ದೂರ ತೀರ ಯಾನವಿಂಗಡಿಸದ

ಆಗಸ್ಟ್ 1ರಿಂದ ಪ್ರವಾಸಿಗರಿಗೆ ತೆರೆದುಕೊಂಡ ಸೌದಿ ಅರೇಬಿಯಾ

ಇತ್ತೀಚೆಗಷ್ಟೇ ‘ಕೆಂಪು ಪಟ್ಟಿ’ಯಲ್ಲಿರುವ ದೇಶಗಳಿಗೆ ನಿಷೇಧ ಹೇರಿದ್ದ ಸೌದಿ ಅರೇಬಿಯಾ, ಇದೀಗ ಆ ಪಟ್ಟಿಯಲ್ಲಿರುವ ದೇಶಗಳನ್ನು ಹೊರತುಪಡಿಸಿ, ಉಳಿದ ದೇಶಗಳ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.

  • ಮಧುರಾ ಎಲ್ ಭಟ್

ಕೋವಿಡ್-19 ಪ್ರಕರಣಗಳು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಹೆಚ್ಚಾಗಿದ್ದ ಕಾರಣ ಕೆಲವು  ದೇಶಗಳಿಗೆ  ಪ್ರಯಾಣಿಸಲು ಸರ್ಕಾರ ನಿರ್ಬಂಧ ಹೇರಿತ್ತು. ಆದರೆ ಇದೀಗ ಹಲವಾರು ದೇಶಗಳಲ್ಲಿ ಕೋವಿಡ್  ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವುದರಿಂದ, ಸರ್ಕಾರಗಳು ಪ್ರವಾಸಿಗರಿಗೆ ಹಾಕಿದ್ದ  ಪ್ರಯಾಣ ನಿಷೇಧವನ್ನು ತೆಗೆದುಹಾಕುತ್ತಿದೆ. 

ಇದರ ಹಿನ್ನಲೆಯಲ್ಲಿ ಇದೀಗ  ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ತಮ್ಮ ಗಡಿಗಳನ್ನು ಆಗಸ್ಟ್ 1, 2021 ರಿಂದ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಪ್ರವಾಸಿಗರಿಗಾಗಿ ಮಾತ್ರ ತೆರೆಯುವುದಾಗಿ ಘೋಷಿಸಿದೆ.

Saudi Arabia Western Asia Ancient Heritage and Culture Hello World

ಸೌದಿಅರೇಬಿಯಾ ದೇಶಗಳಿಗೆ ಪ್ರವಾಸ ಹೋಗಲು ಇಚ್ಛಿಸುವವರಿಗೆ ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ, ಕೋವಿಡ್ -19  ಆರ್‌ಟಿ-ಪಿಸಿಆರ್ ನೆಗೆಟಿವ್‌ ವರದಿ ಮತ್ತು ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಒದಗಿಸಿದ ನಂತರ ಕೋವಿಡ್‌ ಲಸಿಕೆ ಪಡೆದ ಪ್ರವಾಸಿಗರು ಯಾವುದೇ ಕ್ವಾರಂಟೈನ್‌ ನಿರ್ಬಂಧಕ್ಕೆ ಒಳಗಾಗದೆ ಸೌದಿ ಅರೇಬಿಯಾಕ್ಕೆ ಆಗಮಿಸಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಇನ್ನೂ ಫೈಜರ್ (PFE.N), ಸ್ಟ್ರಾಜೆನೆಕಾ (AZN.L), ಮಾಡರ್ನಾ (MRNA.O) ಮತ್ತು ಜಾನ್ಸನ್ & ಜಾನ್ಸನ್ (JNJ.N) ನ ಕೋವಿಡ್‌ ಲಸಿಕೆ ಡೋಸ್‌ಗಳನ್ನು ಪಡೆದಿರುವ ಎಲ್ಲಾ ಪ್ರವಾಸಿಗರು ಸೌದಿ ಅರೇಬಿಯಾ ದೇಶಕ್ಕೆ ಪ್ರವೇಶ ಮಾಡಲು ಅನುಮತಿ  ನೀಡಿದೆ. ಆದರೆ ಸೌದಿ ಪ್ರೆಸ್ ಏಜೆನ್ಸಿ ವರದಿ ಪ್ರಕಾರ, ಪ್ರವಾಸೋದ್ಯಮ ಸಚಿವಾಲಯವು ವಿದೇಶಿ ಪ್ರವಾಸಿಗರಿಗೆ  ಪ್ರವೇಶಕ್ಕೆ ಅನುಮತಿ ನೀಡುತ್ತಿದೆ.  ಹಾಗೆಯೇ ಆಗಸ್ಟ್ 1 ರಿಂದ ಪ್ರವಾಸಿ ವೀಸಾ ಹೊಂದಿರುವವರಿಗೆ ಪ್ರವೇಶವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಸೌದಿ ಅರೇಬಿಯಾ ಪ್ರವಾಸಿ ವೀಸಾಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?

ಸೌದಿ ಅರೇಬಿಯಾ ದೇಶಕ್ಕೆ ಪ್ರಯಾಣಿಸಲು ಇಚ್ಛಿಸುವ ಪ್ರವಾಸಿಗರು  ಪ್ರವಾಸಿ ವೀಸಾ ಪಡೆಯಲು, ‘ಸ್ಪಿರಿಟ್ ಆಫ್ ಸೌದಿ’ (visitsaudi.com.) ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹೊಸ ಪೋರ್ಟಲ್ ಮೂಲಕ ಕೋವಿಡ್‌ ವ್ಯಾಕ್ಸಿನೇಷನ್ ಪ್ರಮಾಣ ಪಾತ್ರಗಳಿಗೆ  ಸಂಬಂಧಿಸಿದ ಡೇಟಾವನ್ನು ನೋಂದಾಯಿಸಬೇಕು.

ಇನ್ನು ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ, “ರಾಜ್ಯಕ್ಕೆ ಭೇಟಿ ನೀಡುವವರು ವ್ಯಾಕ್ಸಿನೇಷನ್ ಡೋಸೇಜ್‌ಗೆ ಸಂಬಂಧಿಸಿದ ತಮ್ಮ ಡೇಟಾವನ್ನು ಇದಕ್ಕಾಗಿಯೇ  ಮೀಸಲಾಗಿರುವ ಹೊಸ ಎಲೆಕ್ಟ್ರಾನಿಕ್‌ ಪೋರ್ಟಲ್ ‘muqeem.sa/#/vaccine-registration/home’, ನಲ್ಲಿ ‘ತವಕ್ಕಲ್ನಾ’ (‘Tawakkalna’) ಅಪ್ಲಿಕೇಶನ್ ಮೂಲಕ ಡೇಟಾ ನೋಂದಾಯಿಸಿಕೊಳ್ಳಬೇಕು. ಇದು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಕಡ್ಡಾಯವಾಗಿದೆ.

ನೀವುಇದನ್ನುಇಷ್ಟಪಡಬಹುದು: ಪ್ರವಾಸಿಗರಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ

Saudi Arabia Western Asia Ancient Heritage and Culture Hello World

ಇನ್ನು ಸೌದಿ ರಾಯಭಾರ ಕಚೇರಿಯು ಪ್ರವಾಸಿಗರ ಪ್ರವೇಶಕ್ಕೆ ಸಂಬಂಧಿಸಿದಂತೆ ನೀಡಿರುವ  ವಿವರಗಳ ಪ್ರಕಾರ, ಪ್ರವಾಸಿಗರು ಇ-ವೀಸಾವನ್ನು (ಆನ್‌ಲೈನ್) ಸೌದಿ ಕಮಿಷನ್ ಫಾರ್ ಟೂರಿಸಂ ಮತ್ತು ನ್ಯಾಷನಲ್ ಹೆರಿಟೇಜ್ ವೆಬ್‌ಸೈಟ್ ಮೂಲಕ ಪಡೆಯಬಹುದು. (Saudi Commission for Tourism and National Heritage website). ಪ್ರವಾಸಿಗರು ಸೌದಿ ಅರೇಬಿಯಾದ ಯಾವುದೇ ಬಂದರುಗಳಿಗೆ ಬಂದ ನಂತರ ವೀಸಾಗಳನ್ನು ವಿವಿಧ ದೇಶಗಳಲ್ಲಿ ಪಡೆಯಬಹುದು.

ಈ ಕೆಳಗಿನ ದೇಶಗಳ ಜನರು ಇ-ವೀಸಾ ಪಡೆಯಬಹುದು :

ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಸೌದಿ ರಾಯಭಾರಿ  ಕಚೇರಿಯ ಪ್ರಕಾರ, ಸುಮಾರು 50 ದೇಶಗಳ ಪ್ರಜೆಗಳು ಸೌದಿ ಅರೇಬಿಯಾಕ್ಕೆ ಹೋಗಲು  ಇ-ವೀಸಾ ಪಡೆಯಬಹುದಾಗಿದೆ. ಅವುಗಳೆಂದರೆ  ಬ್ರೂನಿ, ಚೀನಾ, ಹಾಂಗ್ ಕಾಂಗ್, ಸ್ಲೋವಾಕಿಯಾ, ತೈಪೆ, ಮಕಾವು, ಕಜಕಿಸ್ತಾನ್, ಮಲೇಶಿಯಾ, ಸಿಂಗಾಪುರ,ಆಸ್ಟ್ರಿಯಾ, ದಕ್ಷಿಣ ಕೊರಿಯಾ, ಜಪಾನ್,ಕೆನಡಾ ಆಸ್ಟ್ರೇಲಿಯಾ.

ಜೊತೆಗೆ ನ್ಯೂಜಿಲ್ಯಾಂಡ್, ಅಮೆರಿಕ, ಅಂಡೋರಾ,  ಬೆಲ್ಜಿಯಂ, ಬಲ್ಗೇರಿಯಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್‌, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಉಕ್ರೇನ್ ಮತ್ತು ಯುನೈಟೆಡ್ ಕಿಂಗ್‌ಡಮ್ ಈ ಎಲ್ಲಾ ದೇಶಗಳಾಗಿವೆ.

ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಆತಂಕ ಸೌದಿಅರೇಬಿಯಾ ದೇಶಕ್ಕೂ ಇರುವುದರಿಂದ ‘ಕೆಂಪು ಪಟ್ಟಿಯಲ್ಲಿರುವ ‘ ದೇಶದ ಪ್ರಯಾಣಿಕರಿಗೆ  ಮೂರು ವರ್ಷಗಳ ಪ್ರಯಾಣ ನಿಷೇಧವನ್ನು ವಿಧಿಸಲಿದೆ. ಭಾರತವೂ ಈ ಕೆಂಪು ಪಟ್ಟಿಯಲ್ಲಿದೆ.

Saudi Arabia Western Asia Ancient Heritage and Culture Hello World

ಕೊರೋನಾ ವೈರಸ್‌ ಮತ್ತು ಹೊಸ ರೂಪಾಂತರಗಳ ಹರಡುವಿಕೆಯನ್ನು ತಡೆಯುವುದಕ್ಕಾಗಿ ಕೆಲವು  ಪ್ರಯತ್ನಗಳನ್ನೂ  ಮಾಡುತ್ತಿದೆ. ಹಾಗಾಗಿ ಸೌದಿ ಅರೇಬಿಯಾ ದೇಶವು ಹಾಕಿರುವ  ಕೋವಿಡ್‌ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ದ ಕಠಿಣವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಯಾರಾದರೂ ನಿಷೇಧಿತ ದೇಶಕ್ಕೆ ಹೋಗಿದ್ದಾರೆ ಎಂದು ಸಾಬೀತಾದರೆ ಅವರು ಹಿಂದಿರುಗಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮತ್ತು ಅಂತವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಮೂರು ವರ್ಷಗಳವರೆಗೆ ಪ್ರಯಾಣದಿಂದ ನಿಷೇಧಿಸಲಾಗುವುದು.

ಬ್ರೆಜಿಲ್, ಈಜಿಪ್ಟ್,  ಭಾರತ, ಇಂಡೋನೇಷ್ಯಾ, ಲೆಬನಾನ್, ಪಾಕಿಸ್ತಾನ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಇಥಿಯೋಪಿಯಾ, ಟರ್ಕಿ, ಅರ್ಜೆಂಟೀನಾ, ವಿಯೆಟ್ನಾಂ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣಿಸಲು ಅಥವಾ ಸಾಗಲು ಸೌದಿ ಅರೇಬಿಯಾ ನಿಷೇಧಿಸಿದೆ.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button