Moreಇವರ ದಾರಿಯೇ ಡಿಫರೆಂಟುಬೆರಗಿನ ಪಯಣಿಗರುವಿಂಗಡಿಸದಸ್ಫೂರ್ತಿ ಗಾಥೆ

ಎಲ್ಲಾ 193 ದೇಶಗಳಿಗೂ ಭೇಟಿ ನೀಡಿರುವ ಸ್ಫೂರ್ತಿದಾಯಕ ಮಹಿಳೆ 79 ವರ್ಷದ “ಲೂಯಿಸಾ ಯು”

ಪ್ರಯಾಣವನ್ನು ಪ್ರೀತಿಸುವವರು ಎಂದಿಗೂ ನಿಲ್ಲುವುದಿಲ್ಲ. ಅವರ ಭೇಟಿ ನೀಡಬೇಕಾದ ಸ್ಥಳಗಳ ಪಟ್ಟಿ ಸಹ ಎಂದಿಗೂ ಮುಗಿಯುವುದಿಲ್ಲ. ಅಂತಹ ಒಬ್ಬ ಮಹಿಳೆಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಈ ಮಹಿಳೆಯ ವಯಸ್ಸು 79 ವರ್ಷ (79 Years old) ಆಗಿದ್ದರೂ, ಅವರಿಗೂ ಪ್ರಯಾಣದ ಕುರಿತಾದ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ.

ಇವರೇ ಫಿಲಿಪಿನೋ ಅಮೇರಿಕನ್ (Filipino American) ಗ್ಲೋಬ್‌ಟ್ರೋಟರ್ (globetrotter) ಲೂಯಿಸಾ ಯು (Luisa Yu).

ಇವರು ಎಲ್ಲಾ 193 ದೇಶಗಳಿಗೆ (193 Countries) ಪ್ರವಾಸ ಮಾಡುವ ಮೂಲಕ ಅವರ ಜೀವನದ ಅತ್ಯಂತ ಮಹತ್ವದ ಕನಸನ್ನು ನನಸಾಗಿಸಿಕೊಂಡಿದ್ದು, ಅದೆಷ್ಟೋ ಯುವಕ-ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

ಅವರೇ ಹೇಳುವಂತೆ, ಅವರ ಪ್ರಯಾಣದ ಮೇಲಿನ ಪ್ರೀತಿಯು ಚಲನಚಿತ್ರಗಳಲ್ಲಿ ಬರುವ ಪ್ರಕೃತಿ, ನದಿಗಳು ಮತ್ತು ಪರ್ವತಗಳ ಮೋಡಿಮಾಡುವ ದೃಶ್ಯಗಳನ್ನು ವೀಕ್ಷಿಸುವ ಮೂಲಕ ಆರಂಭಗೊಂಡಿತು.

ಈ ಭೂದೃಶ್ಯಗಳನ್ನು ವೀಕ್ಷಿಸುವ ಮೂಲಕ ಎಂದಾದರೂ ಒಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಬೇಕೆಂದು ನಿರ್ಧರಿಸಿದೆ ಎನ್ನುತ್ತಾರೆ ಲೂಯಿಸ್.

ಇವರು ಮೊದಲು ಅವರು ಯುನೈಟೆಡ್ ಸ್ಟೇಟ್ಸ್ ಗೆ (United States) ವಿದ್ಯಾರ್ಥಿನಿಯಾಗಿ ಭೇಟಿ ನೀಡಿದರು. ನಂತರ ಅದೇ ದೇಶದಲ್ಲಿ ತಮ್ಮ ಪ್ರಯಾಣದ ಸಾಹಸಗಳನ್ನು ಆರಂಭಿಸಿದರು.

ಅವರು ಗ್ರೇಹೌಂಡ್ ಬಸ್‌ ಮೂಲಕ ಅಲ್ಲಿಯ ವಿವಿಧ ರಾಜ್ಯಗಳಿಗೆ ಭೇಟಿ ನೀಡಲು ಆರಂಭಿಸಿದರು.

ವೈದ್ಯಕೀಯ ತಂತ್ರಜ್ಞಾನದಲ್ಲಿನ ತನ್ನ ವೃತ್ತಿಜೀವನದಿಂದ ಟ್ರಾವೆಲ್ ಏಜೆಂಟ್ (Travel Agent) ಆಗುವ ಮೂಲಕ ಲೂಯಿಸ್ ತನ್ನ ಅಲೆಮಾರಿತನದ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಇವರು ಕಳೆದ ಐದು ದಶಕಗಳಲ್ಲಿ, ಇಟಲಿಯಂತಹ (Italy) ಯುರೋಪ್‌ ದೇಶಗಳನ್ನು, ಥೈಲ್ಯಾಂಡ್‌ನಂತಹ ಏಷ್ಯಾದ (Asia) ರಾಷ್ಟ್ರಗಳನ್ನು ಮತ್ತು ಇರಾನ್‌ನಂತಹ ಮಧ್ಯಪ್ರಾಚ್ಯ ಸ್ಥಳಗಳನ್ನು ಜೊತೆಗೆ ಲಿಬಿಯಾದಂತಹ ಆಫ್ರಿಕನ್ ರಾಷ್ಟ್ರಗಳನ್ನು ಸಹ ಪರಿಶೋಧಿಸಿದ್ದಾರೆ.

ವೈವಿಧ್ಯಮಯ ದೇಶಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ವೀಕ್ಷಿಸಲು ಬಯಸಿದ ಲೂಯಿಸ್ ಅಲ್ಲಿ ಎದುರಾಗುವ ಕೆಲವು ಅಪಾಯಗಳ ಹೊರತಾಗಿಯೂ, ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ಎಲ್ಲಾ 193 ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡಲು ನಿರ್ಧರಿಸಿದರು.

ನವೆಂಬರ್ 9, 2023 ರಂದು ಸೆರ್ಬಿಯಾದಲ್ಲಿ (Serbia) ತನ್ನ ಕೊನೆಯ ಗುರಿಯನ್ನು ಸಾಧಿಸುವ ಮೂಲಕ ಅವರು ಅವರ ಬೆಂಬಲಿಗರಿಂದ ಸ್ವಾಗತವನ್ನು ಪಡೆದುಕೊಂಡರು.

ಈ ಇಳಿ ವಯಸ್ಸಿನಲ್ಲಿ ತನ್ನ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಮೂಲಕ ಅವರು ಇತರರನ್ನು ಮುಖ್ಯವಾಗಿ ಮಹಿಳೆಯರನ್ನು (Women) ಇಂತಹ ಪ್ರಯಾಣಗಳಿಗೆ ಪ್ರೋತ್ಸಾಹಿಸಲು ಭಾವಿಸುತ್ತಾರೆ.

ಅವರು ತಮ್ಮ ಸ್ಫೂರ್ತಿದಾಯಕ ನುಡಿಗಳನ್ನು ಹೀಗೆ ಹೇಳುತ್ತಾರೆ, “ “ಹೆದರಬೇಡಿ, ಸುಮ್ಮನೆ ಹೋಗಿ. ಯಾರಿಗೂ ಕಾಯಬೇಡಿ, ಏಕೆಂದರೆ ನೀವು ಕಾಯುತ್ತಿದ್ದರೆ ಅದು ಎಂದಿಗೂ ಸಂಭವಿಸುವುದಿಲ್ಲ.”

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button