ದೂರ ತೀರ ಯಾನಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

ಭಾರತೀಯರ ಪ್ರವೇಶಕ್ಕೆ ಹೇರಿದ್ದ ನಿಯಮಗಳನ್ನು ತೆರವುಗೊಳಿಸಿದ ರಾಷ್ಟ್ರಗಳಿವು.

ವೈರಸ್ ಕಾರಣದಿಂದಾಗಿ ಹಲವು ಬಾರಿ ವಿದೇಶಿ ನಿಯಮಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಕೊರೋನಾ ರೂಪಾಂತರಿ ಡೆಲ್ಟಾ ಪ್ರಕರಣಗಳ ಏರಿಕೆಯಿಂದ ಕೆಲವೊಂದು ದೇಶ ಭಾರತೀಯರಿಗೆ ನಿಷೇಧವನ್ನು ಹೇರಿತ್ತು. ಆದರೆ ಇದರ ಬೆನ್ನಲ್ಲೇ, ಕೆಲವು ದೇಶಗಳು ಭಾರತೀಯರಿಗೆ ಪ್ರವೇಶಕ್ಕೆ ಮುಕ್ತವಾಗಿದೆ.

  • ನವ್ಯಶ್ರೀ ಶೆಟ್ಟಿ

ಕೋವಿಡ್ ಕಾರಣದಿಂದ ಕೆಲವು ದೇಶಗಳು ಭಾರತೀಯರಿಗೆ ನಿಷೇಧ ಹೇರಿತ್ತು. ಆದರೆ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ನೆಲೆಯಲ್ಲಿ ನಿಷೇಧವನ್ನು ಹಿಂಪಡೆದಿತ್ತು. ಭಾರತದಲ್ಲಿ ಕೋವಿಡ್- ೧೯ ರೂಪಾಂತರ ಡೆಲ್ಟಾ ಪ್ರಕರಣಗಳಲ್ಲಿ ಏರಿಕೆ ಆಗುತ್ತಿದ್ದರಿಂದ ಮತ್ತೆ ಕೆಲ ದೇಶಗಳು ಭಾರತೀಯರಿಗೆ ನಿಷೇಧವನ್ನು ಹೇರಿದೆ. ಅನೇಕ ದೇಶಗಳು ಭಾರತೀಯರ ಪ್ರಯಾಣಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ , ಕೆಲ ದೇಶಗಳು ಭಾರತೀಯರ ಪ್ರವೇಶಕ್ಕೆ ಮುಕ್ತವಾಗಿದೆ . ಆದರೆ ಕೆಲವೊಂದು ನಿಯಮಗಳನ್ನು. ವಿಧಿಸಿದೆ. ನೀವು ವಿದೇಶ ಪಯಣವನ್ನು ಮಾಡುವಾಗ ಅಲ್ಲಿನ ದೇಶಗಳು ವಿಧಿಸಿರುವ ನಿಯಮವನ್ನು ತಪ್ಪದೇ ಪಾಲಿಸಿ.

ಸ್ಪೇನ್

ಸ್ಪೇನ್ ದೇಶವು ತನ್ನ ದೇಶಕ್ಕೆ ಬರುವ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ. ಸ್ಪೇನ್ ದೇಶದಲ್ಲಿ ಸರಕಾರಿ ಕಚೇರಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ನೀವು ಸ್ಪೇನ್ ದೇಶಕ್ಕೆ ಹೊರಡಲು ವೀಸಾಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಬಹುದು. ಆದರೆ ಕಡ್ಡಾಯವಾಗಿ ಲಸಿಕೆ ಹಾಕಿಕೊಂಡಿರಬೇಕು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಪ್ರವೇಶವಿಲ್ಲ. ಕೋವಿಡ್ ಶೀಲ್ಡ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ. ನೀವು ವಿದೇಶಾಂಗ ಇಲಾಖೆಯ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಸ್ಪ್ಯಾನಿಷ್ ದೇಶಕ್ಕೆ ಹೋಗಲು ಅರ್ಜಿ ಸಲ್ಲಿಸಬಹುದು.

Spain Covid-19 Pandemic Indian Travellers Vaccination

ಬ್ರಿಟನ್

ಬ್ರಿಟನ್ ದೇಶವು ಭಾರತೀಯ ಪ್ರವಾಸಿಗರನ್ನು ಕೆಂಪು ಪಟ್ಟಿಗೆ ಸೇರಿಸಿತ್ತು. ಆದರೆ ಆಗಸ್ಟ್ ೮ರಿಂದ ಭಾರತೀಯ ಪ್ರವಾಸಿಗರನ್ನು ಕೆಂಪು ಪಟ್ಟಿಯಿಂದ ಮುಕ್ತಗೊಳಿಸಿದೆ. ಬ್ರಿಟನ್ ಇತ್ತೀಚಿನ ನಿಯಮಗಳ ಪ್ರಕಾರ ಭಾರತದಿಂದ ಯು.ಕೆ ದೇಶಕ್ಕೆ ಪ್ರಯಾಣಿಸುವವರು ೧೦ ದಿನ ಕ್ವಾರಂಟೈನ್ ಒಳಗಾಗಬೇಕು. ಅಲ್ಲಿನ ವಿದೇಶಾಂಗ ಇಲಾಖೆಯ ಪ್ರಕಾರ. ಲಸಿಕೆ ಪಡೆಯದ ಪ್ರಯಾಣಿಕರು ಮುಂದಿನ ಹತ್ತು ದಿನಗಳ ಕಾಲ ಕ್ವಾರಂಟೈನ್ ಒಳಗಾಗಬೇಕು. ಒಂದು ವೇಳೆ ನೀವು ಎರಡು ಡೋಸ್ ಲಸಿಕೆ ಪಡೆದಿದ್ದರೆ , ನಿಮಗೆ ಈ ನಿಯಮ ಅನ್ವಯವಾಗುವುದಿಲ್ಲ.

ನೀವು ಇದನ್ನು ಇಷ್ಟಪಡಬಹುದು: ಆಗಸ್ಟ್ 1ರಿಂದ ಪ್ರವಾಸಿಗರಿಗೆ ತೆರೆದುಕೊಂಡ ಸೌದಿ ಅರೇಬಿಯಾ

Britain Covid-19 Pandemic Indian Travellers Vaccination

ಅಮೆರಿಕಾ

ಅಮೆರಿಕಾ ದೇಶ ಕೂಡ ಭಾರತೀಯ ಪಯಣಿಗರಿಗೆ ಹೇರಿದ್ದ ನಿರ್ಬಂಧ ವನ್ನು ಸಡಿಲಗೊಳಿಸಿದೆ. ಇತ್ತೀಚಿನ ನಿಯಮಗಳ ಪ್ರಕಾರ ಲಸಿಕೆ ಪಡೆದ ಪ್ರಯಾಣಿಕರು ಷರತ್ತುಗಳಿಲ್ಲದೇ ಅಮೆರಿಕಾ ದೇಶಕ್ಕೆ ಪಯಣ ಬೆಳೆಸಬಹುದು. ಒಂದು ವೇಳೆ ಲಸಿಕೆಯನ್ನು ಪಡೆಯದ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗಳು ವಿಧಿಸಿರುವ ನಿಯಮಗಳನ್ನು ಪಾಲಿಸಬೇಕು.

USA Covid-19 Pandemic Indian Travellers Vaccination

ಯು. ಎ. ಇ

ಯು. ಎ.ಇ ದೇಶದ National Emergency and crisis management ಇಲಾಖೆಯು ತನ್ನ ದೇಶಕ್ಕೆ ಭಾರತೀಯ ಪ್ರಯಾಣಿಕರಿಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಭಾರತವೂ ಸೇರಿದಂತೆ ಇತರ ಎಲ್ಲಾ ದೇಶಗಳ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದಿದೆ . ಅಗಸ್ಟ್ ೫ ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಯು. ಎ.ಇ ಸರಕಾರ. ಎರಡು ಡೋಸ್ ಕೊರೋನಾ ಲಸಿಕೆ ಪಡೆದುಕೊಂಡವರು ಪಯಣ ಬೆಳೆಸಬಹುದು.

UAE Covid-19 Pandemic Indian Travellers Vaccination

ಅಬುದಾಭಿಯ ಇತಿಹಾದ್ ಏರ್‌ವೇಸ್ ತನ್ನ ವಿಮಾನಯಾನ ಸೇವೆಗಳನ್ನು ಅಗಸ್ಟ್ ೭ರಿಂದ ಹೊಸದಿಲ್ಲಿ, ಕೊಚ್ಚಿ, ಚೆನ್ನೈ, ತಿರುವನಂತಪುರಂ ಮತ್ತು ಬೆಂಗಳೂರಿನಿಂದ ಆರಂಭಿಸಿದೆ. ವೈರಸ್ ಪ್ರಕರಣಗಳ ಏರಿಳಿತ ಕಾರಣಗಳಿಂದಾಗಿ ಆಗಾಗ ವಿದೇಶಿ ನಿಯಮಗಳಲ್ಲಿ ಬದಲಾವಣೆಯಾಗುತ್ತಲೇ ಇದೆ . ನೀವು ವಿದೇಶಕ್ಕೆ ಹೊರಡುವಾಗ ನಿಯಮಗಳನ್ನು ಒಂದೊಮ್ಮೆ ಪರಿಶೀಲಿಸುವುದು ಒಳಿತು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.


Related Articles

Leave a Reply

Your email address will not be published. Required fields are marked *

Back to top button