ವಿಂಗಡಿಸದ

ಅ.16 ನವೆಂಬರ 2023: ನವರಾತ್ರಿಯ ಎರಡನೇ ದಿನ “ಬ್ರಹ್ಮಚಾರಿಣಿ” ಆರಾಧನೆ

ನವರಾತ್ರಿಯ ಎರಡನೇ ದಿನದ ತಾಯಿ ಬ್ರಹ್ಮಚಾರಿಣಿಯ ವೈಶಿಷ್ಟ್ಯತೆ ಮತ್ತು ಇಂದು ನಾಡಹಬ್ಬ ಮೈಸೂರು ದಸರಾ 2023 ಆಯೋಜಿತವಾದ ಕಾರ್ಯಕ್ರಮಗಳ ವಿವರ ಇಲ್ಲಿದೆ.

• ಉಜ್ವಲಾ ವಿ.ಯು

ತಾಯಿ ಬ್ರಹ್ಮಚಾರಿಣಿಯ ಹಿನ್ನಲೆ ಮತ್ತು ಪೂಜಾಫಲ:

ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ನವರಾತ್ರಿಯ ಎರಡನೇ ದಿನ. ಈ ದಿನದಂದು ಶಕ್ತಿ ದೇವಿ “ಬ್ರಹ್ಮಚಾರಿಣಿ”ಯನ್ನು ಆರಾಧಿಸಲಾಗುತ್ತದೆ.

Navaratri Day 2: Maa Brahmacharini

ಬ್ರಹ್ಮಚಾರಿಣಿ ತಾಯಿಯು ತಪಸ್ಸಿನ ಸಂಕೇತಳಾಗಿದ್ದಾಳೆ. ಅವಳ ಒಂದು ಕೈಯಲ್ಲಿ ಜಪಮಾಲೆಯನ್ನು, ಮತ್ತೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ತಾಯಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯನ್ನು ಹೊಂದಿ ಸದ್ಗುಣಗಳನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.

ಪರ್ವತ ರಾಜನ ಪುತ್ರಿಯಾದ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಆಚರಿಸುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ಪಾರ್ವತಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂದಿತು.

ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುವಂತದ್ದು ಎಂಬ ಪ್ರತೀತಿ ಇದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಸದ್ಗುಣಗಳು ನೀಡುವಳು ಹಾಗೂ ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳನ್ನು ನಿವಾರಿಸಿ ಮನಸ್ಸಿಗೆ ಶಾಂತಿಯನ್ನು ಒದಗಿಸುತ್ತಾಳೆ.

ಮೈಸೂರು ದಸರಾ 2023ರ ಎರಡನೇ ದಿನ ಆಯೋಜಿತವಾದ ಕಾರ್ಯಕ್ರಮಗಳು:

ಮೈಸೂರು ದಸರಾ 2023ರ ಎರಡನೇ ದಸರಾ ಉತ್ಸವವಾದ ಇಂದು ಬೆಳಗ್ಗೆ 6:30ಕ್ಕೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಯೋಗದ ಶಿವ ನಮಸ್ಕಾರ ಕಾರ್ಯಕ್ರಮ ಜರುಗಿತು. ಶಾಸಕ ದರ್ಶನ್ ಧ್ರುವನಾರಾಯಣ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜೆ.ಕೆ.ಗ್ರೌಂಡ್​ನಲ್ಲಿ ಬೆಳಗ್ಗೆ 11 ಗಂಟೆಗೆ ಮಹಿಳಾ ದಸರಾ-2023ಕ್ಕೆ ಮತ್ತು ವಸ್ತು ಪ್ರದರ್ಶನ & ಮಾರಾಟ ಮೇಳಕ್ಕೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು.

Mysore Dasara 2023 2nd day programs

ಅರಮನೆ ವೇದಿಕೆಯಲ್ಲಿ ಇಂದು ಚಿಕ್ಕಬಳ್ಳಾಪುರದ ವಿದ್ವಾನ್ ಡಾ. ದುಂಡಯ್ಯ ಪೂಜೇರ ಅವರಿಂದ “ತಾಳ-ಗಾನ-ಯಾನ”. ಅಂತಾರಾಷ್ಟ್ರೀಯ ಕಥಕ್ ಕಲಾವಿದರಾದ ಹರಿ ಮತ್ತು ಚೇತನಾ ಅವರಿಂದ ಕಥಕ್ ಸಂಭ್ರಮ. ಬೆಂಗಳೂರಿನ ಆಯನಾ ಡ್ಯಾನ್ಸ್ ಕಂಪನಿಯಿಂದ ಭಾರತೀಯ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button