ವಕ್ಕೆ ಫಿಟ್ ನೆಸ್ ಮಾಡೆಲ್ ಎಂದೇ ಗುರುತಿಸಿಕೊಂಡಿರುವವರು ಫ್ಯಾಂಟಮ್ ಖ್ಯಾತಿಯ ಮಿಲಿಂದ್ ಸೋಮನ್ ಅವರಿಗೆ ಸ್ಫೂರ್ತಿ ಅವರ ತಾಯಿ ಉಷಾ ಸೋಮನ್. 81ನೇ ವಯಸ್ಸಿನಲ್ಲಿ ಹಿಮಾಲಯ ಏರಿದ ಈ ಅಮ್ಮ ಎಲ್ಲರಿಗೂ ಮಾದರಿ. ಅವರ ಕತೆ ಅಮ್ಮಂದಿರ ದಿನಕ್ಕೆ ಅರ್ಪಣೆ.

  • ನವ್ಯಶ್ರೀ ಶೆಟ್ಟಿ

“ಅಮ್ಮ”, ಅವಳು ತನ್ನ ಮನೆ, ಮಕ್ಕಳು, ಸಂಸಾರವೆಂಬ ಚೌಕಟ್ಟಿನಿಂದ ಹೊರಬರಲು ಇಚ್ಛಿಸುವುದಿಲ್ಲ. 

ಅದನ್ನೇ ಪ್ರಪಂಚ ಅಂದುಕೊಂಡಿರುವ ಅವಳಿಗೆ ಸೃಜನಶೀಲ ಯೋಚನೆಗಳು ಬಂದರೂ, ಅದನ್ನು ಜಾರಿಗೆ ತರುವ ಧೈರ್ಯ ಮಾಡುವುದು ಕಡಿಮೆ.

ಅದರಲ್ಲೂ ಸೋಲೋ ಟ್ರಿಪ್, ಟ್ರೆಕ್ಕಿಂಗ್ ಅಂತಹ ಯೋಚನೆಗಳೂ ಬರಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ತಾಯಿ ತನ್ನ ಸಂಸಾರವನ್ನು ತೂಗಿಸಿಕೊಂಡು ಹೋಗುವುದು ಮಾತ್ರವಲ್ಲದೆ, ಹಿಮಾಲಯದ ತುದಿಯನ್ನು ತಮ್ಮ 81ನೇ ವಯಸ್ಸಿನಲ್ಲಿ ತಲುಪಿ, ಯುವಜನರೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದಾರೆ.

ನಡೆಯುಲು ಇನ್ನೊಬ್ಬರ ಆಸರೆ ಬೇಕಾದ ಈ ವಯಸ್ಸಿನಲ್ಲಿ, ಟ್ರೆಕ್ಕಿಂಗ್ ಅನ್ನೇ ಉಸಿರಾಗಿಸಿಕೊಂಡ ಇವರು ಉಷಾ ಸೋಮನ್. ಖ್ಯಾತ ನಟ ಮಿಲಿಂದ್ ಸೋಮನ್ ತಾಯಿ. ಮತ್ತು ಮಿಲಿಂದ್ ಅವರ ಪ್ರತಿಯೊಂದು ಸಾಧನೆಗೂ ಇವರೇ ಸ್ಫೂರ್ತಿ ಅನ್ನುವುದು ವಿಶೇಷ!

Usha Soman Milind Usha Soman Fitness
ಚಿತ್ರಕೃಪೆ: Milind Usha Soman

81ರ ಹರೆಯದ ಉಷಾ, ಖ್ಯಾತ ನಟ, ಫಿಟ್ನೆಸ್ ಪ್ರಮೋಟರ್, ಮಾಡೆಲ್ ಮಿಲಿಂದ್ ಸೋಮನ್ ಅವರ ತಾಯಿ. ನಿವೃತ್ತ ಪ್ರಾಧ್ಯಾಪಕಿ. ಇಳಿ ವಯಸ್ಸಿನಲ್ಲಿ ಹಿಮಾಲಯ ಶಿಖರ ಏರಿ ಅಚ್ಚರಿ ಮೂಡಿಸಿರುವ ಇವರು, ಯುವ ಜನತೆಗೆ ಸಾಧಿಸುವ ಸ್ಫೂರ್ತಿ, ಪ್ರೇರಣಾ ಶಕ್ತಿಯಾಗಿದ್ದಾರೆ. 81ರ ಹರೆಯದ ಉಷಾ ಹಲವು ವರ್ಷಗಳ ಹಿಂದೆ ಟ್ರೆಕ್ಕಿಂಗ್ ಮಾಡಲು ಶುರು ಮಾಡಿದರು. ಮಿಲಿಂದ್ ಅವರ ತಾಯಿಯ ಸಾಧನೆ ಹಲವರಿಗೆ ಅದ್ಭುತ ಅನಿಸುತ್ತೆ. ಆದರೆ ಮಿಲಿಂದ್ ಅವರಿಗೆ ಅದು ಸಾಮಾನ್ಯ ಅನ್ನುವ ಭಾವನೆ. 

Usha Soman Milind Usha Soman Fitness
ಚಿತ್ರಕೃಪೆ: Milind Usha Soman

ತಮ್ಮ ಇಳಿ ವಯಸ್ಸಿನಲ್ಲೂ ಉಷಾ ಅವರು ಪ್ರಪಂಚದ ಬೇರೆ ಬೇರೆ ಶಿಖರಗಳನ್ನು ಏರುತ್ತಿದ್ದಾರೆ. ಮಗ ಮಿಲಿಂದ್ ಅವರಿಗೆ ತಾಯಿ ಸ್ಫೂರ್ತಿ. ಉಷಾ ಸೋಮನ್ ತಾನು ಸಾಧಿಸಬೇಕಾದ ಹಾದಿಯಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಎಂದಿಗೂ ಯಾರನ್ನು ದೂರಿಲ್ಲ. 2 ವರ್ಷಗಳ ಹಿಂದೆ 20 ದಿನದಲ್ಲಿ 350 ಕಿಮೀ ಟ್ರೆಕ್ಕಿಂಗ್ ಮಾಡಿದ್ದರು ಉಷಾ. ಮಿಲಿಂದ್ ಅವರು ಹೇಳುವಂತೆ ಉಷಾ ಅವರು ಮಿಲಿಂದ್ ಗಿಂತ ಟ್ರೆಕ್ಕಿಂಗ್ ನಲ್ಲಿ ವೇಗ ಜಾಸ್ತಿ. ಪರ್ವತ ಏರುವ ಸಮಯದಲ್ಲಿ ಏನೇ ತೊಂದರೆಗಳು ಎದುರಾದರೂ ಉಷಾ  ಆ ತೊಂದರೆಗಳನ್ನು ದಾಟಿ ಗುರಿ ತಲುಪುತ್ತಿದ್ದರು. 

ನೀವುಇದನ್ನುಇಷ್ಟಪಡಬಹುದು: 65 ದೇಶಗಳನ್ನು ಸುತ್ತಿರುವ 68ರ ತರುಣಿಯ ಸ್ಫೂರ್ತಿ ಕಥೆ

ಕಳೆದ ವರ್ಷ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಪೂರೈಸಿರುವ ಉಷಾ ಅವರು ತಮ್ಮ 60ರ ಹರೆಯದಲ್ಲಿ   ಕಿಲಿಮಿಂಜರೋ (Kilimanjaro)ಏರಿ ಸೈ ಎನಿಸಿಕೊಂಡಿದ್ದಾರೆ. ಉಷಾ ಅವರ ಜರ್ನಿ ವಿಭಿನ್ನ. ಅವರು ಯಾರಿಗೂ ತನ್ನ ಮುಂದಿನ ಗುರಿ ಬಗ್ಗೆ ಹೇಳುವುದಿಲ್ಲ. ಗುರಿ ಸಾಧಿಸಿ ಅಚ್ಚರಿ ಮೂಡಿಸುತ್ತಾರೆ. 

Usha Soman Milind Usha Soman Fitness Trekking
ಚಿತ್ರಕೃಪೆ: Milind Usha Soman

ಉಷಾ ಸೋಮನ್ ಅವರ ದಿನಚರಿಯೇ ಎಲ್ಲರಿಗೂ ಮಾದರಿ. ದಿನ ನಿತ್ಯ 5 ಕಿಮೀ ವಾಕಿಂಗ್ ಮಾಡುತ್ತಾರೆ.  ಅವರು ತನ್ನನ್ನು ತಾನು ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ. ಸದಾ ಸಕಾರಾತ್ಮಕವಾಗಿ ಯೋಚನೆ ಮಾಡುವುದು, ಉತ್ತಮ ಪೌಷ್ಟಿಕಾಂಶ ಆಹಾರ ಸೇವನೆ ಇವರ ಸೀಕ್ರೆಟ್. 

ಇತ್ತೀಚೆಗೆ ಪ್ರತಿಯೊಬ್ಬರ ಜೀವನ ಶೈಲಿ ಬದಲಾಗುತ್ತಿದೆ. ತಮಗೆ ಬೇಕು ಎನ್ನುವುದನ್ನು ಮಾತ್ರ ಅಪೇಕ್ಷಿಸುತ್ತಿದ್ದಾರೆ. ಖುಷಿಯಿಂದ ನಮ್ಮನ್ನು ನಾವು ಯಾವುದಾದರೂ ಕೆಲಸದಲ್ಲಿ ಸದಾ ಬ್ಯುಸಿ ಆಗಿರುವ ಹಾಗೆ ನೋಡಿಕೊಳ್ಳುವುದು, ಉತ್ತಮ ಯೋಚನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ಸೆಲೆಬ್ರಿಟಿ ತಾಯಿ ಉಷಾ . 

ಉಷಾ ಕೇವಲ ಕುಟುಂಬವನ್ನು ನೋಡಿಕೊಳ್ಳುವ ತಾಯಿಯಲ್ಲ. ಆಕೆಯ ಸಾಧನೆ ಟ್ರೆಕ್ಕಿಂಗ್ ಗೆ ಮಾತ್ರ ಸೀಮಿತವಲ್ಲ. ಉಷಾ ಸೋಮನ್ ಫಿಟ್ನೆಸ್ ಪ್ರಿಯೆ. ಅವರ ಫಿಟ್ನೆಸ್ ಎಲ್ಲರಿಗೂ ಮಾದರಿ. ಉಷಾ ಅವರ ಪ್ರಕಾರ ಶಾರೀರಿಕ ಕಸರತ್ತು ಮಾಡಿದರೆ ಮಾತ್ರ ನಾವು ಉತ್ತಮ ಫಿಟ್ನೆಸ್ ಹೊಂದಿದ್ದೇವೆ ಎಂದರ್ಥವಲ್ಲ. ನಾವು ಮಾನಸಿಕವಾಗಿ ಸದೃಢವಾಗಿರಬೇಕು. ನಿಮ್ಮನ್ನು ನೀವು ನಂಬಿದರೆ, ನಿಮಗೆ ಏನಾದರೂ ಸಾಧಿಸಲು ಸಾಧ್ಯ, ನಿಮ್ಮ ಮನಸ್ಸು ಅದಕ್ಕೆ ಸಹಾಯ ಎನ್ನುತ್ತಾರೆ,  ಈ ಮಾದರಿ ತಾಯಿ. 

Usha Soman Milind Usha Soman Fitness
ಚಿತ್ರಕೃಪೆ: Milind Usha Soman

ಉಷಾ ಅವರ ಸಾಧನೆಗಳ ಪಟ್ಟಿ  ದೊಡದ್ದಿದೆ . 

ಉಷಾ ಅವರು ಸತತವಾಗಿ 21ರ ಹರೆಯದ ಯುವ ಸಮುದಾಯ ಕೂಡ ನಿಬ್ಬೆರಗಾಗುವಂತೆ ದೈಹಿಕ ಕಸರತ್ತು ಮಾಡಬಲ್ಲರು .  Oxfam trailwalk ಎನ್ನುವ ಕಾರ್ಯಕ್ರಮದಲ್ಲಿ 41ಗಂಟೆಯಲ್ಲಿ 100ಕಿಮೀ ನಡೆದು ಸೈ ಎನಿಸಿಕೊಂಡಿದ್ದಾರೆ.  ಸೀರೆಯಲ್ಲಿ ಮ್ಯಾರಥಾನ್ ಮುಗಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ

ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನುವ ಮಾತು ಇವರ ವಿಚಾರದಲ್ಲಿ ನಿಜವಾಗಿದೆ. ನಮ್ಮ ಸಾಧನೆ, ಹುಮ್ಮಸ್ಸಿನ ಜೀವನಕ್ಕೆ ವಯಸ್ಸು ಅಡ್ಡಿಯಲ್ಲ, ಎನ್ನುವುದನ್ನು ನಿರೂಪಿಸಿದ್ದಾರೆ ಉಷಾ  ಸೋಮನ್.  ಈ ಸೆಲೆಬ್ರಿಟಿ ತಾಯಿಯ ಇಳಿ ವಯಸ್ಸಿನಲ್ಲೂ ಕುಂದದ ಜೀವನೋತ್ಸಾಹ  ಎಲ್ಲರಿಗೂ ಮಾದರಿ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button