ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದಸ್ಮರಣೀಯ ಜಾಗ

ಹೊಸತನದತ್ತ ಹೊರಳಿದ ದೆಹಲಿಯ ಚಾಂದನಿ ಚೌಕ್ ಮಾರುಕಟ್ಟೆ

ದೆಹಲಿಯ ಪುರಾತನ ಮಾರುಕಟ್ಟೆ ‘ಚಾಂದನಿ ಚೌಕ್’ ಇದೀಗ ಹೊಸ ರೂಪವನ್ನು ಪಡೆದುಕೊಂಡಿದೆ. ಅದರ ಈ ಹೊಸ ರೂಪ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಎಲ್ಲಾ ಸಾಧ್ಯತೆಗಳಿವೆ.

  • ಮಧುರಾ ಎಲ್ ಭಟ್

“ಚಾಂದನಿ ಚೌಕ್” ಅದೊಂದು ಮಾರುಕಟ್ಟೆ ಎನ್ನುವುದಕ್ಕಿಂತ ಪ್ರವಾಸಿಗರ ಕಣ್ಣಿಗೆ ಹಬ್ಬ ಎನ್ನಬಹುದು. ಇದು ದೆಹಲಿಯ ಅತ್ಯಂತ ಹಳೆಯ ಮಾರುಕಟ್ಟೆಯೂ ಹೌದು. ಸಂಬಾರ ಪದಾರ್ಥಗಳು, ಒಣ ಹಣ್ಣುಗಳು, ಬೆಳ್ಳಿಯ ಆಭರಣಗಳು ಮತ್ತು ಸೀರೆ; ಚಾಂದನಿ ಚೌಕ್ ವಿಶೇಷತೆ.

ಇದೀಗ ದೆಹಲಿಯ ಈ ಪುರಾತನ ಮಾರುಕಟ್ಟೆ ನವೀನ ರೂಪವನ್ನು ಪಡೆದುಕೊಂಡಿದೆ. ಒಂದಿಷ್ಟು ಹೊಸ ಬದಲಾವಣೆ ಮತ್ತು ಅದೇ ಹಳೆಯ ಮಾರಿಯುಕತ್ತೆ ಘಮಲಿನೊಂದಿಗೆ ಚಾಂದನಿ ಚೌಕ್ ನಾವೀನ್ಯತೆಯೊಂದಿಗೆ ನಮ್ಮನ್ನು ಎದುರುಗೊಂಡಿದೆ.

Chandni Chowk Delhi’s Oldest Market

ಚಾಂದನಿ ಚೌಕ್ ರೂಪವನ್ನು ಬದಲಾಯಿಸುವ ಯೋಜನೆ ಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಲೇ ಇತ್ತು. ಈ ಯೋಜನೆಯ ಕಲ್ಪನೆಯು ಮೊದಲು 2004 ರಲ್ಲಿ ಬಂದಿತ್ತು ನಂತರ ೧ ಡಿಸೆಂಬರ್ 2018ರಿಂದ ಪುನರಾಭಿವೃದ್ಧಿಯಡಿಯಲ್ಲಿ, 1.3 ಕಿ.ಮೀ ಉದ್ದವನ್ನು 2020 ರ ನವೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು, ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿತ್ತು.

ಇನ್ನು ಹಳೆಯ ಚಾಂದನಿ ಚೌಕ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಚಾಂದನಿ ಚೌಕ್, ಮಾರುಕಟ್ಟೆ ಸ್ಥಳವಾಗಿದೆ ಮತ್ತು ದೆಹಲಿಯ ಹಳೆಯ ಹೆಸರಾದ ಶಹಜಹಾನಾಬಾದ್ನ ಕೇಂದ್ರಬಿಂದುವಾಗಿದೆ. ಈ ಚಾಂದನಿ ಚೌಕ್ ನ ಮಧ್ಯದಲ್ಲಿ ಹರಿಯುವ ಕಾಲುವೆಯ ಸ್ವಚ್ಛಂದ ನೀರು ಚಂದ್ರನ ಬೆಳಕನ್ನು ಪ್ರತಿಬಿಂಬಿಸುವುದರಿಂದ ಈ ಮಾರುಕಟ್ಟೆಗೆ ಚಾಂದನಿ ಚೌಕ್ ಎಂಬ ಹೆಸರನ್ನು ಇಡಲಾಯಿತು ಎಂದು ಹೇಳಲಾಗುತ್ತದೆ. ಇನ್ನೂ ಕೆಂಪು ಕೋಟೆಯಿಂದ ಫತೇಪುರಿ ಮಸೀದಿಯವರೆಗೆ 1.3 ಕಿ.ಮೀ.ನಷ್ಟು ವಿಸ್ತಾರದಲ್ಲಿ ಅಸಂಖ್ಯಾತ ಬದಲಾವಣೆಗಳು ಉಂಟಾಗಿದೆ.

Chandni Chowk Delhi’s Oldest Market

ಪ್ರಸ್ತುತ ಚಾಂದನಿ ಚೌಕ್, 99 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡ ಈ ನವೀಕರಣ ಯೋಜನೆಯು ಐತಿಹಾಸಿಕ ತಾಣದ ಸೌಂದರ್ಯವನ್ನು ಹೆಚ್ಚಿಸಲು ಎಲ್ಲ ತರಹದ ಕಲ್ಲುಗಳನ್ನು ಬಳಸಿಕೊಂಡಿದೆ. ಕೆಂಪು ಕೋಟೆ ಮತ್ತು ಫತೇಪುರಿ ಮಸೀದಿಯ ನಡುವಿನ 1.3 ಕಿ.ಮೀ ಉದ್ದವನ್ನು ಚಾಂದನಿ ಚೌಕ್ ಮಾರುಕಟ್ಟೆಯ ಎರಡೂ ಕಡೆಗಳಲ್ಲಿಯೂ ಪಾದಚಾರಿಗಳು ಮಾತ್ರ ನಡೆಯುವ ಹಾಗೆ ಮಾಡುವ ಮೂಲಕ, ವಿಶಾಲವಾದ ನಡಿಗೆ ಮಾರ್ಗಗಳು, ನೀರಿನ ಎಟಿಎಂಗಳು, ಶೌಚಾಲಯ ಸಂಕೀರ್ಣಗಳು ಮತ್ತು ಮೊಘಲ್ ಯುಗವನ್ನು ಅನುಕರಿಸುವ ಬೀದಿ ಪೀಠೋಪಕರಣಗಳನ್ನು ಒದಗಿಸುವ ಯೋಜನೆಗೆ ಬಳಸಿಕೊಳ್ಳಲಾಗಿದೆ.

ಈ ಚಾಂದಿನಿ ಚೌಕ್ ಗೆ ಸಂಬಂಧಿಸಿದ ಆಡಳಿತ ವರ್ಗ ನೋಡುಗರ ಗಮನವನ್ನು ತನ್ನತ್ತ ಸೆಳೆಯಲು ಈ ಮಾರುಕಟ್ಟೆಯನ್ನು ಹಸಿರುಮಯವಾಗಿ ಮತ್ತು ಸುಂದರವಾಗಿ ಮಾಡಿದ್ದು ಈ ಎಲ್ಲಾ ರೀತಿಯ ಹೊಸತನವನ್ನು ತಂದಿದೆ.

ನೀವುಇದನ್ನುಇಷ್ಟಪಡಬಹುದು: ಚಿತ್ರದುರ್ಗದ ಪುರಾತನ ಪಟ್ಟಣ ಅಶೋಕ ಸಿದ್ಧಾಪುರ

ಇನ್ನು ದೆಹಲಿಗೆ ಬರುವ ಪ್ರಯಾಣಿಕರು ಈ ಚಾಂದಿನಿ ಚೌಕದಲ್ಲಿ ಏನೆಲ್ಲಾ ನೋಡಬಹುದು ಮತ್ತು ಇದಕ್ಕಿರುವ ಇತಿ ಮಿತಿಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ಈ ಚಾಂದಿನಿ ಚೌಕದ ಪುನರಾಭಿವೃದ್ಧಿಯನ್ನು ಪಾರಂಪರಿಕ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಇದರ ಮುಖ್ಯ ಉದ್ದೇಶ ಮಾರುಕಟ್ಟೆಯನ್ನು ಉತ್ತೇಜಿಸುವುದು ಮತ್ತು ಉಚಿತ ಪಾದಚಾರಿ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡುವುದಾಗಿದೆ.

ಇದು ತನ್ನ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವಾಗ ಸ್ಥಳಗಳ ಸುತ್ತಲಿನ ಹಸಿರನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡಿದೆ. ಈ ಮಾರುಕಟ್ಟೆಯನ್ನು ವಾಹನ ಮುಕ್ತವಲಯವಾಗಿ ಪರಿವರ್ತಿಸಲಾಗಿದೆ. ಹಾಗೂ ಮೋಟಾರು ರಹಿತ ವಾಹನವನ್ನು ಹಗಲಿನಲ್ಲಿ ತರಲು ಅನುಮತಿ ನೀಡಿದೆ. ಈ ಮೋಟಾರು ವಾಹನವನ್ನು ರಾತ್ರಿ 9ರಿಂದ ಬೆಳಿಗ್ಗೆ 9ರವರೆಗೆ ಈ ಜಾಗದಲ್ಲಿ ತರಬಹುದಾಗಿದೆ.

Chandni Chowk Delhi’s Oldest Market

ಅಲ್ಲದೇ ಸಂದರ್ಶಕರಿಗಾಗಿ ಆಸನ ಸ್ಥಳವನ್ನು ಸಹ ನಿರ್ಮಾಣ ಮಾಡಿದೆ. ಮೊಘಲ್ ಯುಗದ ವಾಸ್ತುಶಿಲ್ಪ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕೆಲಸಗಳನ್ನು ಕೆಂಪು ಮರಳುಗಲ್ಲಿನಲ್ಲಿ ಮಾಡಲಾಗಿದೆ. ಒಳಚರಂಡಿ ಮಾರ್ಗಗಳನ್ನು ಮರುವಿನ್ಯಾಸಗೊಳಿಸಲಾಗಿದೆ.

ಹೀಗೆ ದೆಹಲಿ ಚಾಂದನಿ ಚೌಕ್ ಹಲವಾರು ಬದಲಾವಣೆಗಳನ್ನು ಒಳಗೊಂಡಿದೆ. ನೀವೇನಾದರೂ ದೆಹಲಿಗೆ ಭೇಟಿ ನೀಡಿದ್ದಲ್ಲಿ ಈ ಸುಂದರ ತಾಣಕ್ಕೂ ಭೇಟಿ ನೀಡಿ ಇದರ ಸೌಂದರ್ಯವನ್ನು ಸವಿಯಬಹುದಾಗಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button