ಎಳೆಯ ಪಕ್ಷಿಗಳ ಅಂತರಾಳ ಕೇಳಿಸಿಕೊಂಡ ದೈತ್ಯ ಆನೆ: ಮನುಷ್ಯತ್ವಕ್ಕೆ ಕೈಗನ್ನಡಿಯಾದ ಸನ್ನಿವೇಶ

ಪ್ರಕೃತಿಯೇ ಒಂದು ಅಗೋಚರ ಶಕ್ತಿ, ಈ ಶಕ್ತಿಯ ಸಣ್ಣ ಭಾಗವಾದ ಮನುಷ್ಯ ಪ್ರಕೃತಿಯೇ ನನ್ನದು ಎಂಬ ಹುಚ್ಚು ಗೀಳಿನೊಂದಿಗೆ ಮನುಷ್ಯತ್ವದ ರೂಪ ರೇಖೆಗಳನ್ನೆ ಮರೆತು ಸಾದಾ ತನ್ನ ಪ್ರಾಬಲ್ಯವನ್ನ ತೋರುವ ದಾರಿಯನ್ನು ಹುಡುಕುತ್ತಿರುತ್ತಾನೆ. ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿಕೊಳ್ಳುವ ಪ್ರಕೃತಿ ಮನುಷ್ಯನಿಗೆ ತನ್ನದೇ ಆದ ರೀತಿಯಲ್ಲಿ ಉತ್ತರಿಸುತ್ತದೆ. ಅಂತಹದೊಂದು ಪ್ರಕ್ರಿಯೆಗೆ ಸಾಕ್ಷಿಯಾದ ಸನ್ನಿವೇಶದ ಕುರಿತು ಈ ಬರಹ.
- ಆದಿತ್ಯ ಯಲಿಗಾರ
ಆನೆಗಳನ್ನು ಸಾಮಾನ್ಯವಾಗಿ ದೈತ್ಯ ಜೀವಿಗಳು ಎಂದು ಕರೆಯಲಾಗುತ್ತದೆ.ಇಲ್ಲಿನ ಜನ ಆನೆಯನ್ನ ಗಣೇಶನ ರೂಪದಲ್ಲಿ ಕಂಡು ಪೂಜಿಸುತ್ತಾರೆ. ಸಾಮಾನ್ಯವಾಗಿ ಶಾಂತ ಸ್ವರೂಪಿಗಳಾದ ಆನೆಗಳಿಗೆ ಅಕಸ್ಮಾತ್ ಆಗಿ ಮದ ಏರಿದರೆ ಮುಗೀತು ಅವು ಅತ್ಯಂತ ಭಯ ಬೀಳಿಸುವ ವಿನಾಶವನ್ನು ಮಾಡಬಲ್ಲವು. ಇವುಗಳೆಲ್ಲದರ ಮಧ್ಯೆಯೂ ಆನೆಗಳಲ್ಲಿ ಒಂದು ಬಗೆಯ ಮನುಷ್ಯತ್ವದ ಕುರುಹುಗಳಿವೆ ಎಂದು ಸಾಬೀತುಗೊ

ಳಿಸುವ ಘಟನೆಯೊಂದು ತಮಿಳುನಾಡಿನ ಹಳ್ಳಿಯೊಂದರಲ್ಲಿ ಜರುಗಿದೆ.
ಒಂದು ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ, ಇದು ತಮಿಳುನಾಡಿನ ಹಳ್ಳಿಯೊಂದರಲ್ಲಿ ಬಾಳೆ ತೋಟದ ಗಿಡಗಳನ್ನು ನಾಶಪಡಿಸಿದ ದೈತ್ಯ ಆನೆಯ ಕುರಿತದ್ದಾಗಿದೆ. ಆನೆ ತೋಟವನ್ನ ಅದೆಷ್ಟೇ ಹಾನಿಗೊಳಿಸಿದರು ಅಲ್ಲಿಯ ಒಂದು ಬಾಳೆ ಗಿಡದ ಮೇಲೆ ಗೂಡು ಕಟ್ಟಿಕೊಂಡು ವಾಸವಿದ್ದ ಎಳೆಯ ಪಕ್ಷಿಗಳಿಗೆ ಕಿಂಚಿತ್ತೂ ಹಾನಿ ಮಾಡಿಲ್ಲ. ಎಳೆಯ ಕಂದಮ್ಮಗಳ ಅಂತರಾಳವನ್ನ ದೈತ್ಯ ಪ್ರಾಣಿಯೊಂದು ಅರ್ಥ ಮಾಡಿಕೊಂಡತಿದೆ ಈ ಸನ್ನಿವೇಶ.
ಕಳೆದ ಒಂದು ವರ್ಷದ ಹಿಂದೆ ಕೇರಳದಲ್ಲಿ ನಡೆದ ಒಂದು ಘಟನೆ ಮಾನವೀಯತೆಯ ಎಲ್ಲ ಎಲ್ಲೆಗಳನ್ನು ಮೀರಿತ್ತು. ಯಾರೋ ದುಷ್ಕರ್ಮಿಗಳು ಆನೆಗೆ ಪೈನಾಪಲ್ ಹಣ್ಣಿನಂತೆ ತೋರುವ ಪಟಾಕಿಯೊಂದನ್ನ ತಿನ್ನಿಸಿ ಜೀವ ತಗೆದಿದ್ದರು. ಮೃತ್ಯ ಹೊಂದಿದ್ದ ಆನೆಯ ಗರ್ಭದಲ್ಲಿ ಸಣ್ಣ ಕಂದಮ್ಮವೊಂದು ಪ್ರಪಂಚ ನೋಡುವ ಆಸೆಯಲ್ಲಿತ್ತು.
ಅದೇ ಪ್ರಪಚಂದ ಮನುಷ್ಯ ಅದು ಭೂಮಿಗೆ ಅಂಬೆಗಾಲಿಡುವ ಮೊದಲೇ ಅದನ್ನ ಕೊಂದು ಬಿಟ್ಟಿದ್ದ. ಇಂತಹ ಹೀನ ಕೃತ್ಯಗಳಿಗೆ ಉತ್ತರ ಕೊಟ್ಟಂತಿದೆ ತಮಿಳುನಾಡಿನಲ್ಲಿ ನಡೆದ ಈ ಘಟನೆ. ಪಕ್ಷಿಯ ಕಂದಮ್ಮಗಳಿಗೆ ಏನೂ ಹಾನಿ ಮಾಡದ ಆನೆ ಮನುಷ್ಯನಿಗೆ ಮನುಷ್ಯತ್ವದ ಪಾಠ ಹೇಳಿದಂತಿದೆ.
ನೀವುಇದನ್ನುಇಷ್ಟಪಡಬಹುದು: 500 ಆನೆಗಳನ್ನು ಬೇಟೆಯಾಡಲು ಅನುಮತಿ ನೀಡಿದ ಜಿಂಬಾಬ್ವೆ: ಕೋವಿಡ್ ಕರುಣೆಯನ್ನೂ ಕೊಂದಿತೇ!
ಸ್ಥಳೀಯ ಸುದ್ದಿ ಚಾನೆಲ್ ತೋರಿದ ಸಣ್ಣ ವಿಡಿಯೋವನ್ನು ಟ್ವಿಟರ್‌ನಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತಾ ನಂದಾ ಶುಕ್ರವಾರ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಒಂದು ಕಡೆ ಗ್ರಾಮಸ್ಥರು ಕಾಡು ಆನೆಗಳಿಂದ ಉಂಟಾದ ವಿನಾಶವನ್ನು ನಿರ್ಣಯಿಸಿದರೆ, ಇನ್ನೊಂದು ಕಡೆ ಆನೆಯಿಂದ ಯಾವ ಹಾನಿಯನ್ನು ಕಾಣದ ಪಕ್ಷಿಯ ಗೂಡನ್ನು ನೋಡಬಹುದು.

ಈ ವೈರಲ್ ವೀಡಿಯೊ ಟ್ವಿಟ್ಟರ್ನಲ್ಲಿ ಅನೇಕ ಇಷ್ಟಗಳನ್ನು ಮತ್ತು ವೀಕ್ಷಣೆಯನ್ನ ಗಳಿಸಿ,ಜನರು ಆನೆಗಳನ್ನು ಹೆಚ್ಚು ಪ್ರಂಶಶಿಸಲು ಕಾರಣವಾಗಿದೆ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ