ಇವರ ದಾರಿಯೇ ಡಿಫರೆಂಟುಮ್ಯಾಜಿಕ್ ತಾಣಗಳುವಿಂಗಡಿಸದವಿಸ್ಮಯ ವಿಶ್ವ

ಚೀನಾದ ಹೊಸ ಆವಿಷ್ಕಾರ ‘ಗ್ಲಾಸ್ ಬಾಟಮ್ ಸ್ಕೈ ರೈಲು’

ಚೀನಾ ವಿನೂತನ ಆವಿಷ್ಕಾರಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಲೇ ಇರುತ್ತದೆ. ಆ ಆವಿಷ್ಕಾರಗಳ ಪಟ್ಟಿಗೆ ‘ಗ್ಲಾಸ್ ಬಾಟಮ್ ಸ್ಕೈ ರೈಲು’ ಇದೀಗ ಹೊಸ ಸೇರ್ಪಡೆ. ಹಾಗಾದರೆ ಏನು ಈ ರೈಲಿನ ವಿಶೇಷ? ಹೇಗೆ ಈ ರೈಲು, ಮಾಮೂಲಿ ರೈಲುಗಳಿಗಿಂತ ಭಿನ್ನ?

  • ವರ್ಷಾ ಉಜಿರೆ

ಯಾರು ಸುಮ್ಮನೆ ಕುಳಿತರೂ ಚೀನಾದವರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಏನಾದರೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವುದು ಕೂಡ ಅವರ ವಿಶೇಷತೆ. ಒಳ್ಳೆಯ ಕಾರಣಕ್ಕೆ ಕೆಟ್ಟ ಕಾರಣಕ್ಕೆ ಹೀಗೆ ನಾನಾ ರೀತಿಯಲ್ಲಿ ಜಗತ್ತಿನ ಗಮನ ಸೆಳೆಯುವ ಚೀನಾ ಸದ್ಯ ಹೊಸತೊಂದು ಆವಿಷ್ಕಾರದ ಮೂಲಕ ಜಗತ್ತಿನ ಕಣ್ಣಿಗೆ ಬಿದ್ದಿದೆ. ಆ ಆವಿಷ್ಕಾರವೇ ‘ಗ್ಲಾಸ್ ಬಾಟಮ್ ಸ್ಕೈ ಟ್ರೈನ್’ (sky train).

China Glass Bottomed Sky Train


ಈ ರೈಲಿನ ಚಿತ್ರಗಳನ್ನು ನೋಡಿದರೆ ನಿಮಗೆ ಈ ರೈಲಿನ ವಿಶೇಷತೆ ಅರ್ಥವಾಗುತ್ತದೆ. ನೋಡಲು ಆಕರ್ಷಕವಾಗಿರುವ ಈ ಈ ರೈಲುಗಳು ಭಿನ್ನವಾಗಿ ಗುರುತಿಸಿಕೊಳ್ಳಲು ಕಾರಣ, ಇದಕ್ಕಿರುವ ಗಾಜಿನ ತಳಗಳು. ಮೂರು ಕಡೆ ಗಾಜಿನ ಫಲಕಗಳನ್ನು ಹೊಂದಿರುವ ಈ ರೈಲಿನ ಒಳಗೆ ಇರುವವರು ಈ ರೈಲು ಹಾದು ಹೋಗುವಲ್ಲೆಲ್ಲಾ ದೂರದವರೆಗೂ ವಿಹಂಗಮ ನೋಟವನ್ನು ಸವಿಯಬಹುದು.


ಈ ವಿಶೇಷ ರೈಲು ಇತ್ತೀಚೆಗೆ ಚೀನಾದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ರೈಲು ಕಾರ್ಯ ನಿರ್ವಹಿಸಲು ಆರಂಭಿಸಿದ ಕ್ಷಣದಿಂದ ಜನ ಈ ರೈಲು ಹತ್ತಲು ಮುಗಿ ಬೀಳುತ್ತಿದ್ದಾರೆ. ಜನರ ಕುತೂಹಲ ಎಷ್ಟಿದೆಯೆಂದರೆ ಸಿಜಿಟಿಎನ್, ಈ ಸ್ಕೈ ರೈಲಿನ ವಿಶೇಷತೆಗಳ ಕುರಿತಾದ ವೀಡಿಯೋವನ್ನು ಹಂಚಿಕೊಂಡಿದ್ದು, ಯೂಟ್ಯೂಬಿನಲ್ಲಿ 58,000ಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಪಟ್ಟಿದೆ. ಚೀನಾದವರು ಒಮ್ಮೆಯಾದರೂ ಈ ರೈಲು ಹತ್ತುವ ಬಯಕೆ ವ್ಯಕ್ತ ಪಡಿಸಿದ್ದಾರೆ.

ರೈಲಿನ ವಿಶೇಷತೆಗಳು


ಚೀನಾದ ದಯಿ-ಏರ್ ರೈಲ್ ಯೋಜನೆಯ ಭಾಗವಾದ ಈ ರೈಲು, ತಳದಿಂದ ಗ್ಲಾಸ್ ವಿಂಡೋಸ್ ಹೊಂದಿದೆ. ನೆಲದಿಂದ ಸೀಲಿಂಗ್ ಗಾಜಿನ ಕಿಟಕಿಗಳಿವೆ. ರೈಲಿನ ಪ್ರಯಾಣಿಕರಿಗೆ ಭೂದೃಶ್ಯದ ವಿಸ್ತಾರವಾದ 270 ಡಿಗ್ರಿ ನೋಟವನ್ನು ನೀಡುತ್ತದೆ. ಅಲ್ಲದೇ ಅನೇಕರಿಗೆ ಕೆಳಗೆ ನೋಡಿದರೆ ಭಯ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ.

ಈ ವಿನ್ಯಾಸವೂ ಈಗಾಗಲೇ ಚೀನಾದಲ್ಲಿರುವ ಗಾಜಿನ ಸೇತುವೆಯನ್ನು ನೆನಪಿಸುತ್ತದೆ. ಇಂಟರೆಸ್ಟಿಂಗ್ ಎಂದರೆ ಚೀನಾದ ಪ್ರಸಿದ್ಧ ಪ್ರಾಣಿ ಪಾಂಡಾ ಥೀಮ್ ಬಳಸಿಕೊಂಡು ಈ ಇಡಿಯ ರೈಲನ್ನು ವಿನ್ಯಾಸಗೊಳಿಸಲಾಗಿದೆ.

ನೀವುಇದನ್ನುಇಷ್ಟಪಡಬಹುದು: ಬೆಂಗಳೂರಿನಲ್ಲಿ ಭಾರತದ ಪ್ರಥಮ ಸುರಂಗ ಅಕ್ವೇರಿಯಂ

China Glass Bottomed Sky Train


ಈ ರೈಲು 2.5 ಟನ್ ತೂಕವಿದ್ದು, ಮಾಮೂಲಿ ರೈಲಿಗಿಂತ 0.5 ಟನ್ ಕಡಿಮೆ ತೂಕವನ್ನು ಹೊಂದಿದೆ. ಇದರಲ್ಲಿ ಗರಿಷ್ಠ 120 ಜನರು ಪ್ರಯಾಣಿಸಬಹುದು. ಮತ್ತು ಇದು ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ. ಈ ರೈಲು ಲಿಥಿಯಂ ಬ್ಯಾಟರಿ ಪವರ್ ಪ್ಯಾಕಿನಿಂದ ಚಾಲನೆ ಹೊಂದುತ್ತದೆ. ಇದು ಸುರಂಗ ಮಾರ್ಗ ಅಥವಾ ಲಘು ರೈಲಿಗಿಂತ ಭಿನ್ನವಾಗಿದೆ.

ದಯಿ ಏರ್ ರೈಲ್ ಯೋಜನೆಯನ್ನು ಝೋಗ್ಟಾಂಗ್ ಏರ್ ರೈಲ್ ಟೆಕ್ನಾಲಜಿ ಅಭಿವೃದ್ಧಿಪಡಿಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ನಿರ್ಮಾಣವನ್ನು ಪೂರ್ಣ ಮುಗಿಸುವ ಗುರಿಯನ್ನು ಹೊಂದಿದ್ದಾರೆ. ಇದು ಮುಂದೆ ಮುಖ್ಯ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸಲಿದೆ.


ಪ್ರತಿಯೊಂದು ದೇಶ ಅಥವಾ ರಾಜ್ಯಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವುದು ಅನಿವಾರ್ಯ. ಅಂಥದ್ದರಲ್ಲಿ ಚೀನಾ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸಾರಿಗೆ ಅವಶ್ಯಕತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ಈ ಅಪರೂಪದ ಟ್ರೈನ್ ಅನ್ನು ಸಿದ್ಧಗೊಳಿಸಿದೆ. ಹೊಸ ಆವಿಷ್ಕಾರವನ್ನು ಜಗತ್ತು ಬಿಟ್ಟ ಕಣ್ಣಿನಿಂದ ನೋಡುವಂತೆ ಮಾಡಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button