ವಿಂಗಡಿಸದವಿಸ್ಮಯ ವಿಶ್ವ

ಹಿಮಾಚಲ ಪ್ರದೇಶದಲ್ಲಿ ಮುನಿದ ವರುಣ, ನದಿಯಂತಾದ ರಸ್ತೆಗಳು

ಹಿಮಾಚಲ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ವರುಣರಾಯನ ಮುನಿಸಿಗೆ ಹಿಮಾಚಲ ಪ್ರದೇಶ ಅಕ್ಷರಶಃ ನಲುಗಿ ಹೋದಂತೆ ಕಾಣುತ್ತಿದೆ. ಧಾರಾಕಾರ ಮಳೆಗೆ ಜಲ ಸಮಾಧಿಯಂತೆ ಆಗಿದೆ ಹಿಮಾಚಲ ಪ್ರದೇಶದ ರಸ್ತೆಗಳು. ಮಳೆರಾಯನ ಅಬ್ಬರದ ಪರಿಣಾಮ ಹಿಮಾಚಲ ಪ್ರದೇಶದ ಧರ್ಮಶಾಲಾದ ರಾಷ್ಟೀಯ ಹೆದ್ದಾರಿಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.

  • ನವ್ಯಶ್ರೀ ಶೆಟ್ಟಿ

ಪ್ರಕೃತಿಯ ನಡೆಯೇ ಒಂದು ರೀತಿ ಸೋಜಿಗ. ಅದೊಂದು ನಿಗೂಢ ನಡೆ ಇದ್ದಂತೆ. ಪ್ರಕೃತಿಯಲ್ಲಿ ಯಾವಾಗ ಏನು ಬದಲಾವಣೆ ಆಗಬಹುದು ಎಂದು ಊಹಿಸಲು ಅಸಾಧ್ಯ. ಅಂತಹ ನಿಗೂಡ ನಡೆಗಳಲ್ಲಿ ವರುಣ ರಾಯನ ಆಗಮನ ಕೂಡ ಒಂದು.

ಕೆಲವೊಮ್ಮೆ ಅನಾಹುತಗಳನ್ನು ಸೃಷ್ಠಿಸಿ ಬಿಡುತ್ತದೆ. ಪ್ರವಾಹಗಳಿಗೆ ವರುಣ ರಾಯನ ಆರ್ಭಟ ಕಾರಣವಾಗಿ ಬಿಡುತ್ತದೆ. ಇದೀಗ ಅಂತಹದೇ ವರುಣನ ಮುನಿಸಿಗೆ ಹಿಮಾಚಲ ಪ್ರದೇಶದ (Himachala pradesh) ಧರ್ಮಶಾಲಾ(Dharmashala) ಸಾಕ್ಷಿಯಾಗಿದೆ.

Himachal Pradesh Dharmashala Monsoon Rain Indian Meterological Department

ಧರ್ಮಶಾಲಾದಲ್ಲಿ ಪ್ರವಾಹ ಸ್ಥಿತಿ

ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಿಮಾಚಲ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ . ರಸ್ತೆಗಳು ನದಿಯಂತಾಗಿದೆ ,ನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ. ಹಿಮಾಚಲ ಪ್ರದೇಶದ ಸುಂದರ ತಾಣ ಧರ್ಮಶಾಲದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ನದಿಗಳು ಉಕ್ಕಿ ಹರಿಯುತ್ತಿದೆ.

ಸಾರ್ವಜನಿಕ ಸೊತ್ತುಗಳು ಕೂಡ ವರುಣ ರಾಯನ ಅವಕೃಪೆಯಿಂದ ಹಾನಿಗೀಡಾಗಿದೆ. ಭಾರತೀಯ ಹವಾಮಾನ ಇಲಾಖೆ (India meteorological department) ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಇದೇ ರೀತಿ ವರುಣ ಅಬ್ಬರಿಸಲಿದ್ದಾನೆ ಎಂದು ಮುನ್ಸೂಚನೆ ನೀಡಿ , ಸಕಲ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ.

ಸಾರ್ವಜನಿಕ ಸೊತ್ತುಗಳು ಕೂಡ ವರುಣ ರಾಯನ ಅವಕೃಪೆಯಿಂದ ಹಾನಿಗೀಡಾಗಿದೆ. ಭಾರತೀಯ ಹವಾಮಾನ ಇಲಾಖೆ (India meteorological department) ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಇದೇ ರೀತಿ ವರುಣ ಅಬ್ಬರಿಸಲಿದ್ದಾನೆ ಎಂದು ಮುನ್ಸೂಚನೆ ನೀಡಿ , ಸಕಲ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ.

ಹವಾಮಾನ ಇಲಾಖೆ ಜುಲೈ 12-13ರಂದು ಇಡೀ ರಾಜ್ಯದಲ್ಲಿ ಅರೇಂಜ್ ಅಲರ್ಟ್ ಘೋಷಿಸಿತ್ತು. ಆದರೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆ ಜುಲೈ 14 ಮತ್ತು 15ರ ತನಕ ಯೆಲ್ಲೊ ಅಲರ್ಟ್ ಘೋಷಿಸಿದೆ ಹವಾಮಾನ ಇಲಾಖೆ.

ನೀವುಇದನ್ನುಇಷ್ಟಪಡಬಹುದು: ಕರ್ಫ್ಯೂ ಸಡಿಲಗೊಂಡ ಬೆನ್ನಲ್ಲೇ ಹಿಮಾಚಲ ಪ್ರದೇಶಕ್ಕೆ ಹರಿದು ಬಂತು ಜನಸಾಗರ

ರಾಷ್ಟೀಯ ಹೆದ್ದಾರಿಗಳು ಬಂದ್

ಧರ್ಮಶಾಲಾದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ ಧರ್ಮಶಾಲಾ ಸಂಪರ್ಕಿಸುವ ರಾಷ್ಟೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ (shimla) ಜಲಮಯವಾಗಿದೆ. ಶಿಮ್ಲಾ ಜಿಲ್ಲೆಯ ರಾಂಪುರದ(Rampura) ಝಕ್ರಿ (jhakri) ಪ್ರದೇಶದ ರಸ್ತೆಗಳ ತುಂಬೆಲ್ಲಾ ಅತಿಯಾದ ಮಳೆಯಿಂದ ನೀರುಮಯವಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಆಗಿದೆ. ಪ್ರವಾಸಿಗರು ಸಂಕಷ್ಟಕ್ಕೀಡಾಗಿದ್ದಾರೆ.

Himachal Pradesh Dharmashala Monsoon Rain Indian Meterological Department

ಹಿಮಾಚಲ ಪ್ರದೇಶದ ಮಳೆಹಾನಿ ಅಲ್ಲಿನ ಜನರ ನಿತ್ಯದ ಬದುಕಿನ ವ್ಯತ್ಯಾಸಕ್ಕೆ ಕಾರಣವಾಗಿದೆ. ಒಂದು ವರದಿಯ ಪ್ರಕಾರ ಧರ್ಮಶಾಲದಲ್ಲಿ ದಾಖಲೆಯ 3000ಮಿಮೀ ಮಳೆಯಾಗಿದೆ.

ಮಾನ್ಸೂನ್ ಮಳೆಯ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಧರ್ಮಶಾಲಾ , ಭಾರತದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದು. ನಿತ್ಯದ ಅದೆಷ್ಟೊ ಜನ ಧರ್ಮಶಾಲದ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಪ್ರವಾಹ ಎದುರಿಸುತ್ತಿರುವ ಧರ್ಮಶಾಲಾದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪ್ರವಾಸಿಗರನ್ನು ಆಕರ್ಷಿಸುವ ತಾಣ ಜಲಾವೃತ ಆಗಿ , ಪ್ರವಾಹ ಸ್ಥಿತಿ ನಿರ್ಮಾಣವಾಗಿ , ಅಲ್ಲಿನ ರಾಷ್ಟೀಯ ಹೆದ್ದಾರಿಗಳಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Himachal Pradesh Dharmashala Monsoon Rain Indian Meterological Department

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button