Moreಮ್ಯಾಜಿಕ್ ತಾಣಗಳುವಿಂಗಡಿಸದಸಂಸ್ಕೃತಿ, ಪರಂಪರೆ

“ಮಹಾ ಶಿವರಾತ್ರಿ”ಯಿಂದ ಬಿಎಂಟಿಸಿ ಟೂರ್ ಪ್ಯಾಕೇಜ್ ಘೋಷಣೆ; ಕೇವಲ ₹500 ನಲ್ಲಿ ಇಲ್ಲೆಲ್ಲಾ ಸುತ್ತಬಹುದು:

ಬೆಂಗಳೂರಿನ ಜನರ ಸಾರಿಗೆ ಒಡನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ. ಶಿವರಾತ್ರಿ ದಿನವನ್ನು ವಿಶೇಷವಾಗಿ ಆಚರಿಸಲು ಟೂರ್ ಪ್ಯಾಕೇಜ್ ಅನ್ನು (Tour Package) ಘೋಷಿಸಿದೆ.

ಮಾ.8 ರಂದು ನಾಳೆ ರಾಷ್ಟ್ರಾದ್ಯಂತ ಮಹಾ ಶಿವರಾತ್ರಿ (Maha Shivaratri) ಆಚರಿಸಲಾಗುತ್ತದೆ. ಈ ದಿನ ಶಿವ ಭಕ್ತರು ಉಪವಾಸವಿದ್ದು, ಶಿವನ ದೇವಾಲಯಗಳಿಗೆ (Shiva Temple) ಭೇಟಿ ನೀಡುತ್ತಾರೆ.

ಈ ಸುಸಂದರ್ಭದಲ್ಲಿ BMTC ಈ ಒಂದು ದಿನದ ಟೂರ್ ಪ್ಯಾಕೇಜ್ ಪರಿಚಯಿಸಿದೆ.

ಈ ಟೂರ್ ಪ್ಯಾಕೇಜ್ ಚಿಕ್ಕಬಳ್ಳಾಪುರ (Chikkaballapur) ಮತ್ತು ಆಸುಪಾಸಿನ ಪ್ರವಾಸಿ ಸ್ಥಳಗಳನ್ನು ಒಳಗೊಂಡಿದ್ದು, ಇದಕ್ಕೆ “ಈಶಾ ಫೌಂಡೇಷನ್ ಟೂರ್ ಪ್ಯಾಕೇಜ್” (Isha Foundation Tour Package) ಎಂದು ಕರೆಯಲಾಗಿದೆ.

ಮಾ.8 ರಿಂದ ಈ ಪ್ರವಾಸ ಪ್ಯಾಕೇಜ್ ಆರಂಭವಾಗಲಿದ್ದು, ಸಾರ್ವತ್ರಿಕ ರಜಾ ದಿನಗಳು ಹಾಗೂ ವಾರಾಂತ್ಯ ರಜಾ ದಿನಗಳಂದು ಅಗ್ಗದ ದರದಲ್ಲಿ ಹವಾನಿಯಂತ್ರಿತ ಬಸ್ಸಿನೊಂದಿಗೆ (Air-conditioned (Volvo) bus) ಪ್ರವಾಸಿ ಸಾರಿಗೆ ಸೌಲಭ್ಯ ದೊರೆಯಲಿದೆ.

ಈ ಟೂರ್ ಪ್ಯಾಕೇಜ್ ಕೆಂಪೇಗೌಡ ಬಸ್ ನಿಲ್ದಾಣದಿಂದ (Kempegowda Bus Stop) ಮಧ್ಯಾಹ್ನ 12ಕ್ಕೆ ಆರಂಭಗೊಂಡು, ಈಶಾ ಫೌಂಡೇಶನ್ ಸೇರಿ 5 ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡಲಿದೆ.

ಇದು ಭೋಗ ನಂದೀಶ್ವರ ದೇವಸ್ಥಾನ, ಕಣಿವೆ ಬಸವಣ್ಣ ದೇವಸ್ಥಾನ, ಸರ್ ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ, ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ನಂತರ ಈಶಾ ಫೌಂಡೇಶನ್‌ಗೆ ತಲುಪಲಿದೆ.

ನಂತರ ಅಲ್ಲಿಂದ ಹೊರಟು 9.30 ಕ್ಕೆ ಮತ್ತೆ ಕೆಂಪೇಗೌಡ ಬಸ್ ನಿಲ್ದಾಣ ಬರಲಿದೆ. ಈ ಪ್ರಯಾಣದ ಶುಲ್ಕ ಕೇವಲ 500 ರೂ ನಿಗದಿ ಆಗಿದೆ.

ಬಿಎಂಟಿಸಿ (BMTC) ಟೂರ್ ಪ್ಯಾಕೇಜ್‌ನಲ್ಲಿರುವ 5 ಪ್ರವಾಸಿ ಸ್ಥಳಗಳು ಮಾಹಿತಿ:

ಭೋಗ ನಂದೀಶ್ವರ ದೇವಸ್ಥಾನ: (Bhoga Nandeeshwara Temple)

ಈ ದೇವಾಲಯ ಶಿವನಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ತಪ್ಪಲಿನಲ್ಲಿದೆ.

ಭಾರತದ ಪುರಾತತ್ತ್ವ ಇಲಾಖೆಯ ಪ್ರಕಾರ ಹಳೆಯ ಶಾಸನಗಳಲ್ಲಿ ಇದು ಒಂಭತ್ತನೇ ಶತಮಾನದ ಕಾಲದಲ್ಲಿ ನಿರ್ಮಾಣಗೊಂಡಿದೆ ಎನ್ನಲಾಗಿದೆ.

ಕಣಿವೆ ಬಸವಣ್ಣ ದೇವಸ್ಥಾನ: (Kanive Basavanna Temple)

ಇದು ಸಹ ನಂದಿಬೆಟ್ಟದ ಸಮೀಪದಲ್ಲೇ ಇದೆ. ಚಿಕ್ಕಬಳ್ಳಾಪುರದ ರೈತರು ಈ ದೇವಾಲಯದ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ.

ಇದು ಪುರಾತನ ದೊಡ್ಡ ಬಸವಣ್ಣನನ್ನು ಹೊಂದಿದ್ದು, ಸುಗ್ಗಿಯ ಸಮಯದಲ್ಲಿ ತಾವು ಬೆಳೆದ ಫಸಲಿನ ಒಂದು ಭಾಗವನ್ನು ಇಲ್ಲಿ ಸಮರ್ಪಿಸುತ್ತಾರೆ.

ವಿಶ್ವೇಶ್ವರಯ್ಯ ಸಮಾಧಿ ಮತ್ತು ಮ್ಯೂಸಿಯಂ: (Sir M Visvesvaraya Museum and Samadhi)

ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯನವರು ಹುಟ್ಟಿ ಬೆಳೆದ ಊರು, ಮನೆ. ಇಲ್ಲಿಯೇ ಅವರ ಸಮಾಧಿ ಮತ್ತು ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ.

ರಂಗನಾಥಸ್ವಾಮಿ ದೇವಸ್ಥಾನ, ರಂಗಸ್ಥಳ: (Rangasthala Ranganatha Swami Temple)

9ನೇ ಶತಮಾನದಷ್ಟು ಪುರಾತನ ದೇಗುಲವಾಗಿದ್ದು, ದಕ್ಷಿಣ ಭಾರತದ ಮೂರು ಪ್ರಮುಖ ರಂಗನಾಥ ಸ್ವಾಮಿ ದೇಗುಲಗಳ ಪೈಕಿ ಇದೂ ಸಹ ಒಂದು.

ಸಂಕ್ರಾಂತಿ ದಿನ ಇಲ್ಲಿ ದೇವರ ಪಾದದ ಮೇಲೆ ನೇರವಾಗಿ ಸೂರ್ಯ ಕಿರಣ ಬೀಳುತ್ತದೆ.

ಈಶಾ ಫೌಂಡೇಶನ್: (Isha Foundation)

ಈಶಾ ಫೌಂಡೇಶನ್ ಆಕರ್ಷಣೆಯೇ ಬೃಹತ್ ಆದಿಯೋಗಿ ಪ್ರತಿಮೆ (Adiyogi Statue). ಇದು ಚಿಕ್ಕಬಳ್ಳಾಪುರದಲ್ಲಿದೆ (Chikkaballapur)

ನೀವೂ ಈ ಪ್ರವಾಸಿ ತಾಣ ನೋಡಲು ಬಯಸುತ್ತೀರಾ? ಹಾಗಾದರೆ ನಾಳೆನೇ ಯೋಜನೆ ರೂಪಿಸಿ. ಶಿವರಾತ್ರಿಯ ದಿನದಂದೇ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button