ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಅ.16 ರಂದು ಕೇದಾರ, ಬದರಿ ಇನ್ನಿತರ ಪ್ರದೇಶಗಳಲ್ಲಿ ಚಳಿಗಾಲದ ಮೊದಲ ಹಿಮಪಾತ

ಬದರಿನಾಥ ಮತ್ತು ಕೇದಾರನಾಥ ಇನ್ನಿತರ ಪ್ರದೇಶಗಳು ಈ ಋತುವಿನ ಮೊದಲ ಹಿಮಪಾತವನ್ನು ಸೋಮವಾರ ಅನುಭವಿಸಿದ್ದು, ಪ್ರವಾಸಿಗರಿಗೆ ಸಂತೋಷ ಮತ್ತು ಉತ್ಸಾಹವನ್ನು ತಂದಿದೆ.

ಉಜ್ವಲಾ ವಿ.ಯು.

ಹಿಮಪಾತದ ಕಾರಣದಿಂದ ಕೇದಾರನಾಥ ಕಣಿವೆಯ ಸುತ್ತಲೂ ಹಿಮ ಆವರಿಸಿದೆ. ಕಾಶ್ಮೀರದ ಅತಿ ಎತ್ತರದ ಪ್ರದೇಶಗಳಲ್ಲೂ ಹಿಮಪಾತವಾಗಿದ್ದು, ತಾಪಮಾನದಲ್ಲಿ ಇಳಿಕೆ ಕಂಡು ಬಂದಿದೆ.

ಬ್ಯಾಂಗಸ್,ನೌಗಾಮ್,ಕುಪ್ವಾರ ಇನ್ನಿತರ ಪ್ರದೇಶಗಳಹವಾಮಾನದ ಬದಲಾವಣೆಗೆ ಈ ಹಿಮಪಾತವು ಕಾರಣವಾಗಿದೆ. ಈ ಪ್ರದೇಶಗಳಲ್ಲಿ 1-2 ಇಂಚಿನಷ್ಟು ದೊಡ್ಡ ತಾಜಾ ಹಿಮಪಾತವು ಕಂಡುಬಂದಿದೆ.

Snowfall in Kedarnath temple

ಉತ್ತರಾಖಂಡ್‌ನ ಪಿಥೋರಗಢ್, ಕಾಲಾ ಪಾನಿ ಮತ್ತು ಓಂ ಪರ್ವತಗಳು ಹಿಮದಿಂದ ಆವೃತವಾಗಿ ಸುಂದರ ಭೂದೃಶ್ಯವನ್ನು ಸೃಷ್ಟಿಸಿದೆ. ನಿರಂತರ ಮಳೆ ಮತ್ತು ಹಿಮಪಾತವು ಈ ಪ್ರದೇಶಗಳಲ್ಲಿನ ಹಿಮದ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗೂ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳು ಸಹ ಸೋಮವಾರದಂದು ತಾಜಾ ಹಿಮಪಾತವನ್ನು ಅನುಭವಿಸಿದವು, ಇದು ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. ರಸ್ತೆಗಳು ಮತ್ತು ಮನೆಗಳು ಹಿಮದ ಹೊದಿಕೆಯಿಂದ ಆವೃತವಾಗಿ, ಕಾಶ್ಮೀರದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿ ರೂಪುಗೊಂಡವು.

Snowfall in Kashmir

ಸೋಮವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಹಿಮಪಾತ ಆರಂಭವಾಗಿದ್ದು, ಬನಿಹಾಲ್ ಬಳಿಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಡೆಗಳು ಬಿದ್ದಿವೆ. ಅದೇ ರೀತಿ ಮೊಘಲ್ ರಸ್ತೆಯಲ್ಲಿ ಕೂಡ ಹಿಮಪಾತದಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. 

ಕೇದಾರ, ಬದರಿನಾಥ ದೇವಾಲಯಗಳು ಮುಚ್ಚುವಿಕೆಯ ದಿನಾಂಕ ನಿಗದಿ:

ಚಳಿಗಾಲದ ಸಮಯದಲ್ಲಿ ಅತಿಯಾದ ಹಿಮಪಾತವಾಗುವ ಕಾರಣ ಉತ್ತರಾಖಂಡದ ದೇವಾಲಯಗಳನ್ನು ಪ್ರತಿವರ್ಷ ಕೆಲವು ತಿಂಗಳುಗಳ ಕಾಲ ಮುಚ್ಚಲಾಗುವುದು.

Snowfall in Badarinath temple

ಅಂತೆಯೇ ಈ ವರ್ಷ ಶ್ರೀ ಬದರಿನಾಥ್ ಕೇದಾರನಾಥ ದೇವಾಲಯ ಸಮಿತಿಯ ಅಧಿಕೃತ ಹೇಳಿಕೆಯ ಪ್ರಕಾರ, ಅಕ್ಟೋಬರ್ 24 ವಿಜಯ ದಶಮಿಯಂದು ಶ್ರೀ ಬದರಿನಾಥ ದೇವಾಲಯವನ್ನು, ನವೆಂಬರ 14 ರಂದು ಶ್ರೀ ಕೇದಾರನಾಥ ದೇವಾಲಯ ಮತ್ತು ಶ್ರೀ ಗಂಗೋತ್ರಿ ಧಾಮವನ್ನು, ನವೆಂಬರ 15 ರಂದು ಶ್ರೀ ಯಮುನೋತ್ರಿ ಧಾಮವನ್ನು ಮುಚ್ಚಲಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button